ವಿಷಯಕ್ಕೆ ಹೋಗು

ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೩೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೨೯೦
ಭಾರತೀಯರ ಇತಿಹಾಸವು.

ಸುತ್ತಿತ್ತು. ಇದಕ್ಕೆ ಹರ್ಷವರ್ಧನನ ತಂದೆಯಾದ ಪ್ರಭಾಕರವರ್ಧನನು ಸೌರನಿದ್ದುದೂ, ಅಣ್ಣನಾದ ರಾಜ್ಯವರ್ಧನನು ಬೌದ್ಧನಿದ್ದುದೂ, ಹರ್ಷವರ್ಧನನು ಶೈವನಿದ್ದುದೂ ಅವೇ ಉದಾಹರಣೆಗಳು ಸಾಕು. ಇಷ್ಟೊಂದು ವತಸ್ವಾತಂತ್ರ್ಯವು ಹಿಂದೂ ದೇಶದ ಯಾವ ಕಾಲದ ಚರಿತ್ರೆಯಲ್ಲಿಯೂ ಕಂಡುಬರುವದಿಲ್ಲ. ಈ ಮೇರೆಗೆ ಮೇಲ್ಕಾಣಿಸಿದ ಎರಡೂ ಮತದವರು ಸಲುವಳಿಯಿಂದಿರಲು ಅವರೀರ್ವರೂ ಮರ್ತಿ ಪೂಜಕರಾಗಿದ್ದುದೇ ಮುಖ್ಯ ಕಾರಣ. ಬೌದ್ದಮತಸ್ಥಾಪಕನಾದ ಬುದ್ಧದೇವನು ಈಶ್ವರನನ್ನು ಅಲ್ಲಗಳೆಯುವ ಮಟ್ಟಿಗೆ ನಾಸ್ತಿಕವಾದಿಯೂ ಅ೦ತಲೇ ಮೂರ್ತಿಪೂಜೆಯ ವಿರೋಧಿಯಾಗಿದ್ದರೂ ಅವನ ಘಟವು ಬಿದ್ದುಹೋದ ನಂತರ ಆತನ ಅನುಯಾಯಿಗಳು ಅವನನ್ನೇ ಪರಮೇಶ್ವರನೆಂದು ಬಗೆದು ಅವನ ಮೂರ್ತಿ ಮಾಡಿಸಿ ಪೂಜೆ ನಡಿಸಿದರು. ಮುಂದೆ ಮಹಾಯಾನ ಸ೦ಧದವರಲ್ಲಿಯ೦ತೂ ಈ ಮೂರ್ತಿ ಪೂಜೆಯ ಜೊಳ್ಳಾದ ಸೋಗು ಬಲಿಯುತ್ತ ಹೋಗಿ, ಜಗವೆಲ್ಲ ಹರಡಿ ೬ನೇ ಶತಮಾನವೆಂದರೆ ಮೂರ್ತಿಪೂಜೆಯ ಯುಗವೆಂದು ಹೆಸರುವಾಸಿಯಾಯಿತು. ಹಿಂದುಗಳೂ, ಬೌದ್ದರೂ, ಕ್ರಿಸ್ತರೂ, ಸೆಮಿಟಿಕರೂ ಎಲ್ಲರೂ ಮೂರ್ತಿಪೂಜೆಯ ಪೂಜಾರಿಗಳಾಗಿ ಅದರೊಳಗೆ ನಾಮುಂದೆ ತಾಮು೦ದೆ೦ದು ಮೇಲಾಟ ನಡಿಸಿರುವಂತೆ ತೋರುತ್ತಿದ್ದಿತು. ಆದರೆ ಭಗವಂತನ ಅಗಾಧವಾದ ಲೀಲೆಯ೦ತಹದೋ? ಈ ಮೂರ್ತಿಪೂಜಕರ ತ೦ಡಿನೊಳಗಿಂದಲೇ "ಕುಲಕ್ಕೆ ಕೇಡು ಕೊಡಲಿಯ ಕಾವು" ಎಂಬಂತೆ ಮೂರ್ತಿಭಂಜಕರದೊ೦ದು ಪಂಗಡವು ಮೆಲ್ಲನೆ ಮತ್ತೊಂದೆಡೆಯಲ್ಲಿ ಮೊಳಿಕೆಯೊಡೆಯುತ್ತಿದ್ದಿತು. ಅದು ಯಾರ ಕನಸುಮನಸಿನಲ್ಲಿ ಕೂಡ ಇಣಿಕಿ ಹಾಕಿರಲಿಲ್ಲ. ಹಿಂದೂಜನರಂತೂ ಈ ಮೂರ್ತಿ ಪೂಜೆಯ ತಿಕ್ಕಮುಕ್ಕಾಟದೊಳಗೆ ಸ೦ಪೂರ್ಣವಾಗಿ ತಮ್ಮ ಮನಸನ್ನೂ ಬುದ್ಧಿಯನ್ನೂ ಹಣವನ್ನು ಮಾರಿಕೊಂಡು ಮಹಾ ಮಹಾ ಪ್ರಚಂಡವಾದ ದೇವಾಲಯಗಳನ್ನೋ, ಸ್ತೂಪಗಳನ್ನೋ, ಬಸದಿಗಳನ್ನೋ ಕಟ್ಟಿಸಿ, ಮನುಷ್ಯನೆತ್ತರ ಮೂರ್ತಿಗಳನ್ನು ವ್ಯಾಪಿಸಿ, ಅದಕ್ಕಾಗಿ ನೀರಿನಂತೆ ದುಡ್ಡನ್ನು ಪೋಲು ಮಾಡುತ್ತಿದ್ದರು. ಎಲ್ಲಿ ನೋಡಿದಲ್ಲಿ