ಪುಟ:ಭವತೀ ಕಾತ್ಯಾಯನೀ.djvu/೬೮

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪ್ರಕಟಿಸಲಾಗಿದೆ
-೧೯-

೩ ರಸನೇಂದ್ರಿಯದ ವಿಷಯಗಳಾದ ಗಂಧಗಳು- ದೇವರಲ್ಲಿ ಅರ್ಪಿಸಿ ಪ್ರಸಾದ

ರೂಪವಾಗಿ ತಕ್ಕೊಂಡ ಪುಷ್ಪ ಮುಂತಾದ ಪದಾರ್ಥಗಳಲ್ಲಿಯ ಸುಗಂಧವು ಸಾತ್ವಿಕವು. ಸ್ತ್ರೀಯರು ತಲೆಯಲ್ಲಿ ಮುಡಿದ ಪುಷ್ಪಗಂಧವು ರಾಜಸವು. ಮದಜನಕವಾದ ಮದ್ಯ ಮುಂತಾದ ವಸ್ತುಗಳ ಗಂಧವು ತಾಮಸವು.

೪ ಸ್ಪರ್ಶೇಂದ್ರಿಯದ ವಿಷಯಗಳಾದ ಸ್ಪರ್ಶಗಳು.ಗೋ ಮುಂತಾದ ಸಾತ್ವಿಕ.

ವಸ್ತುಗಳ ಸ್ಪರ್ಶವು ಸಾತ್ವಿಕವು, ಸ್ತ್ರೀ ಮುಂತಾದ ವಸ್ತುಗಳ ಸ್ಪರ್ಶವು ರಾಜಸವು, ಮದ್ಯ ಮುಂತಾದ ಮಾದಕವಸ್ತುಗಳ ಸ್ಪರ್ಶವು ತಾಮಸವು.

೫ ಶೋತ್ರೇಂದ್ರಿಯದ ವಿಷಯಗಳಾದ ಶ್ರವಣಗಳು- ಶ್ರುತಿ-ಸ್ಮೃತಿ-ಪುರಾಣ

ಇತಿಹಾಸಗಳೂ, ಸತ್ಪುರುಷರ ಚರಿತ್ರೆಗಳೂ, ಸತ್ಪುರುಷರ ಬೋಧಪ್ರದ ಉಪದೇಶ ವಾಕ್ಯಗಳೂ, ಸಾತ್ವಿಕಗಳು. ಕೇವಲ ಕಾಮಜನಕವಾದ ಸ್ತ್ರೀ-ಪ್ರರುಷರ ಸಂಸರ್ಗದ ಪ್ರಸಂಗಗಳ ವರ್ಣನಗಳು ರಾಜಸಗಳು. ಮದಜನಕ ವಸ್ತುಗಳ ವರ್ಣನಗಳು ತಾಮಸಗಳು.

ಇವನ್ನೆಲ್ಲ ವಿಚಾರಿಸಿಕೊಂಡು ಸೂಕ್ಷ್ಮರೀತಿಯಾಗಿ ನಮ್ಮಲ್ಲಿ ಸತ್ವಾಭಿವೃದ್ಧಯಾಗು

ವಂತೆ ಯತ ಮಾಡತಕ್ಕದು ನಮ್ಮ ಪವಿತ್ರ ಕರ್ತವ್ಯವಾಗಿದೆ. ಇನ್ನು ಅನ್ನಗಳ ಸಂಬಂಧ ದಿಂದ ವಿಚಾರಮಾಡೋಣ.

