ಪುಟ:ಭವತೀ ಕಾತ್ಯಾಯನೀ.djvu/೫೬

ವಿಕಿಸೋರ್ಸ್ದಿಂದ
Jump to navigation Jump to search
ಈ ಪುಟವನ್ನು ಪ್ರಕಟಿಸಲಾಗಿದೆ
__೭__

ತಿಳಿಯಬೇಕು. ಮುಖ್ಯವಾಗಿ ಕೆಲಸಮಾಡುವದು ಮನವೇ ಇರುವದು . ಈರೀತಿ ಯಾಗಿ ಸುಷುಪ್ತಿಯನ್ನುಬಿಟ್ಟು ಉಳಿದಅವಸ್ಥೆಗಳಲ್ಲಿ ಉದ್ಯೋಗಮಾಡುವದು ಮನಸ್ಸಿನ ಹೊರತು ಯಾವದೂ ಇಲ್ಲ. ಕೆಲಸಮಾಡುವ ವಿಷಯದಲ್ಲಿ ಮನಕ್ಕೆ ಬೇಸರವೇ ಇಲ್ಲ. ಇಪ್ಪತ್ತುನಾಲ್ಕು ತಾಸುಗಳುಳ್ಳ ದಿವಸದಲ್ಲಿ ಒಂದುತಾಸು ಹೊತ್ತು ಸುಷುಪ್ತಿಯಾದರೆ ಬಹಳ. ಒಂದೊಂದುದಿವಸ ಸುಷುಪ್ತಿಯೇ ಬರುವದಿಲ್ಲ. ಬರೇ ಸ್ವಪ್ನ , ಅಥವಾ ಜಾಗ್ರತ್ ಈ ಅವಸ್ಥೆಯಲ್ಲಿಯೇ.ಕಾಲವು ಕ್ರಮಿಸಿಹೋಗುತ್ತದೆ. ಸುಷುಪ್ತಿಯಲ್ಲಿ ಜೀವಾತ್ಮನು ಪರಮಾತ್ಮನಹತ್ತರ ಹೋಗಿರುತ್ತಾನೆ. ಆಗ ಆತನಿಗೂ ಈತನಿಗೂ ಸಂಬಂಧವಾದ್ದರಿಂದ , ಇಂದ್ರಿಯಗಳು ಮತ್ತು ಮನವು ಇವೆರಡೂ ವ್ಯಾಪಾರಶೂನ್ಯಗಳಾ ಗಿರುತ್ತವೆ. ಆಗ ಸುಖ-ದುಃಖಗಳಿಗೆ ಜನಕವಾಗಿರುವ ವಿಷಯಗಳಸಂಬಂಧವೇ ಮನಕ್ಕೆ ಆಗುವದಿಲ್ಲ. ಜೀವನಿಗೆ ಮನಸ್ಸಿನದ್ವಾರದಿಂದಲೇ ಸುಖ-ದುಃಖಗಳ ಜ್ಞಾನವಾಗತ ಕ್ಕದ್ದು. ಅಂಥವನವೇ ವ್ಯಾಪಾರಶೂನ್ಯವಾಗಿರುವಾಗ ಜೀವನಿಗೆ ವ್ಯವಹಾರದ ಸುಖ- ದುಃಖಗಳ ಸಂಬಂಧವೇ ಆಗುವದಿಲ್ಲ. ಇದೊಂದು ಅವಸ್ಥೆಯಹೊರತು ಉಳಿದ ಜಾಗ್ರ ದವಸ್ಥೆ, ಸ್ವಪ್ನಾವಸ್ಥೆಗಳಲ್ಲಿ ಮನಸ್ಸು ಯಾವದೊಂದು ಉದ್ಯೋಗ ಮಾಡುತ್ತಲೇ ಇರುತ್ತದೆ. ಜಾಗೃದವಸ್ಥೆಯಲ್ಲಿ ಅದು ಮುಖ್ಯವಾಗಿ ಇಂದ್ರಿಯಗಳನ್ನು ಕಟ್ಟಿಕೊಂಡು ಕೆಲಸಮಾಡುವದು- ಸ್ವಪ್ನಾವಸ್ಥೆಯಲ್ಲಿ ಮುಖ್ಯವಾಗಿ ತಾನೊಂದೇ ಕೆಲಸಮಾಡು ವದು ; ಅಂದಬಳಿಕ ಇದರ ಉದ್ಯೋಗತತ್ಪರತೆಯು ಎಷ್ಟೆಂಬುದನ್ನು ವಾಚಕರು ತರ್ಕಿಸಬಹುದು.

_____ _____

೨ ನೆಯ ಪ್ರಕರಣ- ಇ೦ದಿ ಯಗಳು.

__________೦ ೦_________

-बलवानिंदियग्रामो विद्वांस मपिकर्षति. [श्रीमद्भागवत

" ಇದಿ, ಪರಮೈಶ್ವರ್ಯೇ ”ಎಂಬ 'ಇದಿ' ಧಾತುವಿನಿಂದ ಸಿದ್ದವಾದ ಇಂದ್ರಿಯ

ಶಬ್ದವು ಇಂದ್ರಿಯಗಳ ಪರಮಸಾಮರ್ಥ್ಯವನ್ನು ತೋರಿಸುತ್ತದೆ. ವಿಚಿತ್ರಸಾಮರ್ಥ್ಯವುಳ್ಳ ಈ ಇಂದ್ರಿಯಗಳು ಮನಸ್ಸಿಗೆ ಸಹಾಯಭೂತಗಳಾಗಿರುತ್ತವೆ. ಮನಸ್ಸಿಗೆ ಇವುಗಳಸಹಾ ಯದ ಹೊರತು ಯಾವ ಪದಾರ್ಥಗಳ ಜ್ಞಾನವೂ ಆಗುವದಿಲ್ಲ. ಮನಸ್ಸೆಂಬದೊಂದು ರಾಜನೆಂದು ಕಲ್ಪಿಸಿ, ಇಂದ್ರಿಯಗಳು ಅವನ ಪರಿಚಾರಕರೆಂದು ಕಲ್ಪಿಸಬಹುದು. ರಾಜನಿಗೆ ಪರಿಚಾರಕರು ಜ್ಞಾನವನ್ನುಂಟುಮಾಡಿದಂತೆ ಇಂದ್ರಿಯಗಳು ಮನಸ್ಸಿಗೆ ಪದಾರ್ಥ ಜ್ಞಾನವನ್ನು ಮಾಡಿಕೊಡುತ್ತವೆ. ಈ ಪದಾರ್ಥಜ್ಞಾನ ಮಾಡಿಕೊಡುವ ಇಂದ್ರಿಯಗಳು ಜ್ಞಾನೇಂದ್ರಿಯಗಳೆಂದು ಹೇಳಲ್ಪಡುವವು. ಇವಲ್ಲದೆ ಕರ್ಮೇಂದ್ರಿಯಗಳು ಬೇರೆ ಇರು ವವು. ಜ್ಞಾನೇಂದ್ರಿಯಗಳು ಮನಸ್ಸಿಗೆ ಜ್ಞಾನವನ್ನು ಸಂಪಾದಿಸಿಕೊಟ್ಟಮೇಲೆ ಮನಸ್ಸು ಕಾರ್ಯ ಕಾರ್ಯ ವಿವೇಚನವನ್ನು ಮಾಡಿ ಕರ್ತವ್ಯದ ವಿಷಯವಾಗಿ ಆಜ್ಞಾಪಿಸಿದ