ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೧೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಅವತಾರ ಕಲ್ಪನೆ.

೭೯

ಅವನನ್ನೇ ಕೂಡಿರುವದರಿಂದ, ಅದರ ಕ್ಷೇಮನೆಮ್ಮದಿಗಳಿಗಾಗಿ ಅವನು ಪ್ರತಿಕ್ಷಣವೂ ಕಣ್ಣಿಗೆ ಕಾಣಿಸದಂತೆ ಕೆಲಸ ಮಾಡುತ್ತಿರುತ್ತಾನೆ. ಅವನೇ ತ್ರಿಮೂರ್ತಿಗಳ ಸ್ವರೂಪದಿಂದ ಸೃಷ್ಟಿ, ಸ್ಥಿತಿ, ಲಯ ಅಂದರೆ, ಹುಟ್ಟಿ ಸುವದು, ರಕ್ಷಿಸುವದು, ಮತ್ತು ನಾಶ ಮಾಡುವದು ಈ ಕರ್ಮಗಳನ್ನು ನಡಿಸಿರುತ್ತಾನೆ. ಲೀಲಾ ಮಾತ್ರವಾಗಿ ನಡೆಸಿದ ಜಗತ್ತನ್ನು ತನ್ನ ಮನಸಿಗೆ ಬಂದಾಗಲೇ ಅವನು ಇಲ್ಲದಂತೆ ಮಾಡುವನು. ಜಗತ್ತಿನ ಸ್ಪಿತಿಯ ಕಾರ್ಯದೊಳಗೆ ಯಾರಾದರೂ ಉನ್ನತ ಕಾಗಿ, ಅಡ್ಡ ಬಂದು ಪ್ರಪಂಚದ ಜೀವಾಳವಾದ ಧರ್ಮವನ್ನು ಕಾಲ್ಕೆಳಗೆ ಹಾಕಿ ದಬ್ಬಿ, ಅ ಧರ್ಮದಿಂದ ಸತೆಯ ತಿಳಿಸಿದರೆ, ಧರ್ಮದ ಒಳ್ಳೆಗಾಗಿಯೇ, ಇದಕ್ಕೆ ಹೊಣೆಗಾರನಾದ ನಾಕ್ಷಾತ್ ಭಗವಂತನೇ ಮಾನವರೂಪವನ್ನು ತಾಳಿ, ತನ್ನ ಅಲೌಕಿಕವಾದ ಶಾರೀರಕ, ಬೌದ್ಧಿಕ ತೇಜವಿಶೇಷದಿಂದ ಅಧ ರ್ಮದಿಂದ ನಡೆಯು ವವರ ಹೊಟ್ಟು ಹಾರಿಸಿ, ಮತ್ತೆ ಜಗತ್ತಿನಲ್ಲಿ ವ್ರಚಾಕ್ಷೇಮವನ್ನು ನೆಲೆಗೊಳಿಸುತ್ತಾನೆ. ಆರ್ಯಸಂಸ್ಕೃತಿಯೊಳಗೆ ಇಂಥ ಪ್ರಸಂಗಗಳು ಸಾವಿರಾರು ಇವೆ; ಆದರೆ, ಅವುಗಳಲ್ಲಿ ಮುಖ್ಯವಾದವುಗಳೆಂದು ಮತ್ತ್ವ, ಕರ್ಮ, ವೆರಾಹ ಮೊದಲಾದ ಹತ್ತು ಅವತಾರಗಳನ್ನಾಗಿ ವಿಂಗಡಿಸಿದ್ದಾರೆ; ಮೇಲಾಗಿ ಅದರಂತೆ, ಎಷೆ ಕಡೆಯಲ್ಲಿ ಅರಸನು ತನ್ನ ಪ್ರಜೆಗಳಿಗೆ ಅಭಯ ಕೊಡುವಂತೆ, ಭಗವಂತನೇ ಮಾತು ಕೊಟ್ಟು ಸಂತೈಸಿದ್ದಾನೆ. ಬೇರೆ ಜನಾಂಗದವರಂತೆ ಆರ್ಯರಿಗೆ ಪ್ರಪಂಚದ ಚಿಂತೆಯನ್ನು ವಹಿಸುವ ಕಾರಣವಿಲ್ಲ. ತಮ್ಮ ತಮ್ಮ ಧರ್ಮದಂತೆ ಅವರು ನಡೆದರಾಯಿತು. ಜಗತ್ತಿನ ಯೋಚನೆ ಅವರಿಗಿಲ್ಲ. ಇದಕ್ಕೆಲ್ಲ ಸೃಷ್ಟಿ ಕಾರಣನಾದ ಭಗವಂತನೇ ಸ್ವತಃ ಮನುಷ್ಯರಂತೆ ಮನುಷ್ಯನಾಗಿ ಬಂದು ತನ್ನ ದೈವಿಕವಾದ ತೇಜಿಸ್ಸಿನಿಂದ ಭೂಮಂಡ ಲದ ಮೇಲಿನ ಧಾರ್ಮಿಕ, ರಾಜಕೀಯ, ಸಾಮಾಜಿಕ, ರಂಗಭೂಮಿಯನ್ನು ಹೊಕ್ಕು ಆಟವಾಡಿ, ಹೋಗಿರುವದೇ ಬಲವಾದ ಸಾಕ್ಷಿ. ಸಾರಾಂಶ, ಸೃಷ್ಟಿಯ ಕರ್ತನೂ, ಅದನ್ನು ರಕ್ಷಿಸುವವನೂ, ಧರ್ಮದ ಪ್ರಭುವೂ, ಅಘಟಿತ ಘಟನಾ ಪಟುವೂ ಆದ ಪರಮಾತ್ಮನು ಅರ್ಯರಿಗೆ ಜೀವದ ಗೆಳೆಯನಂತೆ ಕರೆದಾಗ ಈ ಗಿರಾಗ ಬಂದು ನಿಲ್ಲುತ್ತಿರುವದ