ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೨೭೫

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


________________

“ ប ಭಾರತೀಯರ ಇತಿಹಾಸವು. ಅಶ್ವಮೇಧಯ ಜ್ಞದಂತಹ ವೈದಿಕ ಧರ್ಮ ಪುನರುಜ್ಜಿವನದ ಮಹೋ ತ್ಸವ ಸಮಾರಂಭವನ್ನು ನೋಡಿ ವೈದಿಕರ ಕಣ್ಣಿನ ಪಾರಣೆಯಾಯಿತು. ಬೌದ್ಧ ಧರ್ಮದ ಸದ್ದಡಗಿ, ಅದಕ್ಕೆ ಬದಲಾಗಿ ವೈದಿಕ ಧರ್ಮವು ಮತ್ತೆ ತನ್ನ ಪೂರ್ವಸ್ಥಾನಕ್ಕೆ ಬಂದು, ಆರ್ಯ ಜನಾಂಗವನ್ನು ಆಳುತ್ತಿದ್ದುದಕ್ಕೆ ಅಶ್ವಮೇಧವೆಂಬುದೊಂದು ನಿದರ್ಶಕವಾಗಿತ್ತು. ಹೀಗೆ ಪುಷ್ಯಮಿತ್ರನು ವೈದಿಕ ಧರ್ಮದ ಕಟ್ಟಾಳಾಗಿದ್ದರೂ, ಬೌದ್ಧ ಧರ್ಮದ ಮಠಗಳನ್ನು ಸುಟ್ಟು, ಬೌದ್ಧ ಭಿಕ್ಷುಗಳ ಕೊಲೆ ಮಾಡಿದ್ದರಿಂದ ಭಿಕ್ಷುಗಳು ಹಿಂದೂ ದೇಶವನ್ನು ಬಿಟ್ಟು ಬೇರೆ ದೇಶವನ್ನಾಶ್ರಯಿಸಬೇಕಾಯಿತೆ೦ದು ಬೌದ್ಧರ ಆಕ್ಷೇಪಣೆ; ಮತ್ತು ಮನುಷ್ಯ ಸ್ವಭಾವವನ್ನು ಕುರಿತು ನಾವು ಕೊಂಚ ಆಳವಾಗಿ ವಿಚಾರಿಸತೊಡಗಿದರೆ ಎಷ್ಟು ಮಾತ್ರ ಕೂ ಇದು ಆಗದಮಾ ತೆಂದು ಖಂಡಿತವಾಗಿ ಹೇಳಲಿಕ್ಕಾಗದು. ಮನುಷ್ಯನಿಗೆ ಮುಯ್ಯಕ್ಕೆ ಮುಯ್ಯನೆ೦ಬ ರಾಜಕಲ್ಪನೆಯಿಂದ ಎಷ್ಟು ಆನಂದವಾಗುತ್ತದೆಯೋ ಅಷ್ಟು 1 ವಿಷ ಕುಡಿಸಿದವನಿಗೆ ಹಾಲು ಕುಡಿಸಬೇಕೆಂ” ಬ ಕಲ್ಪನೆ ಯಿಂದ ಆನಂದವಾ ಗದು. ವಿಷವಿಕ್ಕಿದವರಿಗೆ ಹಾಲನ್ನವನ್ನು ಇನ್ನು ವವರು ನಾತ್ವಿಕರು, ದೇವಗಣದವರು. ಪುಷ್ಯ ಮಿತ್ರನು ಇಷ್ಟರಮಟ್ಟಿಗೆ ಸಾತ್ವಿಕ ನಿದ್ದನೆಂದು ಅನ್ನಲಿಕ್ಕೆ ಆಧಾರಗಳಿಲ್ಲ. ಪುಷ್ಯಮಿತ್ರನಂ ಧವರು ಭಾರತೀಯ ಚರಿತ್ರೆಯಲ್ಲಿ ಕೈ ಮೇಲೆ ಎಣಿಸುವಷ್ಟು ಕೂಡ ಇಲ್ಲ. ನಮ್ಮ ಜನಾಂಗದೊಳಗೆ ಎಷ್ಟೊ ಅನ್ಯಮತದವರು ಪರಸ್ಪರ ಸಂತೋಷ ಸಹಾನುಭೂತಿಗಳಿ೦ದಿರುವ ಸಂಗತಿಗಳೆ ನಮಗೆ ಹೆಚ್ಚಾಗಿ ದೊರಕುತ್ತವೆಯೇ ಹೊ ರ್ತು ಪುಷ ಮಿತ್ರನಂತಹ ಸಂಗತಿಗಳು ಬಹು ವಿರಲ. ಪುಷ್ಯ ಮಿತ್ರನು ಈ ತರುವಾಯ ೨೫ ವರ್ಷ ಆಳಿದನು. ಈ ಮನೆತನದಲ್ಲಿ ಹತ್ತು ಮಂದಿ ರಾಜರು ಆಳಿದರು, ಯಾರೂ ಹೇಳುವಷ್ಟು ಬೆಳಕಿಗೆ ಬರಲಿಲ್ಲ, ಆದರೂ ಹಣಕು, ಮಿಣಕುತ್ಯ ರಾಜವಂಶವು ೨ ವರ್ಷಗಳ ವರೆಗೆ ಜೀವ ಹಿಡಿದು ಕೊಂಡಿದ್ದಿತು. ಮುಂದೆ ಪುಷ್ಯ ಮಿತ್ರನು ಮೊದಲು ಯಾವ ದುಷ್ಟ ಕಾಯಕದಿಂದ ತನ್ನ ಪಟ್ಟವನ್ನು ಗಳಿಸಿದ್ದನೋ, ಅದೇ ಕಾಯಕದಿಂದಲೇ ವಸುದೇವನೆಂಬ ಬ್ರಾಹ್ಮಣ ಮಂತ್ರಿಯು ಈ ದೊರೆಯನ್ನು ಕೊಲ್ಲಿಸಿ ತಾನು ಪಟ್ಟ ವೇರಿದನು.