ವಿಷಯಕ್ಕೆ ಹೋಗು

ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೧೮
ಭಾರತೀಯರ ಇತಿಹಾಸವ.

ಸಮಯಕ್ಕೆ ಆರ್ಯರಿಗೆ ಒಂದೆಡೆ ನೆಲೆಯಾಗಿ ನಿಲ್ಲದೆ ಬೇರೆ ಗತಿಯಿಲ್ಲದ್ದರಿಂದ, ಅಲೆರಾಟವನ್ನು ಬಿಟ್ಟು, ಪ್ರಾರಂಭಕ್ಕೆ ಅವರು ದೇವನಿರ್ಮಿತ ದೇಶವೆಂದು ಖ್ಯಾತಿ ಪಡೆದ ಸಪ್ತಸಿಂಧು ದೇಶವನ್ನೇ ತಮ್ಮ ತಾಯ್ನಾಡೆಂದು ಬಗೆದು ಆ ಪ್ರದೇಶದೊಳಗೆ ತಮಗೆ ಅನುಕೂಲವಾಗಿರುವ ನೀರುಳ್ಳ ಸ್ಥಳಗಳಲ್ಲಿದ್ದರು. ಆರ್ಯರ ಪ್ರಾಣವೇ ಅದ ಇಂದ್ರನು ಆರ್ಯರಿಗೆ ಈ ದೇಶವನ್ನು ಮನೆ ಕಟ್ಟಲಿಕ್ಕೆ ಕೊಟ್ಟು, ಅವರಿಗಾಗುವ ತೊಂದರೆಗಳನ್ನು ನಿವಾರಿಸಿದನಂತೆ! ಹೀಗೆ ವಾಸವಾಗಿರುವ ಸ್ಥಳಗಳಲ್ಲಿ ಸರಸ್ವತೀನದಿಯ ದಂಡೆಯು ಆರ್ಯರಿಗೆ ಅತ್ಯಂತ ಪ್ರೀತ್ಯಾಸ್ಪದವಾದ ಸೀನುಯಾಯಿತು. ಮಕ್ಕಳು ತಾಯಿಯನ್ನು ಅಪ್ಪಿಕೊಳ್ಳುವಂತೆ ಆರ್ಯರು ಸರಸ್ವತಿಯ ತೀರವನ್ನು ಬಿಟ್ಟು ಹೋಗಲಾರೆವೆಂದು ಬಹುವರಿಯಾಗಿ ಮೊರೆಯಿಟ್ಟಿದ್ದಾರೆ. ಈವರೆಗೆ ಕುರುಡರಂತೆ ಅಯುಷ್ಯವನ್ನು ಕಳೆಯುತ್ತಿದ್ದ೦ಧ ಆರ್ಯರು ಸರಸ್ವತಿಯ ತೀರಕ್ಕೆ ಬಂದು ಬಾಳ್ವೆ ಮಾಡಿಕೊ೦ಡಿದ್ದೊಡನೆ, ಸರಸ್ವತಿಯ ಪ್ರಭಾವದಿಂದ ವಿಲಕ್ಷಣವಾದುದೊ೦ದು ಜ್ಞಾನದ ವಿದ್ಯುತ್ ಪ್ರವಾಹವು ಅವರ ಮೈಯಲ್ಲಿ ಪ್ರವೇಶಿಸಿತು. ತಾಯಿಯಾದ ಸರಸ್ವತಿಯ ಪವಿತ್ರವಾದ ಶುದ್ಧೋದಕವು ಆರ್ಯರ ಮೈಯನ್ನು ತೊಳೆದು ಶುದ್ಧಗೊಳಿಸಿದ್ದಲ್ಲದೆ, ಅವರ ಮನಸ್ಸು ಬಿದ್ಧಿಗಳಲ್ಲಿಯೂ ಹೊಕ್ಕು ಅಲ್ಲಿ ಜ್ಞಾನಕಿರಣಗಳನ್ನು ಮೂಡಿಸಿತು. ಕಗ್ಗತ್ತಲೆಯಲ್ಲಿ ತಬ್ಬಿಬ್ಬಾಗಿ ಅಲೆದಾಡುವ ಆರ್ಯರಿಗೆ ಈಗಾದ ಆನಂದಾತಿರೇಕವನ್ನು ನಾವು ಒಣ ಕಟ್ಟಿಗೆಯ ಲೆಕ್ಕಣಿಕೆಯಿಂದ ಏನೆಂದು ಬಣ್ಣ ಸೋಣ? ಕಬ್ಬಿಣದ ಕೋಟೆಯ೦ತಿರುವ' ಸರಸ್ವತಿಯ ದಂಡೆಗೆ ಆಸರಕ್ಕಾಗಿ ಎಂದಂದಿನಿಂದ ಮೊದಲಿನ ಆರ್ಯರು ಸಂಪೂರ್ಣವಾಗಿ ಪಲ್ಲಟ ಹೊ೦ದಿದರು; ಮು೦ದೆ ಸರಸ್ವತಿಯ ದಂಡೆಯ ಮೇಲೆಯೇ ಆರ್ಯರು ಮಹಾ ಮಹಾಯಾಗಗಳನ್ನು ಮಾಡಿದರು. ಸರಸ್ವತಿಯ ದಂಡೆಯ ಮೇಲೆ ಸ್ನಾನ ಮಾಡಿದೊಡನೆ, ಆರ್ಯರ ಬಾಯಿಯಿ೦ದ ಸರಸ್ವತಿಯ ಮಹಿಮಾ ವಿಶೇಷವಾದ ಋಕ್ಕುಗಳು ತಾವಾಗಿಯೇ ಒಡೆದು ಬಂದವು. ಸರಸ್ವತಿಯ ಮಹಿಮೆಯನ್ನು ಕೃತಜ್ಞತೆಯಿಂದ ಹೊಗಳಿ ಹಾಡುತ್ತಿರುವಾಗ್ಗೆ ಸರಸ್ವತಿಯ ಭಕ್ತರಾದ ಆರ್ಯರ ಗಂಟಲ ಶಿರಗಳು ಬಿಗಿದು, ಮೈಯೆಲ್ಲ