ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೨೯೮

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪ್ರಕಟಿಸಲಾಗಿದೆ
೨೬೧
ದಕ್ಷಿಣಹಿಂದುಸ್ಥಾನ.

ಕೊ೦ಡು ಇರುತ್ತಿರಲು ಸಂಧಿಸಾಧಿಸಿ ಅ ರಾಜನನ್ನು ಕೊಂದು ರಾಜ್ಯವನ್ನು ತಾನು ಕಸಿದುಕೊ೦ಡು ಅಳಬೇಕೆ೦ಬ ದುರುದ್ದೇಶದಿಂದ ಬಂಡಾಯವೆಬ್ಬಿಸಿ ಅಸ೦ಖ್ಯವಾಗಿ ಪ್ರಜೆಗಳ ಕೊಲೆಮಾಡಿದನು. ಈತನು ಶೈವನು. ಈತನ ಕೃತಿಗಳೆಲ್ಲವೂ ಹಿಂದೂಜನರ ಮಟ್ಟಿಗೆ ಬಹು ಕ್ರೂರವಾಗಿಯೂ, ಕಠೋರವಾಗಿಯೂ ಕಾಲರುದ್ರನಂತಿದ್ದವು. ಈತನ ತಲೆಯಿಂದಲೇ ಹೂಣರ ರಾಜ್ಯವು ಹೂತುಹೋಗಿ ಹೂಣರು ಹಿಂದೂಜನರೊಡನೆ ಕಲೆತು ಒಂದಾಗಿ ಹೋದರೂ ಕೊನೆಯ ವರೆಗೆ ಹೂಣರೆಂದರೆ ಕಾಡುಜನರೆಂಬ ಹೆಸರು ಸಂಸ್ಕೃತವಾಙ್ಮಯದೊಳಗೆ ಸ್ಥಿರವಾಯಿತು. ಮಿಹಿರಕುಲನು ಹಿಂದೂಜನರಿಗೆ ರಾಕ್ಷಸನಾಗಿ ದುರಾಚರಣೆಯಿ೦ದ ನಡೆದುಕೊಂಡದ್ದೇ ಹೂಣರಿಗೆ ಈ ಕೆಟ್ಟ ಹೆಸರು ತರಲಿಕ್ಕೆ ಕಾರಣ ವಾಯಿತು.

ದಕ್ಷಿಣಹಿಂದುಸ್ಥಾನ:- ಉತ್ತರಹಿ೦ದುಸ್ಥಾನದೊಳಗೆ ಈ ಮೇರೆಗೆ ಹೂಣ ಗುಪ್ತರಲ್ಲಿ ಕದನಗಳು ಸಾಗುತ್ತಿರಲು, ದಕ್ಷಿಣಹಿಂದೂ ದೇಶವು ಯಾವ ಸ್ಥಿತಿಯಲ್ಲಿತ್ತೆಂಬದನ್ನು ನೋಡುವಾ- ಉತ್ತರಹಿಂದೂ ದೇಶದಾಚೆಕಡೆಯ ಎಲ್ಲೆಯಲ್ಲಿ ವಿಚಾತಿಯ ಜನರು ವಾಸವಾಗಿದ್ದರು. ಈ ವಿಜಾತಿಯ ಜನರಿಗೆ ಹಿಂದೂದೇಶದೊಳಗೆ ಸೇರಲಿಕ್ಕೆ ಪ೦ಚಾಬದ ದಾರಿಯೊ೦ದೇ ಉಳಿದಿರುವದರಿಂದ ಫರರಾಯರ ದಾಳಿಗೆ ಎಡೆಗೊಡುವ ಪ್ರಸಂಗವು ಉತ್ತರಹಿಂದೂದೇಶದವರಿಗೆ ಆಗಾಗ್ಗೆ ಪ್ರಾಪ್ತವಾಗುತ್ತಿದ್ದುದರಿಂದ ಅದು ಅವರಿಗೆ ದಡ್ಡುಗಟ್ಟಿ ಹೋದಂತಾಗಿತ್ತು. ಅಂತೂ ಈ ಉತ್ತರಹಿ೦ದೂದೇಶವೆಂದರೆ ಒಂದು ರೀತಿಯಿ೦ದ ಅನೇಕ ಶತಮಾನಗಳ ವರೆಗೆ ರಣರಂಗಸ್ಥಳವಾಗಿತ್ತೆನ್ನಲಿಕ್ಕೆ ಅಡ್ಡಿಯಿಲ್ಲ. ಇದರಿಂದ ಸ್ವಾಭಾವಿಕವಾಗಿಯೇ ಉತ್ತರದ ಜನರಲ್ಲಿ ಕ್ಷಾತ್ರತೇಜವು ಹೆಪ್ಪುಗಟ್ಟಿ ಹೆಚ್ಚು ಧೈರ್ಯವಾಗಿ ಮೈಯೊಡ್ಡಲಿಕ್ಕೆ ಹಚ್ಚಿತೆಂಬುದಕ್ಕೆ ಒಂದೆರಡು ಶತಕಗಳ ಅಂತರದಲ್ಲಿ ಅಲ್ಲಿ ನಡೆದ ಅನೇಕ ರಾಜ್ಯವಿಪ್ಲವಗಳೂ, ಅನಾಹೂತಗಳೂ ಅದೇ ದೃಷ್ಟಾಂತಗಳು ಸಾಕು. ಕ್ಷಾತ್ರತೇಜವು ಕೈ ಮುಚ್ಚಿಕೊ೦ಡು ಕುಳ್ಳಿರಗೊಡುವದಿಲ್ಲ. ಎಲ್ಲರಲ್ಲಿಯೂ ತಕ್ಕಮಟ್ಟಿಗೆ ಹೆಚ್ಚು ಕಡಿಮೆ ಕ್ಷಾತ್ರವೀರ್ಯವು ಉಕ್ಕುತ್ತಿದ್ದುದರಿಂದ, ಸಾಮಾ