ಪರಿತ್ಯಾಗಮಾಡಿ ಭಿಕ್ಷಾವೃತ್ತಿಯಿಂದ ತಿರುಗುತ್ತಿರುವರು ; ಆದ್ದರಿಂದ ನೀವು ನಿರಿಚ್ಛರಾಗಿ ಆತ್ಮನಿಷ್ಠರಾಗಿರಿ. ಮಾಡಿದಕರ್ಮಗಳನ್ನು ಸ್ಮರಿಸಬೇಡಿರಿ. ಪ್ರಾರಬ್ಧಾನು ಸಾರವಾಗಿ ಮಾಡಬೇಕಾದ ಕರ್ಮಗಳನ್ನು ನೀವು ಅನಾಸಕ್ತರಾಗಿ ಮಾಡಿರಿ; ಆದರೆ ಕರ್ತೃತ್ಯದ ಅಹಂಕಾರಕ್ಕೆ , ಹೃದಯದಲ್ಲಿ ಸರ್ವಥಾ ಆಸ್ಪದಕೊಡಬೇಡಿರಿ. ಒಬ್ಬ ನೊಬ್ಬ ಹುಡುಗನು ಅಹಂಕಾರರಹಿತವಾಗಿ ಕರ್ಮಮಾಡುತ್ತಿರುವಂತೆ ನೀವು ಕರ್ಮ ಮಾಡಿ ಮುಕ್ತರಾಗಿರಿ, ಎಷ್ಟು ಹೇಳಿದರೂ ಅಪ್ಟೇ, ಪ್ರಿ ಯ ತ ಮೆ ಯ ರೇ, ಸದ್ಗುರುವಿಗೆ ಶರಣುಹೋಗಿ, ಆತನನು, ಏಕನಿಷ್ಠೆಯಿಂದ ಸೇವಿಸಿ ಆತನ ಅನುಗ್ರಹ ಸಂಪಾದಿಸದಹೊರತು ಮೋಕ್ಷವು ಸಾಧಿಸದು. ನೀವು ಪರಮ ಧನ್ಯರಾದ್ದರಿಂದಲೇ ಪತಿ ರೂಪ ಸದ್ಗುರುವನ್ನು ಸೆ:ವಿಸಿ, ಆತನ ಅನುಗ್ರಹಕ್ಕೆ ಪಾತ್ರರಾಗುವಿರಿ !
ಈಮೇರೆಗೆ ಬೋಧಿಸಿ ಯೋಗೀಶ್ವರರಾದ ಶ್ರೀ ಯಾಜ್ಞವಲ್ಕ್ಯೆ ರು ಸನ್ಯಾಸ
ಗ್ರಹಣ ಮಾಡಿದರು. ಏಕನಿಷ್ಠೆಯಿಂದ ತಮ್ಮನ್ನು ಸ್ಮರಿಸುವವರನ್ನು ಉದ್ಧರಿಸುವದ ಕ್ಕಾಗಿ ಆ ಮಹಾತ್ಮರು ಈಗಲೂ ಭೂತಲದಲ್ಲಿ ವಾಸಿಸುತ್ತಿರುವರು. ಇಹ-ಪರ ಸೌಖ್ಯಸಾ ಧಕವಾದ ಈ ಭಗವತೀಕಾತ್ಯಾಯನಿಯ ಸವ್ರಸಪೂರ್ಣ ಚಾರಿತ್ರ್ಯವನ್ನು ಓದುವವರ, ಹಾಗು ಕೇಳುವವರ ಇಷ್ಟಾರ್ಥಗಳು ಸಾಧಿಸುವವು. ಈ ಅಲ್ಬಗ್ರಂಥರೂಪ ಪುಷ್ಪಾಂಜಲಿ ಯನ್ನು ನಮ್ಮ ಪೂಜ್ಯ, ಮಾತೃವರ್ಗಕ್ಕೂ, ಪ್ರಿಯ ಭಗಿನೀವರ್ಗಕ್ಕೂ ಅರ್ಪಿಸಿ, ಅವರ ಇಷ್ಟಾರ್ಥಗಳನ್ನು ಪೂರ್ಣಮಾಡುವದಕ್ಕಾಗಿ ಶ್ರೀ ಕಾತ್ಯಾಯನೀ-ಯಾಜ್ಞವಲ್ಕ್ಯರನ್ನು ಪ್ರಾರ್ಥಿಸುವೆವು ! ! ||ಓಂ ಶಾಂತಿಃ ಶಾಂತಿಃ ಶಾಂತಿ..!!