ನಾವು ತಿನ್ನುವ ಅನ್ನದಲ್ಲಿ ಸಾತ್ವಿಕ, ರಾಜಸ, ತಾಮಸಗಳೆಂದು ಮೂರುವರ್ಗ

ಗಳನ್ನು ಮಾಡಿರುವೆವಷ್ಟೇ! ಇವೇ ಸಾತ್ವಿಕಗಳೆಂದು ಶಾಸ್ತ್ರಕಾರರುನಿರ್ಣಯಿಸಿದ ಪದಾರ್ಥಗಳಲ್ಲಿ ೧ ಧಾನ್ಯ, ೨ ಫಲ, ೩ ಶಾಕ, ೪ ಸ್ನೇಹ, ಇತರಪದಾರ್ಥಗಳು ಎಂದು ಐದು ಭಾಗಗಳನ್ನು ಮಾಡಿ, ಇವುಗಳ ಪಟ್ಟಿಯನ್ನು ಮುಂದೆ ಕೊಟ್ಟಿರುತ್ತದೆ. ಇವುಗಳನ್ನು ಪಯೋಗಿಸುತ್ತ ವಿಷಯಗಳ ಶುದ್ದಿಯನ್ನಿಟ್ಟುಕೊಳ್ಳಬೇಕು. ಇನ್ನೂ ಹೆಚ್ಚಿನ ಪದಾರ್ಥಗಳನ್ನು ಸಾತ್ವಿಕನಸುಗಳಲ್ಲಿ ಗ್ರಂಥಕಾರರು ಹಿಡಿದಿರುತ್ತಾರೆ; ಆದರೆ ಆ ಪದಾರ್ಥಗಳು ಅಪ್ರಸಿದ ವಿರುವದರಿಂದ ನಾವು ಹೇಳಲಿಲ್ಲ. ನಾವು ಹೇಳಿದ ಪದಾರ್ಥಗಳಿಗಿಂತ ಹೆಚ್ಚು ಪದಾರ್ಥಗಳನ್ನು ಶಾಸ್ತ್ರಾಧಾರದಿಂದಲೂ, ಸತ್ಪುರುಷರ ಮುಖದಿಂದಲೂ ತಿಳಿದು ಸಾತ್ವಿ ಕವೆಂದು ನಿಶ್ಚಯವಾದಲ್ಲಿ ಉಪಯೋಗಿಸಿಕೊಳ್ಳಬಹುದು . ತಿನ್ನುವಪದಾಥರ್ಗಳಲ್ಲಿ ಯಾವದೇ ಪದಾರ್ಥವನ್ನಾಗಲಿ ಒಂದೆರಡುದಿವಸ ಉಪಯೋಗಿಸಿದರೆ ಅದರ ಗುಣ- ದೋಷಜ್ಞಾನವಾಗುವದಿಲ್ಲ. ನಾವು ಸಾತಿ ಕನಸುಗಳನ್ನು ಪ್ರಯೋಗಿಸಿ ಮಾಡಿಕೊಂಡ ಸತ್ವಾಭಿವೃದಿಯ ಬೆಳಕು ನಮ್ಮ ಆತ್ಮರೂಪರಾದ ಮುಂದಿನ ಸಂತತಿಯವರ ಮೇಲೆ ಬಹಳ ಬೀಳುತ್ತದೆ. ಆದ್ದರಿಂದ ಅವರು ನಮಗಿಂತಲೂ ಸಾತ್ವಿಕರಾಗಿ ತೇಜಸ್ವಿಗಳೂ, ಕಾರ್ಯ ಕ್ಷಮರೂ ಆಗುತ್ತಾರೆ. ಹೇಗೆ ಹೇಗೆ ನಮ್ಮ ಸಂತತಿಯವರು ಸತ್ವಾಭಿವೃದಿಯನ್ನು ಹೊಂದಿ ಕಾರ್ಯಕ್ಷಮರಾಗುತ್ತ ಹೋಗುವರೋ ? ಹಾಗೆ ಹಾಗೆ ನಮಗೆ ಇಹ-ಪರಗಳೆ ರಡೂ ಸಾಧಿಸುತ್ತ ಹೋಗುತ ವೆಂಬುವದೇ ಶಾಸ್ತ್ರೀಯಸಿದಾ೦ತವೂ, ಸತ್ಪುರುಷರ ಬೋಧದಫಲಿತವೂ, ವೇದ-ಶಾಸ್ತ್ರಾಧ್ಯಯನದ ಪ್ರಯೋಜನವೂ, ಪುರಾಣೇತಿಹಾಸಗಳ