ಪುಟ:ಭವತೀ ಕಾತ್ಯಾಯನೀ.djvu/೫೭

ವಿಕಿಸೋರ್ಸ್ದಿಂದ
Jump to navigation Jump to search
ಈ ಪುಟವನ್ನು ಪ್ರಕಟಿಸಲಾಗಿದೆ
___೮___

ಕೂಡಲೆ ಕರ್ಮಭೂಡಲಿಕ್ಕೆ ಮುಂದುವರಿಯುವ ಇಂದ್ರಿಯಗಳು ಕರ್ಮೇಂದ್ರಿಯಗಳು. ಜ್ಞಾನೇಂದ್ರಿಯಗಳು ಐದು ಕರ್ಮೇಂದ್ರಿಯಗಳು ಐದು. ಹೀಗೆ ಒಟ್ಟು ಹತ್ತು ಇಂದ್ರಿಯ ಗಳು ಮನಸ್ಸಿನ ಕಿಂಕರರಾಗಿ ಈ ದೇಹದಲ್ಲಿರುತ್ತವೆ.

ಜ್ಞಾನೇಂದ್ರಿಯಗಳು ನೇತ್ರ, ಶ್ರೋತ್ರ, ಪ್ರಾಣ, ಜಿಹ್ವಾ, ಚರ್ಮವೆಂಬವು.

