ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೩೩೧

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪ್ರಕಟಿಸಲಾಗಿದೆ
೨೯೪
ಭಾರತೀಯರ ಇತಿಹಾಸವು.

ತಮಿಳುನಾಡಿನಲ್ಲಿ ಪಲ್ಲವರೂ ತಮ್ಮ ಚಂಡಪ್ರತಾಪದಿಂದ ಮೆರೆಯುತ್ತಿದ್ದರು. ಒಂದು ಗಳಿಗ್ಗೆ ಚಾಲುಕ್ಯರು ಏಳಲಿ, ಮತ್ತೊಂದು ಕ್ಷಣಕ್ಕೆ ಪಲ್ಲವರು ಗೆಲಿಯಲಿ, ಅದೇನೇ ಇದ್ದರೂ ಅವೆರಡೇ ಸಾರ್ವಭೌಮ ಮನೆತನಗಳು ದಕ್ಷಿಣಹಿಂದೂದೇಶಕ್ಕೆ ಲಲಾಮಭೂತವಾಗಿದ್ದವು. ಇನ್ನುಳಿದ ಗಂಗ, ಕದಂಬ, ರಾಷ್ಟ್ರಕೂಟ, ಅಳುಪ ಮೊದಲಾದ ಅರಸು ಮನೆತನಗಳು ಈ ಕಾಲಕ್ಕೆ ಎಣ್ಣೆಯಿಲ್ಲದ ದೀಪಗಳಂತೆ ಯಾರೊಬ್ಬರ ಸಾಮ೦ತರಾಗಿ ಕಾಲಕಳೆಯುತ್ತಿದ್ದವು. ಚಾಲುಕ್ಯರ ಇಮ್ಮಡಿಪುಲಿ ಕೇಶಿಯ ಲೋಕೋತ್ತರವಾದ ವೀರ್ಯವೇ ಈ ಕಾಲಕ್ಕೆ ಚಾಲುಕ್ಯ ವಂಶಿಯರ ಮಾನವನ್ನೂ ಕಾಯಲೂ, ಕರ್ನಾಟಕದ ಅಭಿಮಾನವನ್ನು ಕಳೆಯೇರಿಸಲೂ ಕಾರಣವಾದವು. ಈ ಪೂರ್ವ ಚಾಲುಕ್ಯರಲ್ಲಿ ಬಹು ಮಟ್ಟಿಗೆ ಎಲ್ಲರೂ ವೀರರಾಜರೇ ಆಗಿಹೋದ್ದರಿಂದ ಒಂದು ಬಗೆಯಿ೦ದ ಆ ವೀರ ಮನೆತನದ ಚರಿತ್ರವೆಂದರೆ ಕರ್ನಾಟಕದ ಚರಿತ್ರೆ ! ಅವರ ಸಿರಿಗಾಲವೇ ಕನ್ನಡಿನ ಸಿರಿಗಾಲವು! ಅವರಲ್ಲಿ ಬದಾಮಿಯ ಇಮ್ಮಡಿ ಸತ್ಯಾಶ್ರಯ ಪುಲಿಕೇಶಿಯೆ೦ದರೆ ಕಿರೀಟಪ್ರಾಯನು. ಈತನು ದಕ್ಷಿಣದೊಳಗಿನ ಪಲ್ಲವ, ಚೋಳ, ಚೇರ, ಪಾ೦ಡ್ಯ, ಕಳಿ೦ಗ ಮೊದಲಾದ ರಾಜರುಗಳನ್ನು ಒಕ್ಕಲಿಕ್ಕಿ ನೂರು ಹಡಗುಗಳದೊ೦ದು ಪಡೆಯನ್ನು ತಕ್ಕೊಂಡು ಪಶ್ಚಿಮತೀರದಲ್ಲಿರುವ ಒಡ್ಡಿಜಗನ್ನಾಧನ ಪುರಿಪಟ್ಟಣವನ್ನು ಗೆದ್ದನು. 'ದಕ್ಷಿಣಾಪಥೇಶ್ವರ' ನೆಂದು ಹಿರಿದಾದ ಬಿರುದನ್ನು ತೊಟ್ಟನು. ಮು೦ದೆ ಉತ್ತರಕ್ಕೆ ಸಾಗಿ, ಅಲ್ಲಾಳುತ್ತಿರುವ ಗುಜ್ಜರ, ಮಾಳವ, ಲಾಟರನ್ನು ಲೀಲೆಯಿ೦ದ ಅ೦ಗೈಯಲ್ಲಿ ತೆಗೆದುಕೊಂಡನು. ಆದರೆ ಉತ್ತರದ ಸಾರ್ವಭೌಮನಾದ ಶ್ರೀಹರ್ಷನನ್ನೂ ನರ್ಮದೆಯ ದ೦ಡೆಯ ಹತ್ತರ ನೀರಿಳಿಸಿ, ಅವನನ್ನು ನರ್ಮದೆಯಾಚೆಗಟ್ಟಿದ್ದೊಂದು ಕರ್ನಾಟಕ ಇತಿಹಾಸದೊಳಗೆ ಚಿನ್ನದಕ್ಷರಗಳಿ೦ದ ಬರೆದಿಡತಕ್ಕ ಬಂಗಾರದಂಧ ಮಾತು. ಹರ್ಷನನ್ನು ಗೆದ್ದುದರಿಂದ ಈತನಿಗೆ ಪರಮೇಶ್ವರನೆಂಬ ಬಿರುದು ದೊರೆಯಿತು.


ಪದ್ಧತಿಯಿರುವದರಿಂದ ಆ ವಿಷಯವನ್ನಿಲ್ಲಿ ನಾವು ಹೆಚ್ಚು ಚಚಿ೯ಸುವದಿಲ್ಲ. ಹೆಚ್ಚಿನ ವಿಷಯವನ್ನು 'ಗತವೈಭವ' ಕನಾ೯ಟಕ ಕೈಪಿಡಿಗಳಲ್ಲಿ ನೋಡಬಹುದು.