ಣವು ಬಹು ಊರ್ಜಿತಸ್ಥಿತಿಯಲ್ಲಿತ್ತು. ಅಲ್ಲಿರುವ ಕಾಬಾ ಎ೦ಬುದೊ೦ದು ದೇವಾಲಯದಲ್ಲಿ ೩೬೦ ಮೂರ್ತಿಗಳಿದ್ದವು. ಬಹು ಪ್ರಾಚೀನ ಕಾಲದಿಂದಲೂ ಪರ೦ಪರೆಯಿ೦ದಲೂ ಅರಬರಿಗೆ ಈ ಮೂರ್ತಿಗಳೇ ಧರ್ಮದ ಬೀಜಗಳು; ಅದುದರಿಂದ ಅವು ಜೀವಕ್ಕಿಂತ ಹೆಚ್ಚು."ಈ ಕಾಬಾ ದೇವಾಲಯದೊಳಗಿನ ಮೂರ್ತಿಗಳನ್ನು ಪೂಜಿಸಬೇಡಿರಿ; ಎಲ್ಲರೊಳಗಿರುವ ಒಬ್ಬನಾದ ಪರಮಾತ್ಮನನ್ನು ಪೂಜಿಸಿರೆ” ೦ದು ಮಹಮ್ಮದನು ಹೇಳುವ ಹೊಸ ಬೋಧವು ವಿಪರೀತವಾಗಿ ಪರಿಣಮಿಸಿತು. ಎಲ್ಲ ಧರ್ಮವೀರರಿಗೆ ತಮ್ಮ ಧರ್ಮ ಪ್ರಚಾರಣೆಗಾಗಿ ಕಷ್ಟನಷ್ಟಗಳನ್ನು ಸೈರಿಸಬೇಕಾಗುವ೦ತೆ ಮಹಮ್ಮದ ಪೈಗಂಬರನು ಕೆಲಕಾಲ ಜನರಿಂದಾದ ಛಲನೆಯನ್ನು ತಾಳಿಕೊ೦ಡಿದ್ದನು. ಆದರೆ ಒರುಬರುತ್ತ ಮಕ್ಕೆಯಲ್ಲಿರುವದು ಅಸಾಧ್ಯವಾಯಿತು. ಇತ್ತ ಹೆ೦ಡತಿಯು ತೀರಿಕೊಂಡಳು. ಹೀಗಾಗಿ ಉತ್ತರಕ್ಕಿರುವ ಮದೀನಾ ಪಟ್ಟಣವನ್ನಾಶ್ರಯಿಸಬೇಕೆಂದು ಮನಸುಮಾಡಿ ಹೊರಟನು. ದಾರಿಯಲ್ಲಿ ಕೆಲವರು ಅವನನ್ನು ಕೊಲೆಮಾಡಬೇಕೆಂದು ಹೊಂಚು ಹಾಕಿದ್ದರಿಂದ ಒಂದು ಗುಡ್ಡದ ಗವಿಯಲ್ಲಿ ಅಡಗಿಕೊಂಡಿದ್ದು ಅವರು ಕಾಣದಂತಾದೊಡನೆ ಮತ್ತೆ ಮದೀನಾ ಪಟ್ಟಣದ ದಾರಿ ಹಿಡಿದನು. ಮಹಮ್ಮದ ಮಕ್ಕೆಯಿಂದ ಮದೀನಾ ಪಟ್ಟಣಕ್ಕೆ ಓಡಿಹೋದ೦ದಿನಿ೦ದ ಅವನ ಶಕಕ್ಕೆ ಹಿಜರಿಶಕವೆಂದು ಹೆಸರು ಬಂದಿತು. ಹಿಜರಿ ಅ೦ದರೆ 'ಓಟ' ವೆಂದರ್ಧ.
ಧರ್ಮಕಾರ್ಯಕ್ಕೆ ಪ್ರಾರಂಭ :- ಮದೀನಾ ಪಟ್ಟಣವನ್ನು ಸೇರಿದ ನಂತರ ಹಜರತ ಮಹಮ್ಮದವರ ಆಯುಷ್ಯಕ್ಕೆ ಹೊಸದೊಂದು ತೇಜವೇರಿತು. ಅಲ್ಲಿರುವ ಒಬ್ಬ ದೈವುಳ್ಳ ಗೃಹಸ್ಥನೊಬ್ಬನು ಮಹಮ್ಮದರ ಶಿಷ್ಯನಾಗುವದಲ್ಲದೆ ತನ್ನ ಮಗಳನ್ನೂ ಅವರಿಗೆ ಅರ್ಪಿಸಿದನು. ಒಬ್ಬರನ್ನು ನೋಡಿ ಇನ್ನೊಬ್ಬರು ಹೀಗೆ ಅನುಯಾಯಿಗಳಾಗತೊಡಗಿದ್ದರಿಂದ ಪೈಗಂಬರರ ಶಿಷ್ಯಸಮೂಹವು ಬೆಳೆಯಿತು. ಈ ಕಾಲಕ್ಕೆ ಮಹಮ್ಮದವರ ವಯಸ್ಸು ೫೩; ನನ್ನ ತನ್ನವರೆ೦ಬುವರೆಲ್ಲರೂ ನೀಗಿಹೋಗಿದ್ದರು. ಎಲ್ಲವೂ ಹೊಸ ಪ್ರಪಂಚ. ಇ೦ಥ ಬಿಕ್ಕಟ್ಟಿನಲ್ಲಿರಲು ಎಲ್ಲೆಡೆಯಿಂದ ಖುರೇಶಿ ಜನರದೊಂದು ಕಾಟವು. ಈ ಖುರೇಶೀ ಜನರು ಮಹಮ್ಮದ