ಪುಟ:ಭಾರತ ದರ್ಶನ.djvu/೧೦೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೮೮

ಭಾರತ ದರ್ಶನ

ಕರ್ಮವಾಗಿರಬೇಕು. ಪ್ರತಿಫಲಾಪೇಕ್ಷೆ ಅದಕ್ಕಿರಬಾರದು. ಉತ್ತಮ ಕರ್ಮದಿಂದ ಉತ್ತಮ ಪ್ರತಿ ಫಲ ಬಂದೇ ಬರುತ್ತದೆ ; ತಕ್ಷಣವೇ ಅದು ನಮಗೆ ಕಾಣದಿರಬಹುದು ; ಆದರೆ ಕಾರ್ಯಕಾರಣ ನೀತಿ ಎಲ್ಲ ಸಂದರ್ಭಗಳಿಗೂ ಅನ್ವಯಿಸಲೇ ಬೇಕು.

ಗೀತಾ ಸಂದೇಶವು ಮತೀಯವಲ್ಲ. ಯಾವ ಒಂದು ಪ್ರತ್ಯೇಕ ತತ್ವಶಾಸ್ತ್ರಜ್ಞರ ಪಂಗಡಕ್ಕೂ ಹೇಳಿದ್ದಲ್ಲ. ಬ್ರಾಹ್ಮಣನಾಗಲಿ, ಶ್ವಪಚನಾಗಲಿ, ಎಲ್ಲರಿಗೂ ಮಾರ್ಗದರ್ಶಿಯಾಗಿದೆ ; “ಎಲ್ಲ ದಾರಿಗಳೂ ನನ್ನ ಕಡೆ” ಎಂದು ಸಾರುತ್ತದೆ. ಈ ಒಂದು ಸರ್ವೋಪಯುಕ್ತತೆಯಿಂದಲೇ ಎಲ್ಲ ಧರ್ಮಗಳಿಗೂ, ಎಲ್ಲ ದರ್ಶನಗಳಿಗೂ ಸರ್ವಾದರಣೀಯವಾಗಿದೆ. ಶತಮಾನಗಳು ಕಳೆದರೂ ಮಾಸದ ಯಾವುದೋ ಒಂದು ನಿತ್ಯ ನವ್ಯತೆಯ ಶಕ್ತಿ ಅದರಲ್ಲಿರುವಂತೆ ತೋರುತ್ತದೆ. ಸೂಕ್ಷ್ಮ ವಿಚಾರ ಮತ್ತು ಸಂಶೋಧನೆ, ಚಿಂತನ ಮತ್ತು ಕ್ರಿಯೆ, ತಿಕ್ಕಾಟ ಮತ್ತು ವಿರೋಧಗಳೊಳಗಿದರೂ ಒಂದು ಸಮತಾದೃಷ್ಟಿ ಮತ್ತು ಸಮಕಾಲೀನರ ಶಕ್ತಿ ಅದರಲ್ಲಿದೆ. ಒಂದು ಠೀವಿ ಇದೆ. ಭಿನ್ನತೆಯಲ್ಲಿ ಒಂದು ಐಕ್ಯತೆ ಇದೆ. ಸನ್ನಿವೇಶ ಬದಲಾವಣೆಯಾದರೂ ಜೈಸುವ ಶಕ್ತಿಯಿದೆ; ಆದರೆ ಅದು ಸನ್ನಿವೇಶದಿಂದ ಹಿಂದೇಟುಹಾಕಿ, ಓಡಿ ಹೋಗುವದರಲ್ಲಿಲ್ಲ. ಆದರೆ ಅದನ್ನೇ ಅಳವಡಿಸಿಕೊಳ್ಳುವ ಮೂಲಕ ಗೀತೆಯು ಹುಟ್ಟಿದ ಎರಡು ಸಾವಿರದ ಐದುನೂರು ವರ್ಷಗಳಿಂದ ಭಾರತದ ಜನಕೋಟಿಯು ಮೇಲಿಂದಮೇಲೆ ವ್ಯವ್ಯಸ್ಥವಾಗಿ, ಉನ್ನತಿಗೇರಿ, ಅವನತಿಯನ್ನೂ ಮುಟ್ಟಿದೆ. ಅನುಭವದಮೇಲೆ ಅನುಭವವನ್ನು ಪಡೆದಿದೆ. ದರ್ಶನ ಗಳಮೇಲೆ ದರ್ಶಗಳು ಬಂದರೂ, ಗೀತೆಯಲ್ಲಿ ಸದಾ ಒಂದು ಜೀವಾಮೃತವನ್ನು ಕಂಡಿದೆ. ಮಾನವ ಪ್ರಗತಿ ಭಾವನೆಗೆ ಹೊಂದಿಕೊಳ್ಳುವ, ಮಾನವನ ಮನಸ್ಸನ್ನು ಕಲಕುವ, ಮತ್ತು ತಾತ್ವಿಕ ಸಮಸ್ಯೆಗಳಿಗೆ ಅನ್ವಯಿಸುವ ಒಂದು ನಿತ್ಯ ನೂತನತೆಯನ್ನು ಅದರಲ್ಲಿ ಕಂಡಿದೆ,

