ವಿಷಯಕ್ಕೆ ಹೋಗು

ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೩೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಧರ್ಮಮತ ವಿಚಾರಗಳು.
೨೮೯

ಯಜ್ಞಶಾಲೆ, ಧರ್ಮಶಾಲೆಗಳಿಗಾಗಿ ಆಕಾಲದ ಮಟ್ಟಿಗೆನೇ ಹಂದರಗಳನ್ನು ಹಾಕುತ್ತಿದ್ದರು. ಮಳೆಗಾಲ ಬಂದೊಡನೆ ತೆಗೆದುಬಿಡುತ್ತಿದ್ದರು. ದಂಡಿನ ವ್ಯವಸ್ಥೆಯು ಬಹು ಚನ್ನಾಗಿದ್ದಿತು. ಅರಸುಮನೆತನಕ್ಕೆ ಸ೦ಬ೦ಧಪಟ್ಟವರನ್ನೂ, ಕೈಕೆಳಗಿನ ರಾಜರ ಮನೆತನದವರನ್ನೂ, ಪ್ರಜೆಗಳಲ್ಲಿಯ ಅನೇಕ ಜಾತಿಯ ಜನರನ್ನೂ ದಂಡಿನೊಳಗೆ ಸೇರಿಸಿಕೊಳ್ಳುತ್ತಿದ್ದುದರಿಂದ ಅವರೆಲ್ಲರಲ್ಲಿ ಸ್ವಾಮಿಯಬಗ್ಗೆ ಅಭಿಮಾನಜ್ಯೋತಿಯು ಹೊಳೆಯುತ್ತಿದ್ದಿತು. ದಂಡಿನವರ ಒ೦ದೊ೦ದು ಗು೦ಪಿಗೆ ಒಬ್ಬ ಅಧಿಕಾರಿ, ಈ ಅಧಿಕಾರಿಗಳನ್ನೆಲ್ಲ ನೋಡಿಕೊಳ್ಳುವವನೇ ಸೇನಾಪತಿ. ದಕ್ಷಿಣ ದೇಶದ ರಾವುತರು ಬಹು ಕಾಲದಿಂದ ಹೆಸರು ಪಡೆದವರಾದ್ಧರಿಂದ ಹರ್ಷನು ಅವರನ್ನು ತನ್ನ ದ೦ಡಿನಲ್ಲಿರಿಸಿದ್ದವು. ಈ ದಂಡಾಳುಗಳ ವೆಚ್ಚವನ್ನೆಲ್ಲ ರಾಜನು ತನ್ನ ಹಣದಿಂದಲೇ ಸಾಗಿಸುತ್ತಿದ್ದನು. ತನ್ನ ದೇಶರಕ್ಷಣೆಗಾಗಿ ಎರಡನೇ ಯಾವುದೋ ಒಂದು ದೇಶದ ದ೦ಡಾಳುಗಳನ್ನು ಬಾಡಿಗೆಯಿಂದ ತ೦ದಿರಲಿಲ್ಲ. ತನ್ನ ದೇಶರಕ್ಷಣೆಗಾಗಿ ಬೇರೆ ದೇಶದ ದ೦ಡಾಳುಗಳಿಗೆ ಬಾಡಿಗೆ ಕೊಟ್ಟು ಇಡುವುದಕ್ಕಿಂತ ಹೆಚ್ಚಿನ ಅವಮಾನವು ಮತ್ತಾವುದು ? ರಾಷ್ಟ್ರೀಯ ಸೈನ್ಯದೊಳಗೆ ಕೆಚ್ಚೆದೆಯ ಕಾದಿಟ್ಟ ದ೦ಡಾಳುಗಳಿದ್ದು, ವಂಶಪರಂಪರೆಯಿಂದ ನಡೆದುಬಂದ ಕ್ಷಾತ್ರವೃತ್ತಿಯು ಅವರ ಮೈಯಲ್ಲುಂಡು ನುರಿತುಬೆರತು ಹೋಗಿತ್ತು.

ಧರ್ಮಮತ ವಿಚಾರಗಳು:- ಹರ್ಷನಾಳ್ವಿಕೆಯಲ್ಲಿ ಒಡೆದು ಕಾಣುವಂಥ ಹೆಚ್ಚಿನ ಸಂಗತಿಗಳೆಂದರೆ; ಬೌದ್ಧ, ಜೈನ ಮತ್ತು ಹಿಂದೂ ಮತಗಳ ಜನರಲ್ಲಿಯ ಐಕಮತ್ಯವು; ಮತ್ತು ಪರಸ್ಪರ ಸಹಾನುಭೂತಿಯು. ಈ ಮೂರು ಮತಗಳು ಒಡಹುಟ್ಟಿದ ಅಣ್ಣತಮ್ಮಂದಿರಂತೆ ಕೈಕೈ ಹಿಡಿದುಕೊಂಡು ಸಾಗುತ್ತಿದ್ದವೆಂದರೆ ಹೆಚ್ಚು ಒಪ್ಪುವದು. ಹೀಗಿದ್ದುದರಿಂದ ಈ ಮತಗಳು ಒಂದೇ ರಾಜ್ಯದೊಳಗೆ ಒಲ್ಮೆನಲ್ಮೆಯಿ೦ದೊಡಗೂಡಿ ನಲಿದಾಡುತ್ತಿದ್ದುದೇನೂ ಸೋಜಿಗದ ಮಾತಲ್ಲ. ಒಂದೇ ಕುಟುಂಬದೊಳಗಿನವರಾದ ತ೦ದೆ ಮಕ್ಕಳಲ್ಲಿ ಸಹ ಒಂದು ಬಗೆಯ ಮತನಸ್ವಾತ೦ತ್ರ್ಯದ ಮನೋಜ್ಞವಾದ ಆನಂದವು ಕಂಗೊಳಿ