ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೪೪

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪ್ರಕಟಿಸಲಾಗಿದೆ
೧೭
ಆಯ೯ರು ಸರಸ್ವತೀ ದಂಡೆಯಲ್ಲಿ ಮನೆ ಕಟ್ಟಿ ಕೊ೦ಡುದು.

ದೇವಿಯೂ, ಬೆಳಕು ಕೊಡುವ ಸೂರ್ಯನೂ, ಅಗಿಯ ಅರ್ಯರಿಗೆ ಜೀವಂತ ದೇವತೆಗಳ೦ತೆ ಕಾಣಿಸಿದರು.

ಆರ್ಯರಲ್ಲಿ ಎರಡು ಪಂಗಡಗಳು:- ಇದುವರೆಗೆ ಬೇಟೆಯಾಡಿ ಕೇವಲ ಹಿಂಸೆಯಿಂದಲೇ ಉಪಜೀವನ ಮಾಡಿಕೊಂಡು ಇದ್ದ೦ಧ ಆರ್ಯರಲ್ಲಿ ಅವರವರ ಮನಃಪ್ರತಿ, ವಾಸನೆಗಳಿಗೆ ಅನುಸಾರವಾಗಿ ಎರಡು ಬಣಗಳಾದವು. ಒಬ್ಬರು ಬೇಸಾಯದಿಂದ ಜೀವಿಸಿ ಆಕಳುಗಳನ್ನು ಕಟ್ಟಿಕೊ೦ಡು ಮನೆಮಾಡಿಕೊಂಡಿರುವವರು; ಮತ್ತೊಬ್ಬರು ಬೇಟೆಯ ವೃತ್ತಿಯಿಂದಲೇ ಅಲ್ಲಲ್ಲಿ ತಮ್ಮ ಜನರನ್ನು ಹಿಂಸಿಸುತಲೂ, ಸುಲಿಯುತ್ತಲೂ ಜೀವಿಸುವವರು. ಇವರಲ್ಲಿ ಮೊದಲನೆಯವರೇ ಆರ್ಯರು; ಎರಡನೆಯ ವರೇ ದಸ್ಯುಗಳು, ಅಥವಾ ದಾಸರು, ಇಲ್ಲಿಯ ತನಕ ಒ೦ದೇ ವೃತ್ತಿಯಿಂದಿದ್ದು ಒಕ್ಕಬ್ಯಾಗಿರುವ ಆರ್ಯರಲ್ಲಿ ಇಬ್ಬಣಗಳಾಗಿ, ವೈರ ದ್ವೇಷಕ ಮೊದಲಾಯಿತು. ತಮ್ಮ ಬ೦ಧುಗಳಾದ ಆರ್ಯರು ನಾಗರಿಕತೆಯ ದಾರಿಯನ್ನು ಹಿಡಿದು ನಡೆದಿರುವದುದಾಸರಿಗೆ ಹೇಯವೆನಿಸಿ, ಅವರು ಸುಖಸಮಾಧಾನದಿಂದ ಒಕ್ಕಲತನ ನಡಿಸಿಕೊಂಡು ಬಾಳ್ವೆ ನಡಿಸಿರುವ ಆರ್ಯರ ಬಿಡಾರಕ್ಕೆ ಹೋಗಿ, ಅವರ ಗೋವುಗಳನ, ದನಕರುಗಳನ್ನ ಸುಲಿಯ ಸುಡಗಿದರು. ಹೀಗೆ ತಮ್ಮ ಮನೆಯಲ್ಲಿಯೇ, ತಮ್ಮವರೇ ತಮ್ಮ ಪಾಲಿಗೆ ದಾಳಿಗಾರರಾಗಿ ಪರಿಣಮಿಸಿದ್ದರಿಂದ ಕ೦ಟಕರಾದ ದಸ್ಯುಗಳನ್ನು ಹೊಡೆದಟ್ಟಲಿಕ್ಕೆಂದೇ ಹಲವು ದಿನಗಳ ವರೆಗೆ ಆರ್ಯರು ಟೊ೦ಕ ಕಟ್ಟಿಕೊ೦ಡು ನಿಂತಿದ್ದರೆಂಬುದ ಅದಕ್ಕಾಗಿ ಅವರು ಇಂದ್ರನಿಗೆ ಶರಣು ಹೋಗಿರುವದೂ, ಋಗ್ವೇದದೊಳಗಿನ ಅನೇಕ ಋಕ್ಕುತ್ತಗಳಿಂದ ಸ್ಪುಟವಾಗುತ್ತದೆ. ಅವರೊಳಗಿನ ಹಲವರು ಆರ್ಯರ ನಡೆನುಡಿಗಳಿಗೂ ಅವರ ಸುಧಾರಣೆಗೂ ಒಪ್ಪಿ, ತಮ್ಮ ದುಷ್ಟ ನಡತೆಯನ್ನು ಬಿಟ್ಟಿದ್ದರಿಂದ ಅವರನ್ನೂ ಆರ್ಯರು ತಮ್ಮೊಳಗೇ ಸೇರಿಸಿಕೊಂಡರು.

ಆರ್ಯರು ಸರಸ್ವತೀ ದಂಡೆಯಲ್ಲಿ ಮನೆಕಟ್ಟಿಕೊಂಡುದು-
ಅರ್ಯರಿಗೆ ಒಕ್ಕಲತನದ ಕಸಬು ಮೇಲೆ೦ದೆನಿಸಿ, ಅದನ್ನೇ ಆಶ್ರಯಿಸಿಕೊ೦ಡು ಸ್ಥಿರವಾಗಿರಲಿಕ್ಕೆ ಒಂದು ಸ್ಥಳವು ಬೇಕಷ್ಟೆ? ಈ