ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಭಾರತೀಯರ ಇತಿಹಾಸವು.

ವಂಥ ಅನಾಹುತಗಳೆನೂ ಒದಗದಿದ್ದರೂ, ವಿಧವಿಧದ ಹವೆಯ ಸೌಖ್ಯವೂ ದುಃಖವೂ ಚನ್ನಾಗಿಯೇ ಪ್ರತೀತಿಗೆ ಬರುವದುಂಟು. ಉತ್ತರದ ಸೀತವಾದ ಹವೆಯಲ್ಲಿ ಹುಟ್ಟಿ ಬೆಳೆಯುತ್ತಿರುವ ಜನರು ಗುಡ್ಡ ಗಾಡು ಜನರಿಗೆ ತಕ್ಕಂತೆ, ನಿಲುವಿಕೆಯಲ್ಲಿ ಎತ್ತರವುಳ್ಳವರೂ, ಗಟ್ಟಿ ಗರೂ, ತಾಳ್ಮೆಯುಳ್ಳವರೂ, ಶೂರರೂ ಆಗಿರುತ್ತಾರೆ; ಮತ್ತು ಅವರ ಆಹಾರವಾದರೂ ಗೋದಿಯೇ ಇರುವದನ್ನು ಜ್ಞಾಪಕದಲ್ಲಿಡತಕ್ಕ ಸಂಗತಿಯಾಗಿದೆ. ಈ ಮಾತಿಗೆ ಬಂಗಾಲಿಗಳೊಬ್ಬರು ಅಪವಾದವೆನ್ನಬಹುದು. ಏಕೆಂದರೆ ಅವರು ಅಕ್ಕಿಯನ್ನುಣ್ಣುವರು. ಅನೇಕರು ಮಾನುಗಳನ್ನು ತಿನ್ನುವ ವಾಡಿಕೆಯ ಉ೦ಟು, ಅಲ್ಲಿಂದ ಮುಂದೆ ಹಾಗೆಯೇ ಕೆಳಕ್ಕಿಳಿಯುತ್ತ ನಡೆದರೆ ಗುಜರಾಧ, ಮಹಾರಾಷ್ಟ್ರ, ಕರ್ನಾಟಕ ಜನರ ಆಹಾರಗಳು ಬಲುಮಟ್ಟಿಗೆ ಹೋಲುತ್ತವೆ. ಗುಜ್ಜರು ಗೊದಿಪ್ರಿಯ ರಾದಾಗ್ಯೂ ಅನ್ನ ಕೈ ಅಲ್ಲಗಳೆಯುವದಿಲ್ಲ. ದಕ್ಷಿಣಹಿಂದೂ ದೇಶದ ಅತ್ಯಲ್ಪ ಭಾಗದ ಮರಾಠಿಗರಿಗೂ, ಕನ್ನಡಿಗರಿಗೂ ಸೆಜ್ಜೆ, ಜೋಳ, ರಾಗಿ ಮುಂತಾದ ಧಾನ್ಯಗಳು ದಿನದ ಗಂಜಿ ಯಾಗಿರು ವವಾದರೂ ಕನ್ನಡನಾಡಿನ ಗಡಿ ಸೀಮೆಯನ್ನು ಬಿಟ್ರೊ ಡನೆ ನಮಗೆ ಮತ್ತೆ ಕೆಳಕ್ಕೆ ಎಲ್ಲೆಲ್ಲಿಯ ಅಕ್ಕಿಯ ಸಾಮ್ರಾಜ್ಯವೇ ನಾರೋ ದ್ವಾರವಾಗಿ ನಡೆದಿರುವದಾಗಿ ಕಾಣುತ್ತದೆ. ಒಟ್ಟಾರೆ ಹವೆ, ನೀರು, ಆಹಾರಾದಿಗಳ ನೈಸರ್ಗಿಕ ವ್ಯವಸ್ಥೆಯನ್ನು ನೋಡಿದರೆ ಗುಜಿರಾಥ, ಮಹಾರಾಷ್ಟ್ರ, ಕರ್ನಾಟಕ ಅವೆಲ್ಲವೂ ಹೆಚ್ಚು ಕಡಿಮೆ ಒ೦ದ ಸರದೊಳಗಿನ ಮಣಿಯ೦ತಿದ್ದರೂ, ಅವುಗಳಲ್ಲಿ ಆಯಾ ದೇಶಚಾರಕ್ಕನುಗುಣ ವಾಗಿ ಒಂದೊಂದು ಬಗೆಯ ಸಾಂಸ್ಕೃತಿಕ ವೈಶಿಷ್ಟ್ಯಗಳು ತೋರುತ್ತವೆ. ದಕ್ಷಿಣ ಹಿಂದೂ ದೇಶವನ್ನು ದೇವರು ನದಿಗಳಿಂದ ಸಮೃದ್ಧಗೊಳಿಸಿದ್ದು, ಅಲ್ಲಿ ಮಿಕ್ಕ ನಾಡಿನಲ್ಲಿರುವಂತೆ ಕಾಲುವೆಗಳಿರದ್ದರಿಂದ ಜನರಿಗೆ ಹನ್ನೆರಡು ಕಾಲ ಮಳೆ ನೀರಿಗಾಗಿ ಮಳೆ ರಾಜನ ರಾರಿಯನ್ನು ಕಾಯುತ್ತಿರಬೇಕಾಗುತ್ತದೆ, ಈ ಸ್ಥಿತಿಯು ಕನ್ನಡ ನಾಡಿನ ಬೆಳವಲದವರಿಗೆ ಪ್ರತಿ ವರ್ಷ ಅನುಭವಗ೦ಡ ಮಾತಾಗಿದೆ. ಆದರೂ ದಕ್ಷಿಣದ ತೆಲಗು, ತಮಿಳ, ಮಲಿಯಾಳ ನಾಡುಗಳಿಗೆ ಸಮುದ್ರವು ಸಮೀಪರುವದರಿಂದ,