ಅವರಿಗೆ ಮಳೆಯಿಲ್ಲದೆ ತೊಂದರೆಯಾಗುವದಿಲ್ಲ; ಏಕೆಂದರೆ ಮಳೆಗಾಲದ ಗಾಳಿಗಳು ಸಾಮಾನ್ಯವಾಗಿ ದಕ್ಷಿಣದಿಂದಲೇ ಬೀಸುತ್ತಿರುವದರಿಂದ ದಕ್ಷಿ ಣದ ಬಾಗಿಲದಲ್ಲಿಯೇ ಮೇಲಿನ ಜನಾ೦ಗದವರಿರುವದರಿಂದ ಮಳೆ ಯಿಲ್ಲವೆಂದು ಅಗುವದ೦ತ ದೂರ ಇರಲಿ; ವರುಷ ವರ್ಷಕ್ಕೆ ನೆರೆ ಹಾವಳಿಗೆ ಸಿಲುಕದಿದ್ದರೆ ಅವರ ವುಣ್ಯ! ದಕ್ಷಿಣದಲ್ಲಿರುವ ಕೆಲವು ಜನ ಕನ್ನಡಿಗರು, ತೆಲಗು, ತಮಿಳರು, ಮಲಿಯಾಳ ರು ಅವರೆಲ್ಲರ ಮುಖ್ಯ ವಾದ ಆಹಾರವು ಅಕ್ಕಿಯೇ ಅಲ್ಲಿಯ ಹವೆಯು ಬಹು ಉಷ್ಣ ವಿರುವ ದರಿ೦ದ ಆ ಜನರಿಗೆ ಹೆಚ್ಚು ಹುಳಿಯನ್ನು ಊಟದೊಳಗೆ ಬಳಿಸಬೇಕಾ ಗುತ್ತದೆ. ಆದರೂ ಇವರಲ್ಲಿ ಕೆಲವರಿಗೆ ಸಮುದ್ರ ದಂಡೆಯು ಹತ್ತರ ವಿರುವದರಿಂದ ಸಮುದ್ರದಿಂದ ಆಗುವ ಕೆಲವು ಅನುಕೂಲ್ಯಗಳೇನೋ ಅಪೂರ್ವವಾಗಿರುವದರಿಂದ ಸಮುದ್ರ ದಂಡೆಯಲ್ಲಿರುವವರು ಧನ್ಯರೆಂದೆ ಬೇಕಾಗುತ್ತದೆ. ಸಮುದ್ರ ದಂಡೆಯಲ್ಲಿರುವ ನಾಡಿನಲ್ಲಿ ಅಕ್ಕಿ, ಅಡಿಕೆ, ತೆಂಗು ಮೊದಲಾದವುಗಳು ಬೆಳೆಯುತ್ತಿದ್ದುದರಿಂದ ಎತ್ತರವಾದ ತೆಂಗಿನ ಬನಗಳಿ೦ದ ಎದ್ದು ಕಾಣುವ ಪ್ರದೇಶಗಳು ಬಹು ರಮ್ಯವಾಗಿರುತ್ತವೆ. ದಕ್ಷಿಣದವರು ಉತ್ತರದವರ೦ತೆ ವಿಶೇಷವಾಗಿ ಯುದ್ಧ ಪ್ರಿಯರಲ್ಲ; ನಾಧಾರಣವಾಗಿ ಅವರ ಆಹಾರವು ಅಕ್ಕಿಯ ೦ಧ ನಾತ್ವಿಕ ಪದಾರ್ಧವಿರುವದರಿಂದ ಮೇಧಾವ೦ತರು, ವ್ಯಾಪಾರ ಕೈಗಾರಿಕೆಗಳಲ್ಲಿ ಅವರ ಮನಸಿನ ಒಲವು ಹೆಚ್ಚು ಓಡುತ್ತದೆ.
ಧರ್ಮವೇ ಭಾರತದ ಜೀವವು:- ಈ ಮರೆಗೆ ಹಿ೦ರೂ ದೇಶದ ಹವೆಯು ಕೆಲವೆಡೆಯಲ್ಲಿ ಎಲ್ಲ ಅಂಶಗಳಿಂದ ರಮ್ಯವಾಗಿಯೂ, ಹಿತಕರವಾಗಿಯೂ, ಕೆಲವೆಡೆಯಲ್ಲಿ ಉಷ್ಣದಿಂದ ಪ್ರಖರವಾಗಿಯ, ಮತ್ತೆ ಕೆಲವೆಡೆಯಲ್ಲಿ ಇನ್ನೂ ಹೆಚ್ಚಾದ ತಾಪದಿಂದ ಬಳಲಿಸುವಂಥದೂ ಆಗಿದೆ. ಇದು ಹೊರಗಣ ಸ್ಥಿತಿಯಾಯಿತು. ಒಳಗಣ ಸ್ಥಿತಿಯನ್ನು ನಿರೀಕ್ಷಿಸಿದರೆ, ಭರತಖಂಡದ ಜೀವಾಳವು ಎಲ್ಲ ಖಂಡಗಳಿಂದ ಭಿನ್ನವೂ ವಿಲಕ್ಷಣವೂ ಆದುದಾಗಿ ತಿಳಿಯುವದು. ಹಿಂದೂ ದೇಶದ ಎಲ್ಲ ಪ್ರದೇಶ ಭಾಗಗಳನ್ನು ಸೂಕ್ಷ್ಮದೃಷ್ಟಿಯಿಂದ ನೋಡುತ್ತ ನಲಿಯುತ್ತ ಅಲೆದು ಕೊ೦ಡು ಬ೦ದತಿ, ಭರತಖಂಡದೊಳಗೆ ನಮಗೊ೦ದು ಬಗೆಯ