ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೩೦೯

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪ್ರಕಟಿಸಲಾಗಿದೆ
೨೭೨
ಭಾರತೀಯರ ಇತಿಹಾಸವು.

ಡಿಸಿ, ಹಿಂದೂಧರ್ಮದೊಳಗೆ ಸೇರಿಕೊಂಡರು.” ಎಂದು ಬರೆಯುತ್ತಾರೆ; ಆದರೂ ಅವರ ಬಗ್ಗೆ ಸಾಧಾರವಾದ ಇತಿಹಾಸವನ್ನು ಬರೆಯಲಿಕ್ಕೆ ನಮ್ಮ ಬಳಿ ಸಾಧನಗಳಿಲ್ಲದ್ದರಿಂದ ಅದನ್ನು ಹಾಗೆಯೇ ಬಿಟ್ಟು ಬಿಡಬೇಕಾಗಿದೆ. ೬೩೦ ರಿಂದ ೬೪೪ ನೇ ವರ್ಷಗಳ ಸುಮಾರಕ್ಕೆ ಚೀನ ದೇಶದ ಪ್ರಯಾಣಿಕನಾದ ಹ್ಯುಯೆನತ್ಸ೦ಗನು ಹಿಂದೂದೇಶಕ್ಕೆ ಯಾತ್ರೆಗಾಗಿ ಬಂದಂದಿನಿಂದ ಮತ್ತೆ ನಮ್ಮ ಚರಿತ್ರೆಯ ಕಾಲಕ್ಕೆ ಮೊದಲಾಗುತ್ತದೆನ್ನಲಿಕ್ಕೇನೂ ಅಡ್ಡಿಯಿಲ್ಲ. ಈತನು ಹಿಂದೂದೇಶಕ್ಕೆ ಬರುವ ಮುಂಚಿತವಾಗಿಯೇ ಮಾಳವಪ್ರಾ೦ತ್ಯದ ಧೊರೆಯಾದ ಶಿಲಾದಿತ್ಯನೆಂಬ ಬೌದ್ದ ಮತಾಭಿಮಾನಿಯಾದ ಅರಸರ ಆಳಿ ಹೋಗಿದ್ದನೆಂದೂ, ಆತನು ನಡೆಯಿಸಿದ ಅನೇಕ ಧಾರ್ಮಿಕ ನಡತೆಗಳು ಮಾಳವಪ್ರಾಂತದಲ್ಲಿ ನಡೆದಿದ್ದವೆಂದೂ, ಬೌದ್ಧರಿಗೆ ಈತನು ಬಹುಸರಿಯಾಗಿ ಸಹಾಯ ಮಾಡಿದನೆಂದೂ ತಿಳಿಯುತ್ತದೆ. ಇಂತಹ ಕತ್ತಲೆಗಾಲದೊಳಗೆ ಹುಯೆನತ್ಸಾಂಗನ೦ಧ ಬೆಳ್ಳಿಯ ಚಿಕ್ಕೆಯೊಂದು ಮೂಡಿ, ನಮ್ಮ ಇತಿಹಾಸವನ್ನು ಬರೆದಿಡದಿದ್ದರೆ ನಮ್ಮ ಗತಿಯು ಇನ್ನೂ ಹೆಚ್ಚು ಕನಿಕರ ಪಡತಕ್ಕುದಾಗುತ್ತಿದ್ದಿತು. ಇರಲಿ.

ಠಾಣೇಶ್ವರನು ಮನೆತನ:- ಇದೀಗ ಹಿಂದೂದೇಶದ ಇತಿಹಾಸದ ಆದಿಯುಗದೊಳಗಣ ಹಗಲಿರುಳಿನ ಚಕ್ರದೊಳಗಿ೦ದ ಹಾಯ್ದು ಮಧ್ಯಯುಗವು ಮೂಡುವ ಕಾಲದೊಳಗೆ ಕಾಲಿಡುತ್ತಿರುವೆವು. ಈ ಕಾಲದೊಳಗೆ ನಮ್ಮ ಕಣ್ಣುಗಳಿಗೆ ಎದ್ದು ಕಾಣಿಸಿ, ಅವುಗಳನ್ನು ಎಳೆದೊಯ್ಯುವ ನೋಟವೆಂದರೆ ರಾಣೇಶ್ವರದಲ್ಲಾಳುತ್ತಿದ್ದುದೊ೦ದು ಚಿಕ್ಕ ಅರಸುಮನೆತನ. ನಾವು ನಡೆಯುತ್ತಿರುವ ಏಳನೇ ಶತಮಾನದಲ್ಲಿ ಪ್ರಭಾಕರವರ್ಧನನೆಂಬವನು ಉತ್ತರಹಿಂದೂದೇಶದ ಅರಸರಲ್ಲಿ ಮುಖಂಡನೂ ಶೂರನೂ ಆಗಿ ಮರೆಯುತ್ತಿದ್ದನು. ಈತನು ತನ್ನ ಕೈಮೆಯಿಂದ ಹೂಣರನ್ನು ದೇಶಾ೦ತರಕ್ಕೆ ಅಟ್ಟಿ, ಲಾಟ, ಮಾಳವ, ಸಿಂಧ, ಗುಜ್ಜರ ಮೊದಲಾದ ಚಿಕ್ಕ ಚಿಕ್ಕ ಚಿಕ್ಕೆಗಳನ್ನೆಲ್ಲ ತನ್ನ ಪ್ರಭಾವದಿಂದ ಮುಚ್ಚಿ ಮರೆಮಾಡಿ ಅಳತೊಡಗಿ ಮುಂದೆ ಸ್ವಲ್ಪು ದಿನಗಳಲ್ಲಿ ಮಡಿದನು. ಪ್ರಭಾಕರವರ್ಧನನಿಗೆ ರಾಜ್ಯವರ್ಧನ, ಹರ್ಷವರ್ಧನ ಎಂಬಿಬ್ಬರು