ಸೂಕ್ಷವಾಗಿ ಪ್ರಕಟಗೊಳಿಸುತ್ತಿರುವದೆ೦ಬುದು ಅನುಭವಕ್ಕೆ ಬರುತ್ತಿದೆ. ಒಂದು ಜನಾ೦ಗದ ಪ್ರಾಕೃತಿಕಸ್ವರೂಪವೆಂದರೆ, ಅದರ ಒಳಗಿನ ಸ್ಥಿತಿಯ ಹೋರಚಿತ್ರವು.
ಉತ್ತರಭಾರತ:- ಇನ್ನು, ಈ ದೃಷ್ಟಿಯಿಂದ ಆರ್ಯಾವರ್ತದ ಹೊರಗಣ ಸ್ವರೂಪವನ್ನಷ್ಟು ನೋಡುವ. ಪರ್ವತರಾಜನಾದ ಹಿಮಾಲಯನು ಉತ್ತರದ ಮಹಾದ್ವಾರದಲ್ಲಿ ಹಬ್ಬಿಕೊಂಡಿರುವನು. ಆತನ ಸ್ವರ್ಗೀಯವಾದ ವೈಭವವನ್ನೆಷ್ಟೆ೦ತು ಬಣ್ಣಿಸುವದು? ಚಿತ್ತಾಕರ್ಷಕವಾದ ಸೃಷ್ಟಿ ಸೌಂದರ್ಯದಿಂದಲೂ, ಗಾಢವೂ ಅದ್ಭುತವೂ ಆದ ರಮ್ಯತೆಯಿಂದಲೂ, ಕಣ್ಣಿಗೆ ಹಬ್ಬವನ್ನು ಮಾಡುವ ದಿವ್ಯನೋಟಗಳಿ೦ದಲೂ, ಒಂದರ ಮೇಲೊಂದು ಸಾಲುಸಾಲಾಗಿ ಏರಿಸಿದಂತಿರುವ ಹಿಮಾಚ್ಛಾದಿತ ಪರ್ವತಾವಳಿಗಳೆ೦ದಲೂ, ಆತನು ಇಡೀ ಪ್ರಪಂಚದಲ್ಲಿಯೇ ಮಿರಿ ನಿಂತಿರುವನು. ಇನ್ನೊಂದು ಬಗೆಯಿಂದ ನೋಡಿದರೆ, ಈ ನಗಾಧಿರಾಜನು ತನ್ನ ಅಪಾರವಾದ ಸಣ್ಣಪುಟ್ಟ ಹಿಮಮಯವಾದ ಪರ್ವತಾವಳಿಗಳ ಸೇನಾಸಮೂಹವನ್ನು ಕಟ್ಟಿ ಕೊ೦ಡು "ದಿವ್ಯ ದೇಶ"ವಾದ ಆರ್ಯಾವರ್ತವನ್ನು ಭದ್ರವೂ, ಅಭೇದ್ಯವೂ ಆದ ಕೋಟೆಯೋಪಾ ದಿಯಲ್ಲಿ ಪರರಾಯರ ದಾಳಿಗಳಿ೦ದ ಹಗಲು ರಾತ್ರೆ ಕಾಯುತ್ತ ಕುಳಿತಿರುವನೇನೋ ಎನ್ನುವಂತಿರುವನು. ಈತನು ತನ್ನಲ್ಲಿ ಬರಿಯ ಹಿಮಮಯವಾದ ಪರ್ವತಗಳನ್ನಷ್ಟೇ ಇಟ್ಟುಕೊಂಡಿರದೆ, ಅಮೃತ ಮಯವಾದ ಔಷಧ ವನಸ್ಪತಿಗಳನ್ನಿಟ್ಟುಕೊಂಡು ತನ್ನನ್ನಾಶ್ರಯಿಸುವ ವರನ್ನು ಅಮರಗೊಳಿಸುವನು. "ನ್ಛಾವರಾಣಾ೦ ಹಿಮಾಲಯ:" ಎಂದು ಭಗವದ್ಗೀತೆಯಲ್ಲಿ ಭಗವಾನ್ ಶ್ರೀಕೃಷ್ಣನು ಹೇಳಿ ಈ ಹಿಮಾಲಯನ ಯೋಗ್ಯತೆಯನ್ನು ಚನ್ನಾಗಿಯೇ ಬೆಳಗಿಸಿರುವನು. ನಿಜವಾದ ಸೃಷ್ಟಿ ಸೌಂದರ್ಯದ ನಿತ್ಯ ನೂತನವಾದ ನೋಟಗಳಿ೦ದ ಪಾಮರರ ಕಣ್ಣುಗಳನ್ನು ಉಣಿಸಿ, ತಣಿಸಿ ಅವುಗಳನ್ನು ಒಂದೇ ಸಲಕ್ಕೆ ವಿಷಯಾನ೦ದದಿ೦ದ ಹಿಮ್ಮುಖಗೊಳಿಸಿ, ಸ್ವರ್ಗೀಯಾನಂದದ ರಸಾಸ್ವಾದದಲ್ಲಿ ಕ್ಷಣಹೊತ್ತು ಮೈಮರೆಯುವಂತೆ ಮಾಟ ಮಾಡುವ ಪ್ರತ್ಯಕ್ಷ ಯೋಗಿ ರಾಜನಂತಿರುವ ಮೂಲಕ ಅನೇಕ ಯೋಗಿಜನಗಳಿಗೆ ಈತನು ತವ