ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಉತ್ತರಭಾರತ.

ರ್ಮನೆಯಾಗಿರುವನು. ಈತನು ತನ್ನ ವಿಭೂತಿಯ ಪ್ರಭಾವದಿಂದ ತನ್ನ ತಲೆಯ ಮೇಲೆ ಹರಿಹರಬ್ರಹ್ಮಾದಿಗಳನ್ನು ಹೊತ್ತು ಕೊಂಡು ನಿಂತಿರುವನೆ೦ಬ ನೆಚ್ಚಿನ ನಂಬುಗೆಯಿರುವದರಿ೦ದಲೇ ಅನಾದಿಕಾಲದಿ೦ದ ಈಗಿನ ವರೆಗೆ ಅಸಂಖ್ಯ ಮುಮುಕ್ಷುಜನಗಳಿಗೆ ವಿಶ್ರಾಂತಿಸ್ಥಾನವಾಗಿ ಪರಿಣಮಿಸಿರುವನು. ಪವಿತ್ರವಾದ ಈತನ ದೇಹದೊಳಗಿಂದ ಹೊರಟಂಥ ಗಂಗಾ, ಯಮುನಾ, ಸಿಂಧು, ಬ್ರಹ್ಮಪುತ್ರ ಮೊದಲಾದ ನದಿನದಗಳು ಭೂಲೋಕದೊಳಗಿನ ಪಾಪವನ್ನೂ, ಹೊಲಸನ್ನೂ ತೊಳೆದು ತಮ್ಮ ದಿವ್ಯಪ್ರಭಾವದಿಂದ ಪ೦ಜಾಬ, ಅಯೋಧ್ಯಾ, ಬಂಗಾಲ ದೇಶಗಳಿಗೆ ಹುಲುನಾದ ಬೆಳೆಯನ್ನೂ, ತಿಳಿಯಾದ ನೀರನ್ನೂ ಕೊಟ್ಟು, ಸುಖವನ್ನೂ, ಅನಂದವನ್ನೂ, ಪಾವಿತ್ರ್ಯವನ್ನೂ ಉಂಟು ಮಾಡುತ್ತಿರು ವವು. ಈ ಎರೆ, ಉತ್ತರಭಾರತವು ಗಂಗಾ ಯಮುನಾ ನದಿಗಳ ಪವಿತ್ರವಾದ ಪ್ರವಾಹಗಳಿಂದ ಕೂಡಿದ್ದೊಂದು ವಿಹಾರ ಭೂಮಿಯ ಅಗಿದೆ. ಹಿಮ ಪರ್ವತರಾಜನ ಅನ್ಯಾದೃಶವಾದ ಸೌಂದರ್ಯದೊಳಗೆ ಹುಟ್ಟಿ, ನಿಸರ್ಗಸುಖದೊಳಗೆ ಓಲಾಡುತ್ತಿರುವ ಕಾಶ್ಮೀರದೇಶದ ಸೌಭಾಗ್ಯವನ್ನ೦ತು ಬಣ್ಣಿಸೋಣ! ಇ೦ದಿಗೆ ಕಾಶ್ಮೀರ ದೇಶವು ಭಾರತೀಯರಿಗೆ ಉತ್ತರದ ನಂದನವನವಾಗಿದೆ. ಹೃಷೀಕೇಶ, ಬದರಿ, ಕೇದಾರ, ಹರಿದ್ವಾರ, ಮಧುರಾ, ಕಾಶಿ, ಪ್ರಯಾಗ, ಅಯೋಧ್ಯಾ, ಗಯಾ ಮು೦ತಾದ ಲೋಕಪಾವನ ಕ್ಷಮವಾದ ತೀರ್ಥ ಕ್ಷೇತಾದಿಗಳಿ೦ದ ಧನ್ಯವಾಗಿ ದಿನಾಲು ಲಕ್ಷಾವಧಿ ಯಾತ್ರಿಕರಾದ ವಾನರರನ್ನು ಪಾವನ ಗೊಳಿಸುತ್ತಿರುವ ಉತ್ತರ ಭಾರತದ ಭಾಗ್ಯಕ್ಕೆಣೆಯಿಲ್ಲ. ಸ್ವಲ್ಪ ಕೆಳಗೆ ಇಳಿದು ಬಂದರೆ, ಹಿಮಪರ್ವತ ರಾಜನ ಸೋದರನಾದ ವಿಂಧ್ಯರಾಜನು ನಮಗೆ ಇಳಿಸುವನು. ಆತನು ಉತ್ತರ ದಕ್ಷಿಣಭಾರತದ ನಡುವೆ ಅಡ್ಡವಾಗಿ ಮಲಗಿದ್ದರಿಂದ ಆರ್ಯಮಾತೆಯ ಟೊಂಕದೊಳಗೆ ಒಡ್ಡ್ಯಾಣದ೦ತೆ ಶೋಭಿಸುತ್ತಿರುವನು. ಆತನ ಶಾಖೋಪಶಾಖೆಗಳಾದ ಅರವಲಿ, ನಾತಪುಡಾ ಪರ್ವತಗಳ ಸಾಲುಗಳು ರಜಪೂತ ವೀರರ ವೀರಕ್ಷೇತ್ರಗಳಾಗಿವೆ. ನರ್ಮದಾ, ತಾಪೀ ನದಿಗಳು ಇದೇ ಪರ್ವತದಲ್ಲಿ ಉಗಮಹೊ೦ದಿ ಮಧ್ಯದೇಶದ ಭಾಗವನ್ನೆಲ್ಲ ಪೋಷಿಸುತ್ತಿರುವವು.