ಪುಟ:ಭವತೀ ಕಾತ್ಯಾಯನೀ.djvu/೩೦

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪ್ರಕಟಿಸಲಾಗಿದೆ


23

ತನ್ನೊಳಗೆ-- “ ಇದೇನಾಶ್ಚರ್ಯವು ! ಕುರಿಯ ಹಿಂಡಿನಲ್ಲಿ ಸಿಂಹದ ಮರಿಯೇ ! ಈ ಮರಿಯು ಜಪ್ಪು ಹಾಕಿ ಕುರಿಗಳನ್ನು ಹಿಡಿಯುತ್ತದೆನ್ನಬೇಕೆಂದರೆ ಹಾಗೇನು ಕಾಣು ವದಿಲ್ಲ ! ಕುರಿಗಳನ್ನು ಹಿಡಿಯುವದಂತು ಇರಲಿ , ತಾನೂ ಕುರಿಗಳಂತೆ "ಬೇ ಬೇ ಬೇ ” ಎಂದು ಒದರುತ್ತದಲ್ಲ ಎಂದು ಅಂದುಕೊಂಡು, ಬಹಳ ಅಸಮಾಧಾನಪಟ್ಟಿತು. ಅದು ಸಿಂಹದಮರಿಗೆ ಎರಡು ಮಾತು ಹೇಳಿನೋಡಬೇಕೆಂದು ಮುಂದಕ್ಕೆ ಬರಲು , ಅದನ್ನು ನೋಡಿ ಕುರಿಗಳೆಲ್ಲ ದೆಸೆಗೆಟ್ಟು ಓಡತೊಡಗಿದವು. ಅವುಗಳ ಸಂಗಡ ಸಿಂಹದ ಮರಿಯ ಓಡತೊಡಗಿತು.

ಕಾತ್ಯಾಯನಿ (ಆತುರದಿಂದ) -- ಅಯ್ಯೋ ! ಎಂಥ ದುರ್ದೈವಿಯದು ! ತನ್ನನ್ನು

ಎಚ್ಚರಗೊಳಿಸಿ ಹಿತಮಾಡಬಂದ ಸಿಂಹನನ್ನು ತಿಳಿಯದೆ ಹೋಯಿತಲ್ಲ , ಮುಂದೆ ಗತಿಯೇನು ?

ಮೈತ್ರೇಯಿ -- ಸಖೀ , ಸ್ವಲ್ಪ ಸಮಾಧಾನತಾಳಿ ಕಥೆಯನ್ನು ಪೂರ್ಣವಾಗಿ

ಯಾದರೂ ಕೇಳು. ಸ್ವಜಾತಿಯ ಪ್ರಾಣಿಯು ಸ್ವಜಾತಿಯ ಪ್ರಾಣಿಗೆ ಬೆನ್ನು ತೋರಿಸಿ ಓಡಿಹೋಗುವದನ್ನು ನೋಡಿ ಸಿಂಹವು ಬಹಳ ವ್ಯಸನಪಟ್ಟಿತು. "ಇದಕ್ಕೆ ಮೂಲ ಸ್ವರೂಪದ ವಿಸ್ಕೃತಿಯು ಇನ್ನು ಯಾಕಾಗಿರಬಹುದೆಂ"ಬದರ ಗೊತ್ತು ಆ ಸಿಂಹಕ್ಕೆ ಆಗಲೊಲ್ಲದು . "ಈಗ ಓಡಿಹೋಗಲಿ, ಇನ್ನೊಮ್ಮೆ ಇದನ್ನು ಏಕಾಂತದಲ್ಲಿ ಕಂಡು ಎಚ್ಚರಗೊಳಿಸೋಣ , ” ಎಂದು ಯೋಚಿಸಿ ಸಿಂಹವು ಅದನ್ನು ಆಗ ಸುಮ್ಮನೆ ಹೋಗ ಗೊಟ್ಟಿತು. ಮುಂದೆ ಹೊತ್ತು ಸಾಧಿಸಿ ಆ ಮರಿಯು ಒಂದೇ ಇದ್ದಾಗ ಅದಕ್ಕೆ ಸಿಂಹವು ಗಂಟುಬಿದ್ದಿತು . ಏಕಾಂತದಲ್ಲಿ ಆ ಭಯಂಕರ ಸಿಂಹವನ್ನು ನೋಡಿ ಸಿಂಹದ ಮರಿಯು ಗಡಗಡನೆ ನಡುಗಹತ್ತಿತು , ಅದು "ಬೇ ಬೇ” ಎಂದು ಒದರುತ್ತ ದೀನ ವಾಣಿಯಿಂದ ಸಿಂಹನನ್ನು ಕುರಿತು -=“ಮಹಾರಾಜ , ನೀವು ದೊಡ್ಡವರು , ಉದಾರ ಸ್ವಭಾವದವರು ; ನಾನೊಂದು ಕ್ಷುದ್ರ ಕುರಿಯವರಿಯು; ನನ್ನಂಥವನನ್ನು ಕೊಲ್ಲು ವದರಿಂದ ನಿಮಗಾಗುವ ಲಾಭವೇನು ? ಎಂದು ನುಡಿಯಲು, ಅದನ್ನು ಕೇಳಿ ಸಿಂಹಕ್ಕ ಬಹಳ ವ್ಯಸನವಾಯಿತು. ಅದು ಮರಿಗೆ-- "ತಮ್ಮಾ, ನಾನು ದೊಡ್ಡವನು , ನೀನು ಸಣ್ಣವನು ; ಶಕ್ತಿಯ ಮಾನದಿಂನ ನನಗಿಂತ ನೀನು ದುರ್ಬಲನೆಂದು ಹೇಳಬ ಹುದು ; ಆದರೆ ನಾನು ಸಿಂಹನೇ ಅಲ್ಲ , ಹೊಲಸುಜಾತಿಯ ಕುರಿಮರಿಯಿರುತ್ತೇನೆಂಬ ತಿಳುವಳಿಕೆಯು ನಿನಗೆ ಹ್ಯಾಗೆ ಆಯಿತು” ಎಂದು ಪ್ರಶ್ನೆ ಮಾಡಿತು. ಅದಕ್ಕೆ ಮರಿಯು- ಮಹಾರಾಜ , ಮೂಲತಃ ನಮ್ಮ ಜಾತಿಯೇ ಕುರಿಯದು , ಅಂದಬಳಿಕ ನಾನು ಕುರಿಯ ಮರಿಯೆಂದು ಹೇಳದೆ ಏನುಮಾಡಲಿ ? ನಾವು ಹೊಲಸು ಜಾತಿಯವರೆಂಬದು ನಿಜವು . ಅಂತೇ ನನ್ನನ್ನು ಬಿಟ್ಟುಬಿಡಬೇಕೆಂದು ನಿಮ್ಮನ್ನು ಪ್ರಾರ್ಥಿಸುವೆನು , ಎಂದು ಉತ್ತರ ಕೊಟ್ಟಿತು , ಕಾತ್ಯಾಯನೀ , ಇನ್ನು ಮುಂದೆ ಆದ ಅವುಗಳ ಸಂಭಾಷಣವನ್ನು ಲಕ್ಷ ಗೊಟ್ಟು ಕೇಳು; ಯಾಕಂದರೆ , ಯಾರಾದರೊಬ್ಬರು ತಾವು ಕೆಲಸಕ್ಕೆ ಬಾರದವರು, ತಮ್ಮ ಯೋಗ್ಯತೆಯು ಹೀನವಾದದ್ದು, ನಾವು ಹೀಗೆಯೇ ಇರತಕ್ಕವರು, ಅಂಥವ