ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೩೪೧

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪ್ರಕಟಿಸಲಾಗಿದೆ
೩೦೪
ಭಾರತೀಯರ ಇತಿಹಾಸವು.

ಪ್ರಾಂತದ ಜಾತ್ರೆಗೆ ಹೋದಾಗ ಅದೇ ತಾನೇ ತನ್ನ ಧರ್ಮಕಾರ್ಯವನ್ನು ಮುಗಿಸಿ, ಧರ್ಮಕ್ಕಾಗಿ ತನ್ನ ಬಂಧುಗಳ ಸಿಟ್ಟಿಗೆ ತಾಳ್ಮೆಯಿಂದ ಮೈಯೊಡ್ಡಿದ ಯೇಸುಕ್ರಿಸ್ತನ ಬಗ್ಗೆ ಕೆಲ ಸಂಗತಿಗಳು ತಿಳಿದವು. ಈಗ ಮಾತನಾಡಲಿಕ್ಕೆ ಅವನಿಗೆ ಬಾಯಿ ಬರದಿದ್ದರೂ, ಒಳಗೆ ಉರಿಯುತ್ತಿರುವ ಕಿಡಿಗೆ ಇದೊಂದು ಹುಲ್ಲು ಹಾಕಿದಂತಾಯಿತು. ಮನಸ್ಸಿನ ಅಂತಸ್ಥಿತಿಯಲ್ಲಿ ಈ ಮೇರೆಗೆ ಪಲ್ಲಟವು ನಡೆದಿರಲು, ಮಹಮ್ಮದನು ೨೮ ನೇ ವಯಸ್ಸಿಗೆ ತನಗಿಂತ ೧೫ ವರ್ಷಕ್ಕೆ ಹಿರಿಯ೪ಾದ ಖಾದಿಜಾ ಎಂಬವಳನ್ನು ಮದುವೆಯಾದನು ನಮ್ಮ ಕಣ್ಣಿಗೆ ಪ್ರಪಂಚದೊಳಗೆ ಮುಳುಗಿ ಕೊ೦ಡಿರುವಂತೆ, ಈತನು ಕ೦ಡರೂ, ಮಹಮ್ಮದನ ಮನಸ್ಸಿನಲ್ಲಿ ಏನೋ ಘೋರವಾದ ಕಾಳಗವೇ ನಡೆದಿದ್ದಿತು. ಮನಸಿನೊಳಗೆ ನಡೆದ ಈ ಕಾಳಗದ ಕೊನೆ ಮಾಡಬೇಕೆಂಬ ನಿರ್ಧಾರದಿಂದಲೇ ಮಹಮ್ಮದನು ತನ್ನ ೪೦ ನೇ ವರ್ಷಕ್ಕೆ ವೈರಾಗ್ಯದಿಂದ ಪ್ರಪಂಚವನ್ನು ತೊರೆದು ಹಿರಾ ಎಂಬ ಗುಡ್ಡದ ಗವಿಯೊಳಗೆ ಹೋಗಿ ಕುಳಿತಿರುತ್ತಿದ್ದನು. ' ಈಶ್ವರನ ನಿಜವಾದ ಧರ್ಮವನ್ನು ಹರಡಲಿಕ್ಕೆಂದು ನಿನ್ನನ್ನು ಗೊತ್ತು ಮಾಡಿದೆ. ಅದನ್ನು ನೀನು ಜನರೊಳಗೆ ಪ್ರಚಾರಗೊಳಿಸು' ಎ೦ದು ಮು೦ತಾಗಿ ಆತನಿಗೆ ದೃಷ್ಟಾಂತಗಳಾದ್ದರಿಂದ ೫೦ ನೇ ವರ್ಷದಿ೦ದ ಧರ್ಮೋಪದೇಶಕ್ಕಾಗಿ ಟೊಂಕಕಟ್ಟಿದನು. ಇಲ್ಲಿಂದ ಮೊದಲು ಆತನ ಮೈಯಲ್ಲಿ ದೇವರು ಪ್ರವೇಶಮಾಡಿ, ಆತನ ಬಾಯಿಂದ ಧರ್ಮ ತತ್ವಗಳನ್ನು ನುಡಿಸುತ್ತಿದ್ದನಂತೆ ! ದೇವರು ಮೈಯಲ್ಲಿ ಸೇರಿಕೊಂಡ ವೇಳೆಯಲ್ಲಿ ಎಚ್ಚರತಪ್ಪಿ ಆತನು ಹೊದ್ದುಕೊಂಡಿರುವ ಕಂಬಳಿಯು ಪೂರಾ ತೊಯ್ದು, ಒದ್ದೆಯಾಗುವಷ್ಟರ ಮಟ್ಟಿಗೆ ಬೆವರಿ ನೀರಾಗುತ್ತಿದ್ದನು. ಈ ದೈವಿಕ ಸ್ಥಿತಿಯಲ್ಲಿ ಆತನ ಬಾಯಿಂದ ಗದ್ಯಪದ್ಯಮಯವಾದ ನುಡಿಗಳು ಹೊರಸೂಸುತ್ತಿದ್ದವು. ಮಹಮ್ಮದನ ಈ ದೈವಿಕಶಕ್ತಿಯನ್ನು ಕಂಡು ಬೆರಗಾಗಿ ಮೊತ್ತ ಮೊದಲು, ಮಹಮ್ಮದನ ಹ೦ಡತಿ, ಕಕ್ಕನ ಮಗ, ಅಳಿಯ ಅವರೆಲ್ಲರೂ ಶಿಷ್ಯರಾದರು. ಸಾಕ್ಷಾತ್ಕಾರವಾದ ನಂತರ ಮಹಮ್ಮದನು ಮೂರ್ತಿ ಪೂಜೆಗೆ ವಿರೋಧಗಟ್ಟಿ ದೊ೦ಬೆಯನ್ನೆಬ್ಬಿಸಿದನು. ಈ ಸಂದರ್ಭದಲ್ಲಿ ಅರಬಸ್ಥಾನದೊಳಗಿನ ಮಕ್ಕಾಪಟ್ಟಣ