ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೩೦೨

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪ್ರಕಟಿಸಲಾಗಿದೆ
೨೬೫
ಬೌದ್ಧಿಕ ಬೆಳವಳಿಗೆ.

ಕಾಲದ ಬುದ್ಧಿಯ ಬೆಡಗುಗಳು. ಈ ಮುಂದೆ ಕೆಲ ದಿನಗಳು ಸಂದು ಹೋದ ನಂತರ ಸಂಸ್ಕೃತವಾಙ್ಮಯಕ್ಕೊಂದು ಸುಗ್ಗಿಯ ಕಾಲವೊದಗಿತು, ಈ ಕಾಲಕ್ಕೆ ಸಂಸ್ಕೃತವಾಙ್ಮಯವು ಹುಲಸಾಗಿ ಬೆಳೆದು ಪರಿಪುಷ್ಟವಾಯ್ತು. ಸಂಸ್ಕೃತವಾಙ್ಮಯದ ನಾನಾ ಬಗೆಯ ಸೌಂದರ್ಯ ಹಾಗೂ ರಸಪಾಕಗಳು ಸುಬ೦ಧು, ದ೦ಡೀ, ಭಾರವಿ, ಮಾಘ, ನಾರಾಯಣಭಟ್ಟೀ (ವೇಣೀಸಂಹಾರ) ಅವರ ಬಾಯ್ತುಂಬಿ ಹೊರಳಲ್ಲಿದವು. ಈ ಕವಿಗಳ ಕೃತಿಗಳನ್ನು ಓದಿದರೆ ಅವುಗಳಲ್ಲಿ; ಶಬ್ದಸಂಪತ್ತಿ, ಅರ್ಧಸಂಪತ್ತಿ, ರಸಸಂಪತ್ತಿ, ಅವೆಲ್ಲವುಗಳು ಮೊಗವೆತ್ತಿ ಮೆರೆಯುತ್ತಿವೆ; ಅಲ್ಲದೆ ಪ್ರಾಯಕ್ಕೆ ಬಂದ ಮುಷ್ಯನಲ್ಲಿ ಶೃಂಗಾರಾದಿ ರಸಗಳು ಉಕ್ಕುತ್ತಿದ್ದರೂ, ಅಷ್ಟೇ ಪ್ರಮಾಣದಿ೦ದ ವೀರರಸವು ಉಕ್ಕುತ್ತಿರುವಂತೆ ಈ ಕಾವ್ಯಗಳಲ್ಲಿ ವೀರವಾಣಿಯು ಸ್ಪುಟವಾಗಿ ಹೊರಡುತ್ತಿದೆ. ಭಾರವಿಕವಿಯ ಕಿರಾತಾರ್ಜುನೀಯ, ಮಾಘಕವಿಯ ಶಿಶುಪಾಲವಧೆ, ನಾರಾಯಣಭಟ್ಟನ ವೇಣೀಸಂಹಾರ ಈ ಕಾವ್ಯಗಳೇ ವೀರವಾಣಿಯಖಣಿಗಳು. ಈ ವೀರ ಕಾವ್ಯಗಳಲ್ಲಿ ಕಾವ್ಯಗಳಿಗೆ ನಾಲಿಗೆಯು೦ಟಾಗಿ ಅವು ಮಾತನಾಡುತ್ತಿರುವವೆಂಬುವಷ್ಟರ ಮಟ್ಟಿಗೆ ಭಾಸವಾಗುತ್ತಿದೆ. ಬೇರೆ ಶಾಸ್ತ್ರೀಯ ಗ್ರಂಧಸ೦ಪತ್ತಿಯೂ ಈ ಕಾಲಕ್ಕೆ ಚೆನ್ನಾಗಿಯೇ ಬೆಳೆಯಿತು. ವಾಗ್ಭಟನೆಂಬ ಮಹಾವೈದ್ಯಶಾಸ್ತ್ರಜ್ಞನು ತನಗಿ೦ತ ಹಿ೦ದೆ ಆಗಿ ಹೋದ ಅನೇಕ ಗ್ರಂಧಕಾರರ ಗ್ರಂಥಗಳನ್ನೆಲ್ಲ ಸಂಗ್ರಹಿಸಿ, ಅಷ್ಟಾಂಗಹೃದಯವೆಂಬ ವೈದ್ಯಕ ಗ್ರ೦ಧವನ್ನೂ ರಸರತ್ನಸಮುಚ್ಚಯವೆಂಬ ರಸತಂತ್ರವನ್ನೂ ಬರೆದನು. ಮೇಲಾಗಿ ಆಕಳು, ಕುದುರೆ, ಮೊದಲಾದವುಗಳಿಗೆ ಕೊಡಬೇಕಾದ ಔಷಧಶಾಸ್ತ್ರವೂ ಈ ಕಾಲಕ್ಕೆ ಬಹುಮಟ್ಟಿಗೆ ವಿಕಾಸವಾಗಿ ಅವುಗಳನ್ನು ತಿಳಿಸುವಂಧ ಗ್ರ೦ಧಗಳಾದವು. ಆನೆಗಳ ಬೇನೆಯ ಚಿಕಿತ್ಸೆಯನ್ನೂ ಅವುಗಳಿಗೆ ಕೊಡತಕ್ಕ ಔಷಧಶಾಸ್ತ್ರವನ್ನೂ ಪಾಲಕಾಪ್ಯನೆಂಬವನು ರಚಿಸಿದನು. ಮೇಲ್ಕಾಣಿಸಿದ ಸಂಗತಿಗಳಮೇಲಿಂದ ಸಂಸ್ಕೃತವಾಙ್ಮಯದ ಅಭಿವೃದ್ಧಿಯಲ್ಲಿ ಈ ಕಾಲದವರು ಎಷ್ಟು ಮುಂದಾಳಾಗಿ ದುಡಿದು, ಅದನ್ನು ಸಂಪನ್ನಗೊಳಿಸಿದರೆಂಬುದು ವ್ಯಕ್ತವಾಗುತ್ತದೆ. ಪರಮಾರ್ಥ ಎಂಬೆಸರಿನ ಉಜ್ಜಯಿನಿಯ