ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೧೨೧

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


________________

ಭಾರ೬ ತುರ ಇತಿಹಾಸವು. 1 ರಾಕ್ಷಸರು ಸಾಧಾರಣವಾಗಿ ಕಪ್ಪು ಬಣ್ಣದವರೂ, ನಿಲುವಿಕೆಯಿ೦' ದಲೂ, ದೇಹದಾರ್ಡ್ಯದಿಂದಲೂ ಬಲು ಎತ್ತರ ರೂ, ಗಟ್ಟಿ ಗರೂ ಇರು ವದರಿಂದ ಅವರ ವರ್ಣನೆಗಳೆಲ್ಲ ಅ೦ಜಿಕೆಯನ್ನು ೦ಟು ಮಾಡುವ೦ಥವು ಗಳಾಗಿವೆ; ಆದರೂ, ರಾಕ್ಷಸರಲ್ಲಿ ದ ಪಸಂಪನ್ನರು ಇರಲೇ ಇಲ್ಲ' ವೆಂತಲ್ಲ; ರಾವಣನ ಅನೇಕ ಹ೦ಗಸರು ಬಹು ಸ೦ಸನ್ನ ರಿದ್ದರೆಂಬ ಬಗ್ಗೆ ವರ್ಣನೆ ಇದೆ. ರಾಕ್ಷಸರು ಮಾಂಸ ಭಕ್ಷಕರ, ವರ ಪೀಡಕ ರೂ ಆಗಿದ್ದರು. ರಾವಣನಿಗೆ ಹತ್ತು ತಲೆಗಳಿರುವ ಸಂಗತಿಯು ಅನೇಕ ರಿಗೆ ವಿಲಕ್ಷಣವಾಗಿ ಕಾಣುತ್ತದೆ. ಮತ್ತು ಅದು ವಿಲಕ್ಷಣ ಕಾಣು ವಷ್ಟು ಅಲಂಕಾರಿಕವೂ ಸುಳ್ಯ ಇದೆ; ದಶಮುಖ ಅಂದರೆ, ಹತ್ತು ಜನರಷ್ಟು ಬಲವುಳ್ಳವನೆಂದರ್ಧ ರಾವಣನು ಪುಲ ಋಷಿಯ ಮಗನು; ಒಂದು ಮುಖದ ತ೦ದೆಯಿ೦ದ ಹತ್ತು ಮುಖದ ಮಗನು ಹುಟ್ಟುವದೆಂತು ? ರಾಮಾಯಣದೊಳಗಿನ ವಾನರರು ಮಂಗಗಳೊ ? ರಾಮಾಯಣವನ್ನು ಕೇಳಿದವರಿಗೆ ವಾನರಮ೦ಗಗಳಲ್ಲವೇ ಎಂದು ಕೇಳಿದರೆ, ಯಾರಾದರೂ ಹೌದು; ಮ೦ಗಗಳೆ !' ಎಂದು ಹಿಂದು ಮುಂದೆ ನೋಡದೆ ಉತ್ತರ ಕೊಡಬಹದು. ಆದರೆ ವಾನರರು ಮಂಗಗಳಲ್ಲ; ಕಾಡು ಜಾತಿಯ ಜನರು; ವಾಲ್ಮೀಕಿ ಋಷಿಗಳು ಕಪಿಗಳೆಂದು ಅಲಂಕಾ ರಿಕವಾಗಿ ಹೇಳಿರುವರೆಂದು ಇತ್ತೀಚೆಯ ವಿದ್ವಾಂಸರು ಅಭಿಪ್ರಾಯ ಪಡು ತ್ತಾರೆ. ವಾನರಾಧಿಪನಾದ ಸುಗ್ರೀವನು ತನ್ನ ಮಂತ್ರಿಯಾದ ಹನುಮಂತನನ್ನು ತಾನಸವೇಷಧಾರಿಗಳಾದ ಶ್ರೀ ರಾಮಲಕ್ಷ್ಮಣರ ವೃತ್ತಾಂತವನ್ನು ವಿಚಾರಿಸಲಿಕ್ಕೆಂದು ಕಳಿಸಿದನಷ್ಟೇ! ಆಗ ಹನು ಮ೦ತನು ಶ್ರೀ ರಾಮಲಕ್ಷ್ಮಣರನ್ನು ಸಮೀಪಿಸಿ, ಸಂಸ್ಕೃತ ಭಾಷೆ ಯಿಂದ ಮಾತನಾಡತೊಡಗಿದನು. ಹನುಮ೦ತನ ಮಾತುಗಾರಿಕೆ' ಯನ್ನು ಕೇಳಿ, ಶ್ರೀರಾಮಚಂದ್ರನು ಲಕ್ಷ್ಮಣನನ್ನು ಕುರಿತು 11 ಋ ಗೈದ, ಯಜುರ್ವೇದ, ಸಾಮವೇದಾದಿಗಳನ್ನು ಅಧ್ಯಯನ ಮಾಡಿ ವಿನೀತ ನಾಗದವನು ಈ ಬಗೆಯಾಗಿ ಮಾತನಾಡಲು ಸಾಧ್ಯವಿಲ್ಲ; ಈ ತನು ಇಡೀ ವ್ಯಾಕರಣ ಶಾಸ್ತ್ರವನ್ನೇ ನುಂಗಿ ನೀರು ಕುಡಿದಿರುವಂತೆ ಕಾಣು