ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೩೦೭

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪ್ರಕಟಿಸಲಾಗಿದೆ
೨೭೦
ಭಾರತೀಯರ ಇತಿಹಾಸವು.

ವಾಳುತ್ತಿದ್ದು, ಪಲ್ಲವರೊಡನೆ ಬಹು ದಿನಗಳ ವರೆಗೆ ಕಾಡುತ್ತಿರುವದು ಇತಿಹಾಸ ಪ್ರಸಿದ್ಧವಿರುವದರಿಂದ, ಅವರಲ್ಲಿ ಕ್ಷಾತ್ರತೇಜವು ಎಷ್ಟರ ಮಟ್ಟಿಗೆ ಇತ್ತೆಂಬುದಕ್ಕೆ ನಿದರ್ಶಕವಾಗಿದೆ. ಕದಂಬವಂಶ ಭೂಷಣನಾದ ಕಕುಸ್ಥವರ್ಮನು ಉತ್ತರಹಿಂದೂದೇಶದ ಚಕ್ರವರ್ತಿಯಾದ ಸಮುದ್ರಗುಪ್ತನೊಡನೆ ನೆಂಟಸ್ತನವನ್ನು ಬೆಳೆಸಿದ್ದನೆಂಬುದೊ೦ದು ಸಂಗತಿಯಿಂದ ಕದ೦ಬರ ದರ್ಪವು ಕರ್ನಾಟಕದೊಳಗೆ ಎಷ್ಟು ಪ್ರಕಾಶಿಸುತ್ತದೆಂಬುದೂ, ಆ ಪ್ರಭಾವಕ್ಕೆ ಮೆಚ್ಚಿ ಸಮುದ್ರಗುಪ್ತನಂಧ ಸಮ್ರಾಟನು ಅವರೊಡನೆ ಶರೀರಸ೦ಬ೦ಧವನ್ನು ಬೆಳೆಯಿಸಿದ್ದನೆಂಬುದೂ ಅವೆರಡು ಸಂಗತಿಗಳೂ ಒಂದೇ ಕಾಲಕ್ಕೆ ಪ್ರತೀತವಾಗುತ್ತವೆ. (ಇನ್ನು ವಾಙ್ಮಯದೃಷ್ಟಿಯಿಂದ ನೋಡಲು, ಗ೦ಗ ಕದ೦ಬರು ಕನ್ನಡ ಮಾತನ್ನಾಡುವವರಾದ್ದರಿಂದ ಇವರ ಕಾಲದಿಂದಲೇ ಅ೦ದರೆ ೫ನೇ ಶತಮಾನದಿಂದಲೇ ಶಿಲಾಲಿಪಿಗಳು ಇಣಿಕಿ ಹಾಕುತ್ತಿರುವ ಸಂಗತಿಯು ಮಹತ್ವದ್ದಾಗಿದೆ. ಆದರೂ ನಮಗೆ ಈ ಪ್ರಾಚೀನ ಕಾಲದ ಕನ್ನಡ ನುಡಿಯ ಗ್ರ೦ಧಗಳು ಸಿಕ್ಕಿಲ್ಲ; ಅ೦ತ ಗ೦ಗವ೦ಶದಲ್ಲಾಳಿದ ಕೆಲ ಅರಸರು ಸರಸ್ವತಿಯ ಭಕುತರಿದ್ದ ಬಗ್ಗೆ ದುರ್ವಿನೀತ ಪೂಜ್ಯಪಾದ ಮೊದಲಾದ ಅರಸುಗಳ ಹೆಸರುಗಳು ದೊರೆಯುತ್ತವೆ. ಕಾಲಚಕ್ರದ ಸುಳಿಗೆ ಸಿಕ್ಕು ಮು೦ದೆ ಗ೦ಗ ಕದ೦ಬವ೦ಶದ ರಾಜರ ಬಲವ ಕುಗ್ಗುತ್ತ ನಡೆದು ಕೊನೆಗೆ ಕರ್ನಾಟಕಮಂಡಲದೊಳಗೆ ಮಡಿ ಏರುತ್ತಿರುವ ಚಾಲುಕ್ಯ ಅರಸರಿಗೆ ಅವರು ಸಾಮಂತರಾಗಿ ಎಷ್ಟೋ ವರ್ಷ ಕಾಲ ಕಳೆಯಬೇಕಾಯಿತು. ಈ ಚಾಲುಕ್ಯರಿಂದಲೇ ಕರ್ನಾಟಕದ ಕೀರ್ತಿಯು ದಿಙ್ಮಂಡಲಗಳಲ್ಲೆಲ್ಲ ಮೊಳಗಿ ಬೆಳಗಿದ ಅತ್ಯಂತ ವೈಭವಶಾಲಿಯಾದ ಚರಿತ್ರವನ್ನು ಮುಂದೆಹೇಳಬೇಕಾದ್ದಿರುವದರಿಂದ ಅದನ್ನೀಗ ಪ್ರಸ್ತಾಪಿಸಿಟ್ಟದ್ದೇವೆ.