ಪುಟ:ಭವತೀ ಕಾತ್ಯಾಯನೀ.djvu/೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

39

ದೇಹವು ಕೂಡ ನನ್ನದಲ್ಲವೆಂದು ಭಾವಿಸಬೇಕು. ಇದಕ್ಕೇ ಋಷಿಗಳು ತ್ಯಾಗವೆನ್ನು ವರು. ದೇಹಬುದ್ದಿಯವರಿಗೆ ಈ ತ್ಯಾಗವು ದುಷ್ಕರವಾಗಿರುವದು. ಯಾವತ್ತು ವಿಷಯಜಾತವನ್ನು ವಮನದಂತೆ ತಿಳಿಯುವವರಿಗೇ ವೈರಾಗ್ಯವು ಪ್ರಾಪ ವಾಗುವದು. ವಿರಾಗಿಯೇ ಮೋಕ್ಷಾಧಿಕಾರಿಯು. ಆತ್ಮನು ಸರ್ವತ್ರವ್ಯಾಪಕನಾಗಿದ್ದು, ಸ್ತ್ರೀ-ಪುತ್ರಾದಿ ಗಳಿಗಿಂತ ಆತನು ಅತ್ಯಂತಪ್ರಿಯನಾಗಿರುವನು. ಪತಿ-ಪುತ್ರಾದಿಗಳನ್ನು ಪ್ರೀತಿಸು ವದು ಅವರಸಲುವಾಗಿಯಲ್ಲ, ತನ್ನ ಸಲುವಾಗಿ ! ಇದೇಮಾತು ಶರೀರ, ಪಶು, ದೇವ ತೆಗಳು, ಎಲ್ಲಪ್ರಾಣಿಜಾತಗಳು ಇವುಗಳ ವಿಷಯದ ಪ್ರೇಮಭಕ್ತಿಗಳಿಗೂ ಸಂಬಂಧಿ ಸುವದು; ಆದರೂ ಆತ್ಮನು ಅಭೇದ್ಯನೆಂದು ನಿಃಸಂಶಯದಿಂದ ತಿಳಿಯಲಿಕ್ಕೆ ಈಪತಿ-ಪುತ್ರಾ ದಿಕರೇ ಸಾಧನಗಳಾಗಿರುವರು. ಸಮುದ್ರವು ಯಾವತ್ತು, ಜಲಗಳ . ಆಧಾರವಾಗಿ ರುವಂತೆ ಆತ್ಮನು ಯಾವತ್ತು ಜಗತ್ತಿನ ಆಧಾರವಾಗಿರುವನು.

