ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೨೮೭

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


________________

ಭಾರತೀಯರ ಇತಿಹಾಸವು. ಪಯಾದಷ್ಟೆ ನಾಹಸದ್ದಾಗಿ ಪರಿಣಮಿಸಿರುವದು ಕಂಡು ಬರುತ್ತದೆ ಹಿಂದೂ ಜನರು ತಮ್ಮ ಕೈಗಾರಿಕೆಯನ್ನು ಎಷ್ಟು ಪಹಣೀಯ ಸ್ಥಿತಿಗೆ ತಂದು ಮುಟ್ಟಿ ಸಿದ್ದರೆಂಬುವ ಬಗ್ಗೆ ಸಾಕಷ್ಟು ಆಧಾರಗಳು ಸಿಕ್ಕುತ್ತವೆ. ಗಾಳಿಯ ಪರೆಗಳ ೦ಧ ( Webs of Woven Wind ) ಹಿಂದೂ ದೇಶದ ಬಟ್ಟೆಗಳನ್ನು ಉಡಲಿಕ್ಕೆ ರೋಮ ದೇಶದ ಹೆಂಗಸರು ಮೆಚ್ಚಿ ಮರುಳಾಗಿದ್ದರೆಂದಮೇಲೆ ಇದಕ್ಕಿಂತ ಹೆಚ್ಚಿನ ಉದಾಹರಣೆ ಇನ್ನಾ ವುದು ಬೇಕು ?) ರೋಮ ರಾಜ್ಯದಿಂದ ಹಿಂದೂ ರಾಜ್ಯ ದೊಳಗೆ ವರ್ಷಕ್ಕೆ ಕೋಟ್ಯವಧಿ ರೂಪಾಯಿಗಳು ಬಂದು ಸುರಿಯುತ್ತಿದ್ದವು. ರೋಮ ನಾಮ್ರಾಜ್ಯಕ್ಕೆ ಇದೀಗ ಒಳ್ಳೆ ಘನತೆಯ ಕಾಲ ಒದಗಿದ್ದರಿ೦ದಲೂ ಅವರಲ್ಲಿ ಸುಖ-ವಿಲಾಸಗಳು ಅಳತೆಗೆಟ್ಟು ಬೆಳೆದುದರಿಂದಲೂ, ತಮ್ಮ ಸುಖವಿಲಾಸಕ್ಕಾಗಿ ಹಣದ ಕಾವಲಿಯನ್ನೇ ಅವರು ಹಿಂದೂ ದೇಶಕ್ಕೆ ಹರಿಸುತ್ತಿರುವಿನಾಶ್ಚರ್ಯ ? ಹಿಂದೂ ದೇಶದೊಳಗೆ ಎ೦ದಾ ದರೂ ಒಕ್ಕಲತನ ಕೈಗಾರಿಕೆ ಅವೆರಡೂ ಮೇಲಾದ ಉದ್ಯೋಗಗ ೮೦ದು ಎಣಿಸಲ್ಪಟ್ಟಿದ್ದು, ಅವುಗಳ ತರುವಾಯ, ವ್ಯಾಪಾರ, ಕಡಲ ಪಯಣ, ಲಲಿತಕಲೆಗಳಿಗೆ ಪ್ರಾಧಾನ್ಯವಿದ್ದಿತು. ಇಲಿಗಳ ಉಣ್ಣೆಯಿ 3 ದಲೂ ಹಿಂದೂಾಜನರು ಬೆಚ್ಚಗಿನ ಬಟ್ಟೆಗಳನ್ನು ನೇಯುತ್ತಿದ್ದರು. ಹತ್ತಿ ಯಿಂದ ನೇಯುವ ಬಟ್ಟೆಗಳನ್ನು ಹಾವಿನ ವರೆಗೂ, ಹಾಲಿನ ಕೆನೆಗೂ ಹಲವೆಡೆಯಲ್ಲಿ ಹೋಲಿಸಿದ್ದಾರೆ. ಯವನರು ತಮ್ಮ ದೇಶಗಳಿ೦ದ ಭಂಗಾರವನ್ನು ಹೇರಿಕೊಂಡು ಬಂದು ಅದಕ್ಕೆ ಬದಲಾಗಿ ಇಲ್ಲಿಂದ ಮುತ್ತು, ರತ್ನ, ವಜ್ರ, ಆನೆಯ ಕೊರೆ, ಮಸಾಲೆ ಹೀಗೆ ತಮ್ಮ ತಮಗೆ ಇಷ್ಟವಾದ ಸದಾ ರ್ಧಗಳನ್ನು ಒಯ್ಯುತ್ತಿದ್ದರು. ಈ ಸಮಯಕ್ಕೆ ದಕ್ಷಿಣ ಹಿಂದೂ ದೇಶವು ವೈದಿಕ ಧರ್ಮದ ತವರ್ಮನೆಯಾಗಿ ಪರಿಣಮಿಸಿದ್ದರೂ, ಜೈನ ಬೌದ್ಧ ಮತಗಳು ಅನಿಬಾ Fಧವಾಗಿಯೂ, ನಿರಂಕುಶವಾಗಿಯೂ, ವೈದಿಕ ಮ ತ ದೊಡನೆ ಒಡನಾಡಿ ನಲಿಯುತ್ತಿದ್ದ ಎಂದು ಧಾರಾಳವಾಗಿ ಹೇಳಬಹುದಷ್ಟು ಆಧಾರಗಳು ದೊರೆಯುತ್ತವೆ. ಇನ್ನೊಂದು ವಿಧ. ದಿ೦ದ ಈ ಯುಗವು ವಿಶೇಷ ಸ್ಮರಣೀಯವಾಗಿದೆ. ಅವಾವುದೆಂದರೆ, ಇದೇ ಕಾಲದಲ್ಲಿ ಏಸುಕ್ರಿಸ್ತನ ಶಿಷ್ಯರಲ್ಲೊಬ್ಬನಾದ ಜುಡಾ ನಧಾಮಸ್