ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೩೩೦

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪ್ರಕಟಿಸಲಾಗಿದೆ
೨೯೩
ದಕ್ಷಿಣಹಿಂದೂದೇಶ.

ಕ್ಷಣವೇ ಧರ್ಮಕ್ಕಾಗಿ ಮಾಂಸಾಹಾರವನ್ನು ಬಹಿಷ್ಕರಿಸಿದ ಸಂಗತಿಯು ಜಗತ್ತಿನ ಇತಿಹಾಸದೊಳಗೆ ಹಿರಿದಾಗಿದೆ. ಇದರಿಂದ ಹಿಂದೂಜನರಿಗೆ ಅಧ್ಯಾತ್ಮಜ್ಞಾನದ ಪಟ್ಟವು ದೊರೆಯಿತೇನೊ ನಿಜ, ಆದರೆ ಅಧ್ಯಾತ್ಮಜ್ಞಾನದ ಬೆಲೆಯನ್ನೂ, ಬೆಳಕನ್ನೂ, ಭಾರಣೆಯನ್ನೂ ಚನ್ನಾಗಿ ತಿಳಿದಳೆದು ನೋಡದ ಹಿಂದೂಜನರ ಪಾಲಿಗೆ ಕಾಲಕ್ರಮದಿಂದ ಅಧ್ಯಾತ್ಮಜ್ಞಾನವೆಂಬುದು ಕನ್ನಡಿಯೊಳಗಿನ ಗಂಟಾಗಿ ಪರಿಣಮಿಸಿ, ಅದನ್ನು ಕಾಯ್ದುಕೊಳ್ಳಲಿಕ್ಕೆ ಒದ್ದಾಡುತ್ತಿರಲು ಕೈಯೊಳಗಿನ ಗ೦ಟಾದ ರಾಜಕೀಯ ಸ್ವಾತಂತ್ರ್ಯವೇ ನಮ್ಮ ಕೈ ಬಿಟ್ಟು ಹೋಯಿತು. ಈ ಮೇರೆಗೆ ತ್ರಿಶಂಕುವಿನಂತೆ, ಮುಗಿಲಲ್ಲಿಯೂ, ನೆಲದ ಮೇಲೆಯೂ ಇಲ್ಲದೆ ಅಧ್ಯಾತ್ಮಜ್ಞಾನದ ನಿಜಸ್ವರೂಪವನ್ನರಿಯದೆ ಬಾಯಿ ಬಡುಕವಾದ ನಮ್ಮ ಪುರಾಣ ಜನಾಂಗವು ರಾಜಕೀಯ ದೃಷ್ಟಿಯಿಂದಲೂ ಹಣಕ್ಕಿಂತ ಕಡೆಯಾಯಿತು. ರಾಜಕೀಯ ಜೀವನದಲ್ಲಿ ಜೀವಕಳೆಯಿಲ್ಲದ್ದರಿಂದ ಸಾಮಾಜಿಕ ಧಾರ್ಮಿಕ ಜೀವನಗಳೂ ಹುಳತು ಅಳಿದು ಹೋಗಲು, ಒ೦ದಾನೊಂದು ಕಾಲಕ್ಕೆ ಜಗದೊಳಗೆ ಗುಡುಗಾಡುತ್ತಿರುವ ಸಿ೦ಹದೊಳಗಿನ ಜೀವಕಳೆಯು ಗಾಳಿಗೆ ಗಾಳಿಯಾಗಿ ಹೋಗಲು, ಹಿಂದೂಜನಾ೦ಗವು ಎಲುಬಿನ ಹಂದರವಾಗಿ ನಿಂತುಕೊಂಡಿತು.

ದಕ್ಷಿಣ ಹಿಂದೂ ದೇಶ:- ಉತ್ತರಹಿ೦ದೂದೇಶದೊಳಗೆ ನಡೆದ ರಂಗಭೂಮಿಯಿಂದ ಕ್ಷಣಹೊತ್ತು ಮರೆಯಾಗಿ ನಾವು ದಕ್ಷಿಣಹಿಂದೂದೇಶಕ್ಕೆ ಇಳಿದು ಬಂದರೆ, ಉತ್ತರದೇಶದಷ್ಟೇ ಹೆಚ್ಚೇನು ? ಅದಕ್ಕಿಂತ ಗು೦ಜಿ ತೂಕ ಹೆಚ್ಚು ವೈಭವಗೌರವಗಳಿಂದ ಕೂಡಿದ ನೋಟವು ನಮ್ಮ ಕಣ್ಣಿಗೆ ಕಟ್ಟುತ್ತದೆ. ದಕ್ಷಿಣಹಿಂದೂದೇಶದೊಳಗಿನ ಚರಿತ್ರೆಯಲ್ಲಿ ಸಹ ನಾವೀಗ ಕರ್ನಾಟಕ ಹಾಗೂ ತಮಿಳ ಹೀಗೆರಡು ವಿಧವಾಗಿ ವಿಂಗಡಿಸಿದರೆ ಒ೦ದೊ೦ದು ವಿಷಯಗಳನ್ನು ಚರ್ಚಿಸಿ ಮನದಟ್ಟು ಮಾಡಿಕೊಳ್ಳಲು ಅನುವಾಗುವದರಿಂದ ಅದೇ ಕ್ರಮವನ್ನನುಸರಿಸುವದುಚಿತ. ಈ ಕಾಲಕ್ಕೆ ದಕ್ಷಿಣಹಿ೦ದೂದೇಶದೊಳಗೆ ಕರ್ನಾಟಕದಲ್ಲಿ ಚಾಲುಕ್ಯರೂ,*


* ಟಿಪ್ಪಣಿ- ಚಾಲುಕ್ಯ ಹಾಗೂ ಪಲ್ಲವರ ಸಂಗತಿಗಳು ಕಿರಿಯ ಕನ್ನಡಿಗರಿಗೆ ಪ್ರಾಥಮಿಕ ಅಭ್ಯಾಸದ ವೇಳೆಯಲ್ಲಿಯೇ ಚರಿತ್ರೆಯ ಬಾಲಗುಟ್ಟಿಯೆಂದು ಹಾಕುವ