ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೩೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಮಹಮ್ಮದವರ ಬಾಳ್ವೆ ಮತ್ತು ನೈತಿಕಸುಧಾರಣೆ.

೩೦೭

ಮುತ್ತಿ ಅದನ್ನು ಕೈವಶ ಮಾಡಿಕೊಂಡು, ಕಾಬಾ ದೇವಸ್ಥಾನದೊಳಗಿರುವ ಮೂರ್ತಿಗಳನ್ನೆಲ್ಲ ಒಡೆದು ಪುಡಿವುಡಿ ಮಾಡಿದರು. ಧರ್ಮಸ್ಥಾಪಕರಾದ ಪೈಗಂಬರವರು ಈ ಮೇರೆಗೆ ಶಸ್ತ್ರಬಲದಿಂದ ತಮ್ಮ ಧರ್ಮವನ್ನು ಸ್ಥಾಪಿಸಿ, ಅರಬರನ್ನೆಲ್ಲ ಒಂದು ಗೊಳಿಸಿ, ಎಚ್ಚರಗೊಳಿಸಿ, ತಮ್ಮ ಇರುವಿಕೆಯಲ್ಲಿಯೇ ಅರಬಸ್ಥಾನವನ್ನೆಲ್ಲ ಇಸ್ಲಾಮಮಯವಾಗಿ ಮಾಡಿಬಿಟ್ಟರು. ಮಹಮ್ಮದವರು ಈಗೆ ಧರ್ಮ ಹಾಗೂ ದೇಶಕ್ಕೆ ರಾಜರಾಗಿ ವಿರಾಜಿಸತೊಡಗಿದರು. ಮತ್ತೊಂದು ಸಮಯದಲ್ಲಿ ಹೀಗೆಯೇ ದಾಳಿಯೆತ್ತಿ ಹೋಗಿರುವಾಗ ಅವರಿಗೆ ತಮ್ಮ ಸಾವು ಸಮೀಪಿಸಿತೆಂದು ಹೊಳೆಯಿತು. ಪುತ್ರವಾತ್ಸಲ್ಯದಿಂದ ತಮ್ಮ ಎಲ್ಲ ಬಂಧುಗಳನ್ನೂ, ಶಿಷ್ಯರನ್ನೂ ಕರೆದು ನೆರೆಯಿಸಿ, ಅವರಿಗೆ ಧರ್ಮದ ರಹಸ್ಯವನ್ನು ತಿಳಿಹೇಳಿ, "ನಡೆಯಿರಿ; ನೀವು ಮುಂದೆ ದೊಡ್ಡ ಪದವಿಗೇರುವಿರಿ” ಎಂದು ಆಶೀರ್ವದಿಸಿದರು. ತಮ್ಮ ಹತ್ತಿರವಿದ್ದ ದುಡ್ಡು ಕಾಸನ್ನೆಲ್ಲ ಬೊಕ್ಕಸದಿಂದ ತೆಗೆಯಿಸಿ, ಸೂರೆಮಾಡಿ ಬಿಟ್ಟರು. ದಾಸರನ್ನು ಬಿಡುಗಡೆ ಮಾಡಿದರು, ಅರಬಸ್ಥಾನದೊಳಗೆ ಒಬ್ಬ ಮೂರ್ತಿಪೂಜಕನೂ ಉಳಿದ೦ತೆ ಎಚ್ಚರಾಗಿರಲಿಕ್ಕೆ ಶಿಷ್ಯರಿಗೆ ಆಜ್ಞೆ ಮಾಡಿ, ತಮ್ಮ ಹೆಂಡತಿಯಾದ ಆಯೇಷಾ ಬೀಬಿಯವರ ತೊಡೆಯ ಮೇಲೆ ಮಲಗಿಕೊಂಡು ಕ್ರಿ. ಶ. ೬೩೨ ರಲ್ಲಿ ಪ್ರಾಣಬಿಟ್ಟರು.

ಮಹಮ್ಮದವರ ಬಾಕೈ ಮತ್ತು ನೈತಿಕ ಸುಧಾರಣೆ:-ಮಹಮ್ಮದವರ ಮನೆಯೆಂದರೆ, ಮಿತವ್ಯಯದೃಷ್ಟಿಯಿ೦ದೊ೦ದು ಎಲ್ಲರಿಗೂ ಮೇಲು ಪಂಕ್ತಿಯಾಗಿರುವ ಕುಟುಂಬವು. ಅವರ ಊಟವೆಂದರೆ ಗೋಧಿರೊಟ್ಟಿ; ಉಡುಪೆಂದರೆ ಒಂದು ನಿಲುವಂಗಿ. (ಒ೦ದೊ೦ದು ಸಲ ಒಲೆ ಹೊತ್ತಿಡದೆ ಎಷ್ಟೋ ತಿಂಗಳು ಹಾಗೇ ಕಳೆದು ಹೋಗುತ್ತಿದ್ದವು.) ಮಹಮ್ಮದವರು ತಮ್ಮ ನಿಲುವಂಗಿಯು ಹರಿದರೆ, ಅದನ್ನು ಸ್ವತಃ ಕೈಯಿಂದ ತಾವೇ ಹೊಲಿದುಕೊಳ್ಳುತ್ತಿದ್ದರು. ಹೆಚ್ಚಿಗೇನು? ತಾವು ಕಾಲಲ್ಲಿ ಮೆಡುವ ಚಡಾವುಗಳು ಹರಿದರೂ ತಾವೇ ಹೊಲಿದುಕೊಳ್ಳುತ್ತಿದ್ದರೆಂದೂ ಈಗಲೂ ಅವರ ವಾದಾತನದ ಬಗ್ಗೆ ಇಸ್ಲಾಮರು ಹೆಮ್ಮೆ ಪಡುವದುಂಟು. ತಮ್ಮ ಸಮಾಜದೊಳಗೆ ನೆಲೆಗೊಂಡಿರುವ೦ಧ ಹೆಣ್ಣು