ಆರ್ಯ ಪುಣ್ಯಭೂಮಿಯನ್ನು ಕಾಯಲು ಉತ್ತರಕ್ಕೆ ಹಿಮಾಲಯದಲ್ಲಿ ಯೋಗಿವರ್ಯನಾದ ಶ್ರೀ ಶಂಕರನ, ದಕ್ಷಿಣಕ್ಕೆ ಕನ್ಯಾಕುಮಾರಿಯ ರೂಪದಿಂದ ಆತನ ಅರ್ಧಾಂಗಿಯಾದ ಪಾರ್ವತಿದೇವಿಯೂ, ಸುತ್ತು ಕಡೆಯಿ೦ದ ಕ೦ದಕಗಳ೦ತೆ ಬೇರೆ ಬೇರೆ ಸಮುದ್ರ ಉಪ ನಾಗರಗಳ ರೂಪವನ್ನು ಧರಿಸಿಕೊ೦ಡ ಸಮುದ್ರನಾಧನ ಅಖಂಡವಾಗಿ ಕಾವಲ ನಡಿಸಿರುವರು. ಇನ್ನೂ ಒಂದು ಬಗೆಯ ಂದ ಭಾರತ ದೇಶವನ್ನು ಕುರಿತು ರೂಪಕ ಮಾಡಬಹುದು. ಮಾತೃಭೂಮಿಯೆಂದರೆ ತಾಯ್ತಾಡು. ತಾಯಿಯು ಒಬ್ಬನನ್ನಾಗಲಿ, ಹೆಚ್ಚು ಮಕ್ಕಳನ್ನಾಗಲಿ ಹೆತ್ತು ಹೊತ್ತು ಸಲಹುವಳು. ಆದರೆ ಭೂಮಿ ತಾಯಿಯು ಕೋ ವ್ಯವಧಿ ಜನಗಳನ್ನು ಅನ್ನ ನೀರು ಕೊಟ್ಟು ಪೋಷಿಸುತ್ತಾಳೆ. ಕಾಶ್ಮೀರವೇ ಮುಖವುಳ್ಳವಳಾಗಿಯ, ಸಿ೦ಧ ಪ್ರಾಂತ ಹಾಗೂ ಬ್ರಹ್ಮದೇ ಶಗಳೇ ಕೈಗಳುಳ್ಳವಳಾಗಿಯ ಉದ್ದಕ್ಕೂ ಹಾಗೆಯೇ ಕೆಳಗೆ ಕನ್ಯಾಕುಮಾರಿಯ ವರೆಗೆ ಪೂರ್ವ ಪಶ್ಚಿಮ ದಂಡೆಗಳೇ ಕಾಲುಗಳುಳ್ಳವಳಾಗಿಯೂ ಎದ್ದು ನಿಂತಿರುವ ಭಾರತ ಭೂ ಮಾತೆಯ ಮನೋಹರ ಭಾವಚಿತ್ರವನ್ನು ಮನದೊ ಳಗೆ ಕಲ್ಪಿಸಿಕೊ೦ಡು ಧ್ಯಾನ ಮಾಡ ತೊಡಗಿದರೆ, ನಮಗೆಷ್ಟು ಅನಂದವು ಉಕ್ಕೇರಿ ಬರುವದು ! ಬೇರೆಯವರ೦ತೆ ಭಾರತೀಯರಿಗೆ ಮಾತೃಭೂಮಿ ಯೆ೦ದರೇನೋ ಒಂದು ನಿರ್ಜೀವ ವಸ್ತುವಲ್ಲ. ಮಾತೃ ಸೌಹಾರ್ದ ದಿಂದ ತುಂಬಿ ತುಳುಕುತ್ಯ ರೂಪುಗೊಂಡು ನಿಂತಿರುವ ಈ ಕ್ಷಾತ್ ತಾಯಿಯೇ! ಅ೦ತೆಯೇ ಆರ್ಯರು ತಾಯಿ ಹಾಗೂ ತಾಲ್ಲೂಾಡು ಅವೆರಡೂ ಸ್ವರ್ಗಕ್ಕೂ ಮೇಲೆಂದು ಉಗ್ಗಡಿಸಿರುವರು.
ಹವೆ, ನೀರು, ಆಹಾರ:- ಸಾಮಾನ್ಯವಾಗಿ ಹಿಂದೂ ದೇಶ ವನ್ನೊ೦ದು ವಿಂಡವೆಂದು ಹೇಳಬಹುದು. ವಿಶಾಲವಾದ ಈ ಖಂಡ ದೊಳಗೆ ಇಂಗ್ಲೆ೦ಡದಂಧ ಚಳಿ ನಾಡನ್ನೂ, ಅನೇಕ ಹರದಾರಿಗಳ ವರೆಗೆ ನೆರಳಿನ ಸುಳಿವಿಲ್ಲದೆ, ಹುಲ್ಲು ಗಿಡಗಂಟಿ ತೊ ಪ್ಪಲಗಳನ್ನು ಸಹ ಒಣಗಿಸಿ ಸುಟ್ಟು ಬಿಡುವ ಆಫ್ರಿಕೆಯ೦ಥ ಬಿಸಿಲುಳ್ಳ ಬೈಲನಾಡನ್ನೂ ಕಾಣ ಬಹುದು. ಒಟ್ಟಿನಲ್ಲಿ, ಇಡೀ ಭರತಖಂಡವೇ ಸಮ ಸಿತೋಷ್ಣ ಕಟ ಬಂಧದಲ್ಲಿರುವದರಿಂದ, ಚಳಿಯಿಂದಾಗಲಿ, ಬಿಸಿಲಿನಿಂದಾಗಲಿ, ಹೇಳು