ಪುಟ:ಭವತೀ ಕಾತ್ಯಾಯನೀ.djvu/೭೨

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪ್ರಕಟಿಸಲಾಗಿದೆ


--೨೩--

ನಂಬರು ಬ್ರಹ್ಮಜ್ಞಾನಿಯ ಹತ್ತರ ಬಿದ್ದಿರುವದು. ಇದರ ಮೇಲಿಂದ ವಿಚಾರಿಸಿದ ಕರ್ತವ್ಯಶಾಲಿಗಳು ಎಷ್ಟೊಂದು ಪುಣ್ಯವಂತರು! ಒಂದು ರಾಷ್ಟ್ರದಲ್ಲಿ ಒಬ್ಬಿಬ್ಬರು

ಕರ್ತವ್ಯಶಾಲಿಗಳಾದರೆ,ಆ ರಾಷ್ಟ್ರವೇ ಸ್ವತಂತ್ರವಾಗಿ ತೇಜಸ್ವಿಯಾಗುವದೆಂಬ ಸಂಗತಿಯು ಇತಿಹಾಸಗಳ ಮೇಲಿಂದ ಸ್ಪಷ್ಟವಾಗಿ ತಿಳಿದು ಬರುತ್ತದೆ. ಮುಂದೆ ಬ್ರಹ್ಮ ಜ್ಞಾನಿಯಾದಮೇಲೆ ಕರ್ತವ್ಯವಿಲ್ಲ. ಅಂಥ ಕರ್ತವ್ಯಶೂನ್ಯರಾಗಿಯೂ, ಮುಕಿ ಯೋಗ್ಯ ರಾಗಿಯೂ, ಇರುವ ಬ್ರಹ್ಮಜ್ಞಾನಿಗಳಿಂದ ರಾಷ್ಟ್ರದ ಹಿತವೇನು? ಯದ್ಯಪಿ ಸಾಮಾನ್ಯ ವಾಗಿ ಈ ಮಾಹಾತ್ಮರಿಂದ ರಾಷ್ಟ್ರಹಿತವಿಲ್ಲದಿದ್ದರೂ ಯಾವ ಜನರು ಉಜ್ವಲವೃತ್ತಿಯಿಂದ ರಾಷ್ಟ್ರಹಿತಕಾರ್ಯವನ್ನು ಮಾಡಿ ಕೃತಕೃತ್ಯರಾಗುವರೋ, ಅವರಿಗೆ ಮುಕ್ತಿಮಾರ್ಗ ವನ್ನು ತೋರಿಸುವ ಕೆಲಸವು ಅವರದೇ ಇರುವದು. ಅವರು ಯಾವಾಗಲೂ, ಇಂಥ ಕರ್ತವ್ಯನಿಷ್ಠರನ್ನೇ ಹುಡುಕ್ತಲಿರುತ್ತಾರೆ. ಆದ್ದರಿಂದ ರಾಷ್ಟ್ರಕ್ಕೆ ಉಭಯಪಕ್ಷದವರದೂ ಅವಶ್ಯಕತೆಯಿರುವದು. ಇನ್ನು ಈ ಎ ರ ಡೂ ಪ ಕ್ಷ ಗ ಳ ಲ್ಲಿ ಸೇರದೆ "ಜಾಯಸ್ವ ಮಿಯಸ್ವ" ಹುಟ್ಟು , ಸಾಯು ಎಂಬ ತೃತೀಯಪಂಥದವರಾದ ನಮ್ಮಂಥವರಿಂದ ಮಾತ್ರ ರಾಷ್ಟ್ರಕ್ಕೆ ಏನೂ ಹಿತವಾಗಲಾರದೆಂದು ಕೈ ಎತ್ತಿಹೇಳಬಹುದು. ರಾಷ್ಟ್ರಹಿತ ವಾಗುವದಿಲ್ಲ ಇಷ್ಟೇ ಅಲ್ಲ, ಕೇವಲ ಭಾರಭೂತರಾದ ನಮ್ಮಿಂದ ರಾಷ್ಟ್ರಕ್ಷೋಭವೇ ಆಗುವದು. ಯಾಕಂದರೆ ನಾವು ಏನೂ ಕೆಲಸ ಮಾಡದಿದ್ದರೂ, ಕೆಲಸಮಾಡುವವ ರನ್ನು ಕಂಡು