ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೩೪೦

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪ್ರಕಟಿಸಲಾಗಿದೆ
೩೦೩
ಇಸ್ಲಾಮಧರ್ಮ ಸ್ಥಾಪಕನಾದ ಮಹಮ್ಮದ ಪೈಗಂಬರ.

ಚರಿತ್ರೆಯು ಇನ್ನೂ ಮುಂದಿದೆ. ಬಲುಮಾತಿನಿ೦ದೇನು ? ದಕ್ಷಿಣನಾಡಿಗೇ ಈ ಕಾಲವೆಂದರೆ ಎಚ್ಚರಗಾಲವು. ದಾಕ್ಷಿಣಾತ್ಯರು ಹಿಂದೂ ದೇಶದ ರಂಗಭೂಮಿಯ ಮೇಲೆ ತಮ್ಮ ಪಾಲಿಗೆ ಬಂದ ಸೋಗನ್ನು ಮಿಕ್ಕವರು ಬೆರಳು ಕಚ್ಚಿಕೊಳ್ಳುವಂತೆ ಆಡಿ ತೋರಿಸಿದ್ದು ಬಹು ಅಭಿಮಾನದ ಸ೦ಗತಿಯು.

ಇಸ್ಲಾಮಧರ್ಮ ಸ್ಥಾಪಕರಾದ ಮಹಮ್ಮದ ಪೈಗಂಬರ:- ಇದೇ ಶತಮಾನದೊಳಗೆ ಅರಬಸ್ಥಾನದ ಮರುಭೂಮಿಯ ಗುಡ್ಡ ಗಾಡುನಾಡಿನಲ್ಲಿ ಮುಸಲ್ಮಾನಧರ್ಮಸ್ಥಾಪಕನಾದ ಮಹಮ್ಮದ ಪೈಗಂಬರ ಎ೦ಬ ದೇವದೂತನೊಬ್ಬನು ಭೂತಳದಲ್ಲಿ ಹುಟ್ಟಿಬಂದನು. ಕಾಡು ಮತದ ದವಡೆಗೆ ಶಿಕ್ಕು ಒದ್ದಾಡುತ್ತಿರುವ ಅರಬರ ಮನಸನ್ನು ಈತನು ತನ್ನೆಡೆಗೆ ಎಳೆದುಕೊ೦ಡು ಅವರಲ್ಲಿ ಧರ್ಮದಿಂದೊಡಗೂಡಿದ ಕ್ಷಾತ್ರ ತೇಜವನ್ನು೦ಟು ಮಾಡಿದನು. ಇ. ಸ. ೫೭೦ ರಲ್ಲಿ ಹುಟ್ಟಿದ ಈತನಿಗೆ ಚಿಕ್ಕ ವಯಸ್ಸಿನಲ್ಲಿಯೇ ತಾಯಿಯು ಮಡಿದು ಹೋದ್ದರಿ೦ದ ಪರದೇಶಿತನ ಬ೦ದಿತು. ಚಿಕ್ಕಪ್ಪನಾದ ಅಬುತಾಲೀಬ ಎಂಬವನು ಈತನನ್ನು ರಕ್ಷಿಸಿದನು. ಚಿಕ್ಕಂದಿನಲ್ಲಿಯೇ ಈತನು ಕಕ್ಕನೊಡನೆ ವ್ಯಾಪಾರಕ್ಕಾಗಿ ಸಿರಿಯಾ ಮುಂತಾದ ಪ್ರಾಂತಗಳಿಗೆ ಆಗಾಗ್ಗೆ ಹಿಂಬಾಲಿಸುತ್ತಿದ್ದನು. ೧೮ ನೇ ವರ್ಷದ ಕುಮಾರನಿರುವಾಗಲೇ ಈತನು ಕಕ್ಕನೊಡನೆ ಒಂದು ಕಾಳಗಕ್ಕೆ ಹೋಗಿ, ಆಗಿನಿಂದಲೇ ಒಂದು ವಿಧದಿಂದ ಕಾಳಗದ ಶಿಕ್ಷಣವನ್ನು ಪಡೆದನೆನ್ನಲಿಕ್ಕೇನೂ ಅಡ್ಡಿಯಿಲ್ಲ. ಒಂದೊಂದು ಕ್ಷಣಕ್ಕೆ ಗೋಸುಂಬೆಯ೦ತೆ ಅವನ ಮನೋವೃತ್ತಿಯಲ್ಲಿ ವಿಲಕ್ಷಣವಾದ ಪಲ್ಲಟವಾಗಿ ಈಕ್ಷಣಕ್ಕೆ ವೀರವೃತ್ತಿಯಲ್ಲಿದ್ದವನು. ಇನ್ನೊಂದು ಕ್ಷಣದಲ್ಲಿ ಅಗಾಧವಾದ ತತ್ವಜ್ಞಾನದ ಚಿಂತನೆಯಲ್ಲಿ ಮಗ್ನನಾಗಿರುತ್ತಿದ್ದನು. ಕಾಡುಮರುಭೂಮಿಯ ಮಗುವಾದ ಈತನಿಗೆ ಹುಟ್ಟಾ ದೇವರ ಭಕ್ತಿಯ ಕಡೆಗೆ ಮನಸೆಳೆಯುತ್ತಿದ್ದಿತು; ಹೀಗಾಗಿ ಎಷ್ಟೋ ವೇಳೆ ಪರವಶನಾಗಿ ಭಗವಂತನ ಚಿಂತನೆಗೆ ಸೆರೆಯಾಳಾಗಿ ಹುಚ್ಚನಂತೆ ಬಿದ್ದುಕೊ೦ಡಿರುತ್ತಿದ್ದನು. ಈ ತೆರವಾಗಿ ಅವನಲ್ಲಿ ಒಳಗಿಂದೊಳಗೆ ಅಧ್ಯಾತ್ಮದ ಕಿಡಿಯು ಪುಟಗೊಳ್ಳುತ್ತಿದ್ದುದಕ್ಕೆ, ಆಗಾಗ್ಗೆ ಕಕ್ಕನೊಡನೆ ಸಿರಿಯಾ