೧೫. ಪ್ರಾಚೀನ ಭಾರತದಲ್ಲಿ ಜೀವನ ಮತ್ತು ಸಾಧನೆ

ಪ್ರಾಚೀನ ಭಾರತದ ದಾರ್ಶನಿಕ ಮತ್ತು ತತ್ವಜ್ಞಾನದ ಬೆಳವಣಿಗೆಯನ್ನು ಕಂಡುಹಿಡಿಯಲು ಅನೇಕ ಪಂಡಿತರು, ದಾರ್ಶನಿಕರು ತುಂಬ ಕೆಲಸ ಮಾಡಿದ್ದಾರೆ. ಐತಿಹಾಸಿಕ ಘಟನೆಗಳ ಅನುಕ್ರ ಮಣಿಕೆಯನ್ನು ನಿರ್ಧರಿಸಲು ಮತ್ತು ಆ ಕಾಲದ ಸ್ಕೂಲ ರಾಜಕೀಯ ನಕ್ಷೆಗಳನ್ನು ಸಿದ್ಧ ಮಾಡಲು ಅನೇಕ ಪ್ರಯತ್ನಗಳು ನಡೆದಿವೆ. ಆದರೆ ಆ ದಿನಗಳ ಸಾಮಾಜಿಕ ಮತ್ತು ಆರ್ಥಿಕ ಪರಿಸ್ಥಿತಿ ಜನರು ನಡೆಸಿದ ಜೀವನ ಮಾಡುತ್ತಿದ್ದ ಕಾಠ್ಯ ವಿಧಾನ, ಅವರ ವಸ್ತು ನಿರ್ಮಾಣ ಕೌಶಲ್ಯ, ವ್ಯಾಪಾರ ಸಾಮರ್ಥ್ಯ ಏನು ಮತ್ತು ಹೇಗೆ ಎಂದು ತಿಳಿದುಕೊಳ್ಳಲು ಯಾವ ಪ್ರಯತ್ನವೂ ನಡೆದಿಲ್ಲ. ಇತ್ತೀಚೆಗೆ ಮಾತ್ರ ಈ ವಿಷಯಗಳಿಗೆ ಹೆಚ್ಚು ಗಮನ ಕೊಡುತ್ತಿರಲಾಗಿದೆ ; ಭಾರತೀಯ ವಿದ್ವಾಂಸರಿಂದ ಕೆಲವು, ಅಮೆರಿಕ ದೇಶದ ವಿದ್ವಾಂಸನಿಂದ ಒಂದು ಈ ರೀತಿ ಗ್ರಂಥಗಳು ಪ್ರಕಟವಾಗಿವೆ. ಆದರೂ ಮಾಡ ಬೇಕಾದ ಕೆಲಸ ಎಷ್ಟೋ ಇದೆ, ಮಹಾಭಾರತ ಒಂದೇ ಆಗಿನ ಸಾಮಾಜಿಕ ಮತ್ತು ಇತರ ಅಂಶಗಳ ಒಂದು ಖನಿ, ಇತರ ಗ್ರಂಥಗಳಿಂದ ಸಹ ಅನೇಕ ಉಪಯುಕ್ತ ವಿಷಯಗಳನ್ನು ಸಂಗ್ರಹಿಸಬಹುದು, ಆದರೆ ಆ ಗ್ರಂಥಗಳನ್ನು ಈ ವೈಶಿಷ್ಟ ದೃಷ್ಟಿ ಯಿಂದ ವಿಮರ್ಶೆಮಾಡಬೇಕು. ಇನ್ನೊಂದು ಅಮೂಲ್ಯ ಗ್ರಂಥವೆಂದರೆ ಕ್ರಿ. ಪೂರ್ವ ನಾಲ್ಕನೆಯ ಶತಮಾನದ ಕೌಟಿಲ್ಯನ ಅರ್ಥಶಾಸ್ತ್ರ; ಅದರಿಂದ ಮೌಲ್ಯ ಚಕ್ರಾಧಿಪತ್ಯದ ರಾಜಕೀಯ, ಸಾಮಾಜಿಕ, ಆರ್ಥಿಕ ಮತ್ತು ಸೈನಿಕ ವ್ಯವಸ್ಥೆಗಳ ವಿವರ ಗಳನ್ನು ಕಾಣಬಹುದು,

ಬುದ್ಧನ ಕಾಲಕ್ಕೂ ಪೂರ್ವದ ಭಾರತದ ಚಿತ್ರವನ್ನು ನೋಡಬೇಕಾದರೆ ಜಾತಕ ಕತೆಗಳಿಗೇ ಹೋಗಬೇಕು. ಈ ಜಾತಕಗಳಿಗೆ ಈಗಿನ ರೂಪ ಬಂದುದು ಬುದ್ಧನ ತರುವಾಯ, ಬುದ್ದನ ಹಿಂದಿನ ಅವತಾರಗಳನ್ನು ಅವು ವರ್ಣಿಸುವುದರಿಂದ ಬೌದ್ಧ ಸಾಹಿತ್ಯದಲ್ಲಿ ಅವುಗಳಿಗೆ ಮುಖ್ಯ ಸ್ಥಾನವಿದೆ. ಆದರೆ ಕತೆಗಳು ಬಹು ಹಿಂದಿನವು ; ಬುದ್ಧನಿಗಿಂತ ಹಿಂದಿನ ಕಾಲದವು. ಆದ್ದರಿಂದ ಆ ಕಾಲದ ಭಾರತದ ಜೀವನದ ಮೇಲೆ ಎಷ್ಟೋ ಬೆಳಕನ್ನು ಬೀರುತ್ತವೆ. ಪ್ರೊಫೆಸರ್ ರೈಸ್ ಡೇವೀಸ್, “ಇದು