ಸುಮ್ಮನೆ ಕೂಡ್ರುವದಿಲ್ಲ. ಜನರಲ್ಲಿ ನಮ್ಮದೊಂದು ಒಣಪ್ರತಿಷ್ಠೆಯನ್ನು ಬೆಳಸುವದಕ್ಕಾಗಿ ಕೆಲಸ ಮಾಡುವವರಿಗೆ ಕಾಡುತ್ತೇವೆ. ನಮ್ಮಂಥವರು ಸಾವಿರಮಂದಿ ಕಾಡಿದರೂ ಅವರು ಸ್ವೀಕೃತಕಾರ್ಯವನ್ನು ಬಿಡುವದಿಲ್ಲೆಂಬದು ಒಂದು ಕಡೆಗೆ ಇರಲಿ. ಸಾರಾಂಶ, ನಾವು ಅಂಥ ಮಹನೀಯರಿಗೆ ತೊಂದರೆಯನ್ನು ಕೊಟ್ಟು ರಾಷ್ಟ್ರಕ್ಷೋಭ ವನ್ನುಂಟುಮಾಡುವದರಿಂದ ನಾವು ಅನುಪಯುಕ್ತರೇ ಆಗುವೆವು. ನಾವಾದರೂ ಹೀಗಾಗದೆ ಮಹನೀಯರನ್ನು ಕಂಡು ಅವರ ಸದ್ಗುಣಗಳನ್ನು ನಮ್ಮಲ್ಲಿ ಸಂಪಾದಿಸಿಕೊಂಡು ಅವರಂತೆ ಲೋಕಹಿತಕಾರ್ಯವನ್ನು ಮಾಡಹತ್ತಿದರೆ ನಮ್ಮದೂ ಉದ್ದಾರವಾಗುತ್ತದೆ. ಹಾರಮುಂತಾದ್ದರಿಂದ ಮನಸ್ಸು ಸುಪರಿಶುದ್ಧವಾದ ಮೇಲೆ, ನಮಗೆ ಸತ್ಸಮಾಗಮವಾಗ ತಕ್ಕದ್ದು. ಅಲ್ಲಿಂದ ಸಜ್ಜನರು ನಮಗೆ ಜ್ಞಾನೋಪದೇಶವನ್ನು ಮಾಡತಕ್ಕದ್ದು. ಅನಂತರದಲ್ಲಿ ಬಂಧವಿಮೋಚನವಾಗುವದು ಹೀಗೆ ಕ್ರಮವಿರುತ್ತದೆ. ಆದರೆ ಮನಸ್ಸು ಸು. ಪರಿಶುದ್ಧವಾದ ಮೇಲೆ ಸತ್ಸಮಾಗಮವು ಹೇಗೆ ಆಗುತ್ತದೆಂಬುದನ್ನು ಕುರಿತು ವಿಚಾರಿ ಸುವಾ-ಒಕ್ಕಲಿಗನು ಬೀಜಬಿತ್ತುವದಕ್ಕೆ ಹದನಾದ ಭೂಮಿಯನ್ನು ಹುಡುಕುವಂತೆ ಬ್ರಹ್ಮಜ್ಞಾನಿಗಳಾದ ಸತ್ಪುರುಷರು ಯಾವಾಗಲೂ, ಸುಪರಿಶುದ್ಧ ವನಸ್ಸುಳ್ಳವರನ್ನೇ ಉಪದೇಶಿಸುವ ಸಲುವಾಗಿ ಹುಡುಕತ್ತಲಿರುತ್ತಾರೆ. ಇದಕ್ಕಾಗಿಯೇ ಅವರ ಸ್ಥಿತಿಯೂ ಸಂಚಾರವೂ ಇರುವವು. ಏಕನಿಷ್ಠೆಯಿಂದ ಕರ್ತವ್ಯವನ್ನು ಮಾಡಿ ಮನಃಶ್ಶುದ್ಧಿಯನ್ನು ಹೊಂದಿದ ಮನುಷ್ಯನಾದರೂ ಕೃತಕಾರ್ಯನಾಗಿ ಅಂಥವರ ದರ್ಶನವನ್ನೇ ಅಪೇಕ್ಷಿಸುತ್ತಿರು ತಾನೆ; ಇಷ್ಟರಲ್ಲಿ ದೈವಯೋಗದಿಂದ ಅಂಥಮಹನೀಯರ ಉಜ್ವಲಸ್ವರೂಪದ ದರ್ಶನವಾದ