ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೩೪೩

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪ್ರಕಟಿಸಲಾಗಿದೆ
೩೦೬
ಭಾರತೀಯರ ಇತಿಹಾಸವು.

ವರ ಹೊಸ ಧರ್ಮದ ಛಲನೆಗೈಯ್ಯುವದಲ್ಲದೆ ಅವರ ಶಿಷ್ಯರನ್ನು ಪರಿಪರಿಯಿಂದ ಕಾಡಲಾರಂಭಿಸಿದರು. ಈ ಧರ್ಮಸಂಕಟದೊಳಗೆ ಶತ್ರುಗಳಿಗೆ ಬೆನ್ನು ತೋರಿಸಿ ಓಡಿಹೋಗುವದು ಯುಕ್ತವಲ್ಲೆಂದೆಣಿಸಿ, ಮರುಭೂಮಿಯ ನಮ್ಮ ಧರ್ಮವೀರನು ಎದೆಗಾರಿಕೆಯಿಂದ ತನ್ನನ್ನು ತಾನೇ ಕಾಯ್ದುಕೊಳ್ಳದೆ ಗತಿಯಿಲ್ಲವೆಂದರಿತು ಪರಿಸ್ಥಿತಿಯನ್ನೆದುರಿಸಿ ಬಂಡೆಗಲ್ಲಿನಂತೆ ನಿಂತುಕೊಂಡನು. "ಜನಸಾಮಾನ್ಯರು ಬರಿಯ ಧರ್ಮೋಪದೇಶದಿಂದ ದಾರಿಗೆ ಬರುವರಲ್ಲ; ಅವರನ್ನು ಶಸ್ತ್ರದಿಂದಲೇ ದಾರಿಗೆಳೆಯಲಿಕ್ಕೆ ಬೇಕು; ಹಿಂದಕ್ಕೆ ಅನೆಕ ಮಂದಿ ಪೈಗಂಬರರು ಧರ್ಮದ ದಾರಿಯನ್ನು ಹೇಳಿ ತೋರಿಸಿದರೂ, ಜನರು ಅದಕ್ಕೆ ಕಿವಿಗೊಡದೇ ಹೋದರು; ಆದುದರಿಂದ ನಾನೀಗ ಹೇಳುವ ಧರ್ಮವನ್ನು ಲಕ್ಷಿಸದವರನ್ನು ಕತ್ತಿಯ ಬಲದಿಂದ ಗೆದ್ದು, ಅವರಲ್ಲಿರುವ ಹಣವನ್ನು ಸುಲಿಯ ತಕ್ಕದ್ದು ; ಈ ಶಸ್ತ್ರಪ್ರಸ೦ಗದೊಳಗೆ ನಾವು ಗೆದ್ದರೆ ನಮಗೆ ಹಣ ಶಿಗುವದು; ಒಂದು ವೇಳೆ ಗೆಲುವಾಗದಿದ್ದರೆ, ಯುದ್ದದೊಳಗೆ ಸತ್ತುದಕ್ಕಾಗಿ ನಮಗಾಗಿ ಸ್ವರ್ಗದ ಬಾಗಿಲು ತೆರೆದಿಟ್ಟಿರುವದು.' ಎಂದು ಮುಂತಾದ ಹುರುಪಿನ ನುಡಿಗಳಿಂದ ಕಾಡು ಕಗ್ಗರಾದ ಅರಒರಲ್ಲಿ ಹೊಸ ಜೀವವನ್ನು ತುಂಬಿ, ಅವರನ್ನೆಲ್ಲ ಕಲೆಹಾಕಿ ಅವರಿಗೆ ದಂಡಿನ ಶಿಕ್ಷಣಕೊಟ್ಟು ಬಂಟರನ್ನಾಗಿ ಮಾಡಿದರು. ಇದರಿಂದ ಇದುವರೆಗೆ ಶಾ೦ತತೆಯಿಂದ ಕಾಲಕಳೆಯುವ ಈ ವೀರ ಅರಬರಿಗೆ ತಮ್ಮ ಸ್ವಭಾವಕ್ಕೆ ತಕ್ಕ ಕಾಯಕವು ದೊರೆತಂತಾಯಿತು .ತಮ್ಮ ಧರ್ಮಪ್ರಸಾರಗೊಳಿಸಲು, ನೆರೆ ಹೊರೆಯ ಪ್ರಾಂತಗಳಲ್ಲೆಲ್ಲ ಮಹಮ್ಮದವರು ತಮ್ಮ ದ೦ಡಿನ ಜನರನ್ನು ಕಳಿಸಿ ಅವರು ತ೦ದ ಲೂಟಿಯನ್ನೆಲ್ಲ ಎಲ್ಲರೂ ಸಮವಾಗಿ ಹಂಚಿಕೊಳ್ಳತೊಡಗಿದರು. ಹೀಗೆ ಅನೇಕ ಯುದ್ಧಗಳು ನಡೆದವು. ಧರ್ಮ ಹಾಗೂ ರಾಜಕಾರ್ಯಗಳನ್ನು ಜೊತೆಗೊಳಿಸಿದ್ದರಿಂದ ರಾಜ್ಯವನ್ನು ಗೆಲಿಯಲಿಕ್ಕೆ ಧರ್ಮವನ್ನೊಂದು ಸಾಧನವನ್ನಾಗಿ ಮಾಡಿಕೊ೦ಡು ಸುತ್ತಣ ದೇಶದಲ್ಲೆಲ್ಲ ಧಾಳಾ ಧೂಳಿಯನ್ನೆಬ್ಬಿಸಿದರು. ಮೂರ್ತಿ ಪೂಜೆಯ ಹುಚ್ಚು ಗೊಂದಲವನ್ನು ಮುರಿದು, ನಿರ್ನಾಮಗೊಳಿಸಲೋ ಸುಗ ಮಹಮ್ಮದವರು ತಮ್ಮ ದಂಡಿನವರೊಡನೆ ಮಕ್ಕಾ ಪಟ್ಟಣವನ್ನು