ಬ್ರಹ್ಮದೇವನಿಂದ ಕ್ರಿಮಿಕೀಟಕಾದಿ ಕ್ಷುದ್ರಜೀವಿಗಳವರೆಗೆ ಒಬ್ಬನೇ ಆತ್ಮನು

ವ್ಯಾಪಕನಾಗಿರುವನೆಂಬ ಅನುಭವವನ್ನು ಪಡೆಯುವದೇ ಜ್ಞಾನವು. ಹಸಿಕಟ್ಟಗೆಯು ಸುಡುವಾಗ ಬೆಂಕಿ-ಹೊಗೆಗಳು ಬೇರೆಬೇರೆಯಾಗಿ ಕಾಣಿಸುವಂತೆ, ಆತ್ಮನು ಸಂಕಲ್ಪ ಯುಕ್ತನಾದರೆ ಈ ಜಗತ್ತು ಭಿನ್ನವಾಗಿ ತೋರುವರು. ಸುಮಂಗಲೆಯರೇ , ಅಜ್ಞಾನ ಮೂಲವಾದ ದೈವತವು ದುಃಖಕ್ಕೆ ಕಾರಣವು . ನಿಮಗೆ ದ್ವೈತದ ಭಾಸವಾಗಲಿಕ್ಕೆ ನಿಮ್ಮ ಸಂಕಲ್ಪವೇ ಕಾರಣವು. ನೀವು ಸಂಕಲ್ಪಾತೀತರಾದರೆ ಆತ್ಮನಸ್ವರೂಪರೇ ಇರುವೆವೆಂಬ ಅನುಭವವು ನಿಮಗೆ ಆಗುವದು; ಆದ್ದರಿಂದ ಯಾವತ್ತು ಸಂಕಲ್ಪಗಳ ನಿರೋಧಮಾಡಿ, ನಾವೇ ಆತ್ಮಸ್ವರೂಪರೆಂಬ ಅಖಂಡಭಾವನೆಯನ್ನು ಹೃದಯದಲ್ಲಿ ಧಾರಣಮಾಡಿರಿ; ಅಂದರೆ ಆಯುಷ್ಯವಿರುವವರೆಗೆ ಜೀವನ್ಮುಕ್ತಿದಶೆಯು ಪ್ರಾಪ್ತವಾಗಿ ಕಡೆಗೆ ಆತ್ಮಸ್ವರೂ ಪದಲ್ಲಿ ನೀವು ಕೂಡಿಹೋಗುವಿರಿ. ಸ್ವಪ್ನಕ್ಕೆ ಸಂಕಲ್ಪವು ಕಾರಣವಾಗಿರುವಂತೆ, ಜಾಗ್ರತಿಗೂ ಸಂಕಲ್ಪವೇ ಕಾರಣವಾಗಿರುವದು. ಸ್ವಪ್ನದಲ್ಲಿ ಸಂಕಲ್ಪದನಾಶವಾದ ಕೂಡಲೆ ಗಾಢನಿದ್ರೆಯೂ ಹತ್ತುವಂತೆ, ಜಾಗ್ರತಿಯಲ್ಲಿ ಸಂಕಲ್ಪದ ನಾಶವಾದರೆ ಸಮೃದ್ಧಿಯು ಲಭಿಸುವದು. ಆತ್ಮನು ಸಂಗರಹಿತನಾಗಿದ್ದು ಎಲ್ಲವನ್ನು ನೋಡು ವನು ; ಆದರೆ ಆತ್ಮನನ್ನು ಮಾತ್ರ ಯಾರೂ ನೋಡಲಾರರು. ಆತ್ಮನು ಅವಸ್ಥಾಶ್ರಯದಲ್ಲಿಯೂ ಸಾಕ್ಷೀಭೂತನಾಗಿದ್ದು, ಸ್ವಯಂಪ್ರಕಾಶಕನಾಗಿರುವನು. ಈ ಆತ್ಮನೇ ಅಜ್ಞಾನಾವೇಷ್ಟಿತನಾಗಿ ನಾನು ಕರ್ತವ್ಯವೆಂದು ಭಾವಿಸಿ ಬದ್ಧನಾಗುವನು. ಅದೇ ಆತ್ಮನೇ ತಾನು ಅಸಂಗನೂ, ಅಕರ್ತೃವೂ ಎಂದು ತಿಳಿದರೆ ಮುಕ್ತನಾಗುವನು, ಕನ್ನಡಿಯಲ್ಲಿ ಪ್ರತಿಬಿಂಬಿಸಿರುವ ತನ್ನ ಸ್ವರೂಪವನ್ನೆ ಬಾಲಕನು ಭಿನ್ನವಾಗಿ ಕಲ್ಪಿಸುವಂತೆ, ಮಾಯಾಮ್ಮೊಹಿತನಾದ ಆತ್ಮನು ವಿಷಯಗಳನ್ನು ತನ್ನಿಂದ ಭಿನ್ನವಾಗಿ ಕಲ್ಪಿಸುವನು. ಸುಮಂಗಲೇಯರೇ, ನೀವು ಶಾಂತವೃತ್ತಿಯವರಾಗಿ ಆತ್ಮನಹೊರತು ಬೇರೆಯಾವದರ ವಿಚಾರವನ್ನು ಮಾಡದೆ ಜೀವನ್ಮುಕ್ತರಾಗಿ ಪ್ರಾರಬ್ದಕ್ಷಯವಾಗು ವರೆಗೆ ಸುಖಿಗಳಾಗಿ ಇರ್ರಿ, ಈ ಆತ್ಮಶೋಧಕ್ಕಾಗಿಯೇ ಎಷ್ಟೋಜನರು ಸರ್ವಸಂಗ