ಇವುಗಳಲ್ಲಿ ಮಾದಲನೆಯ ನೇತ್ರವೆಂಬ ಇಂದ್ರಿಯವು ರೂಪವೆಂಬ ವಿಷಯವನ್ನು ಹಿಡಿಯು ತ್ತದೆ, ಇದಕ್ಕೆ ಇದೊಂದೇ ಕೆಲಸವು, ಮತ್ತೊಂದು ವಿಷಯದಪರಿಜ್ಞಾನವು ಇದಕ್ಕೆ ಆಗು ವದಿಲ್ಲ, ಮತ್ತು ಈ ಇಂದ್ರಿಯವು ಕಣ್ಣಗುಡ್ಡಿಯಿಂದ ಹೊರಬಿದ್ದು, ತನಗೆ ವಿಷಯವಾದ ರೂಪವಿದ್ದಲ್ಲಿ ಹೋಗಿ ಆ ರೂಪವನ್ನು ಗ್ರಹಿಸುತ್ತದೆ. ಈ ಇಂದ್ರಿಯವು ತೇಜೋಮಯ ವಾದದ್ದ‌‌ರಿಂದ ಇದರ ಗತಿಯು ಬಹು ತೀವ್ರವಿರುತ್ತದೆ. ಆದ್ದರಿಂದ ಕಣ್ದೆರದಕೂಡಲೆ ರೂಪವೇ ಗೋಚರವಾಗುತ್ತದೆ. ಆದರೆ ಇದು ಹೊರಬಿದ್ದು ರೂಪವಿಧ್ದಲ್ಲಿ ಹೋಗಿ ಅದನ್ನುಹಿಡಿದದ್ದು ಸಹಸಾ ಮನಸ್ಸಿನ ಕಲ್ಪನೆಯಲ್ಲಿಯೇ ಬರುವದಿಲ್ಲ. ಈ ನೇತ್ರೇಂ ದ್ರಿಯಕ್ಕೆ “ಗತ್ಯಾಗ್ರಾಹಿ"ಎಂದು ಹೆಸರು ಇರುವದು. ಉಳಿದನಾಲ್ಕು ಜ್ಞಾನೇಂದ್ರಿಯ ಗಳು ತಾವು ಇದ್ದಲ್ಲಿಯೇ ಇದ್ದು, ತಮ್ಮ ಹತ್ತರ ವಿಷಯಗಳುಬಂದಾಗ ಅವನ್ನು ಹಿಡಿ ಯತಕ್ಕವು; ವಿಷಯಗಳಿದ್ದಸ್ಧಾನಕ್ಕೆ ಇವು ಹೋಗುವವಲ್ಲ. ಆದ್ದರಿಂದ ಇವಕ್ಕೆ " ಸ್ಧಿತ್ವಾಗ್ರಾಹಿ"ಗಳೆಂದುಹೆಸರು. ಪೃಥಿವೀ-ಜಲ-ತೇಜ-ವಾಯು-ಆಕಾಶಗಳೆಂದು ಪಂಚ ಭೂತಗಳುಂಟು. ಇವೇ ಪಂಚಭೂತಗಳಿಂದ ಪರಮೇಶ್ವರನು ನಮ್ಮ ದೇಹವನ್ನು ನಿರ್ಮಿ ಸಿದ್ದರಿಂದ, ನಮ್ಮ ದೇಹವು ಪಾಂಚಭೌತಿಕವೆಂದು 'ಹೇಳಲ್ಪಡುವದು. ಈ ಪಂಚಭೂತ ಗಳೊಳಗೆ ಒಂದೊಂದು ಜ್ಞಾನೇಂದ್ರಿಯವು ಒಂದೊಂದು ಭೂತಕ್ಕೆ ಸಂಬಂಧಪಟ್ಟಿರುತ್ತದೆ ಅದು ಹೇಗಂದರೆ-ನೇತ್ರಂದ್ರಿಯವು ತೇಜೋಮಯವಾದದ್ದರಿಂದ ತೇಜವೆಂಬ ಭೂತಕ್ಕೆ ಸಂಬಂಧಿಸುತ್ತದೆ. ಶ್ರೋತ್ರೇಂದ್ರಿಯವು ಆಕಾಶವೆಂಬ ಭೂತಕ್ಕೆ ಸಂಬಂಧಿಸುವದು. ಫ್ಯಾಣವೆಂಬ ಇಂದ್ರಿಯವು, ಪೃಥಿವೀಯೆಂಬ ಭೂತಕ್ಕೆ ಸಂಬಂಧಿಸುವದು, ಚಿಹ್ನೆಯೆಂಬ ಇಂದ್ರಿಯವು ಜಲವೆಂಬಭೂತಕ್ಕೆ ಸಂಬಂಧಿಸುವದು ಚರ್ಮವೆಂಬ ಇಂದ್ರಿಯವು ವಾಯು ಎಂಬಭೂತಕ್ಕೆ ಸಂಬಂಧಿಸುತ್ತದೆ. ಈರೀತಿಯಾಗಿ ಐದೂ ಇಂದ್ರಿಯಗಳು ತಮ್ಮ ತಮ್ಮ ಭೂತಗಳೆನಿಸುವ ಪೃಥಿವೀ ಮುಂತಾದವುಗಳ ಗುಣಗಳನ್ನು, ಅಂದರೆ ರೂಪಮುಂತಾದ ಗುಣಗಳನ್ನು ಗ್ರಹಿಸಿ ಅವುಗಳಜ್ಞಾನವನ್ನು ಮನಸ್ಸಿಗೆ ಮಾಡಿಕೊಡುತ್ತವೆ. ಮನ ಸ್ಸಾದರೂ ಅವುಗಳಲ್ಲಿ ತನಗೆ ಬೇಕಾದದ್ದನ್ನು; ಬೇಡಾದದ್ದನ್ನು ನಿರ್ಣಯಿಸಿಕೊಂಡು, ಸಂಪಾದಿಸುವದಕ್ಕೂ, ಬಿಡುವದಕ್ಕೂ ಆಜ್ಞಾಪಿಸುವದು. ಆಮೇಲೆ ಕರ್ಮೇಂದ್ರಿ `ಯಗಳು, ಅಂದರೆ ವಾಕ್-ಪಾಣೆ-ಪಾದ-ಪಾಯು-ಉಪಸ್ಥ-ಎಂಬವು ಕೆಲಸಮಾಡಹತ್ತು ತ್ತವೆ. ವಾಗಿಂದ್ರಿಯವು ಆಹ್ವಾನ-ನಿಷೇಧಗಳೆಂಬ ಕೆಲಸಗಳನ್ನೂ, ಪಾಣಿ (ಕೈ) ಎಂಬಇಂದ್ರಿಯವು ಹಾನೋಪಾದಾನ, ಭರ್ತೃನ, ತಾಡನ ಮುಂತಾದ ಕೆಲಸಗಳನ್ನೂ, ಪಾದ (ಕಾಲು) ಎಂಬಇಂದ್ರಿಯವು ಗಮನಾಗಮನಗಳೆಂಬ ಕೆಲಸಗಳನ್ನೂ, ಪಾಯು (ಅಪಾನ) ಎಂಬಇಂದ್ರಿಯವು ಮಲವಿಸರ್ಜನದ ಕೆಲಸವನ್ನೂ, ಉಪಸ್ಥ (ಜನನೇಂದ್ರಿಯ)