ವಿಷಯಕ್ಕೆ ಹೋಗು

ಪುಟ:ಭಾರತ ದರ್ಶನ.djvu/೧೦೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಭಾರತ ಸಂಶೋಧನೆ
೮೯

ವರೆಗೆ ದೊರೆತಿರುವ ಜನತಾ ಸಾಹಿತ್ಯದಲ್ಲಿ ಇವುಗಳೆ ತುಂಬ ಪ್ರಾಚೀನವಾದವು, ಪೂರ್ಣವಾದವು ಮತ್ತು ಬಹು ಮುಖ್ಯವಾದವು” ಎಂದಿದಾನೆ. ಭಾರತದಲ್ಲಿ ಈಚೆಗೆ ಬರೆದು, ಪಶ್ಚಿಮ ಏಷ್ಯ ಮತ್ತು ಯೂರೋಪಿಗೆ ಹರಡಿದ ಅನೇಕ ಪ್ರಾಣಿಗಳ ಮತ್ತು ಇತರ ಕತೆಗಳಿಗೆಲ್ಲ ಜಾತಕಗಳೇ ಮೂಲ.

ಭಾರತದ ಎರಡು ಪ್ರಮುಖ ಜನಾಂಗಗಳಾದ ಆರರು ದ್ರಾವಿಡರು ಕೊನೆಯಲ್ಲಿ ಮಿಳಿತವಾಗು ತಿದ್ದ ಕಾಲದ ಕತೆಗಳೇ ಜಾತಕ ಕತೆಗಳು. ಅವುಗಳಲ್ಲಿ ಆಗಿನ ಸಮಾಜದ ಅನೈಕಮತ್ಯ ಮತ್ತು ಅವ್ಯವಸ್ಥೆ ಎದ್ದು ಕಾಣುತ್ತದೆ. ಯಾವ ಒಂದು ವಿಂಗಡಣೆಯನ್ನೂ ಮಾಡಲು ಸಾಧ್ಯವಿಲ್ಲ. ಜಾತಿ ಪದ್ಧತಿ ಯಂತಹ ವ್ಯವಸ್ಥೆ ಯನ್ನಂತೂ ಆಗ ಊಹಿಸಲು ಸಾಧ್ಯವೇ ಇಲ್ಲ.

ಜಾತಕಗಳು ಜನತೆಯ ಸಂಪ್ರದಾಯವನ್ನು ಪ್ರತಿಬಿಂಬಿಸುತ್ತವೆ ಎಂದು ಹೇಳಬಹುದು. ವೈದಿಕ ಅಥವ ಬ್ರಾಹ್ಮಣ ಸಂಪ್ರದಾಯ ಮತ್ತು ಕ್ಷತ್ರಿಯ ಅಥವ ರಾಜಸಂಪ್ರದಾಯಕ್ಕಿಂತ ಇದು ಭಿನ್ನವಾದುದು.

ಅನೇಕ ರಾಜ್ಯಗಳ ಪಟ್ಟಿಗಳು, ರಾಜಮನೆತನಗಳ ವಂಶವೃಕ್ಷಗಳು ಇವೆ. ಮೊದಲು ಆಯ್ಕೆ ಯಿಂದ ದೊರೆಯುತ್ತಿದ್ದ ರಾಜತ್ವ ಕ್ರಮೇಣ ಹಿರಿಯ ಮಗನದಾಗಿ ಅನುವಂಶೀಯವಾಗುತ್ತದೆ. ಈ ಉತ್ತರಾಧಿಕಾರದಲ್ಲಿ ಸ್ತ್ರೀಗೆ ಅವಕಾಶವಿಲ್ಲ. ಆದರೂ ಕೆಲವು ವಿನಾಯಿತಿಗಳಿವೆ. ಚೀನದಲ್ಲಿರುವಂತೆ ಎಲ್ಲ ಅನಿಷ್ಟ ಕ್ಕೂ ರಾಜನೇ ಉತ್ತರವಾದಿ ; ಏನಾದರೂ ಕಷ್ಟ ಸಂಭವಿಸಿದರೆ ಅದಕ್ಕೆ ಕಾರಣ ರಾಜ ನಲ್ಲಿ ಏನೋ ದೋಷವಿದೆ. ಮಂತ್ರಿಮಂಡಲವಿರುತ್ತಿತ್ತು. ಯಾವುದೇ ಬಗೆಯ ಶಾಸನ ಸಭೆಯೂ ಇದ್ದಂತೆ ಪ್ರಮಾಣ ದೊರೆಯುತ್ತದೆ. ಅನೂಚನವಾಗಿ ನಡೆದು ಬಂದ ಸಂಪ್ರದಾಯಗಳಿಗನು ಸಾರವಾಗಿ ನಡೆಯಬೇಕೆಂದಿದ್ದರೂ ರಾಜನು ನಿರಂಕುಶ ಪ್ರಭುತ್ವವನ್ನು ನಡೆಸುತ್ತ ಇದ್ದ. ರಾಜ ಗುರುವಿಗೆ ಸಲಹೆಗಾರನೆಂದೂ ಮತ್ತು ಧರ್ಮ ಕರ್ಮಗಳ ದಿಗ್ಧರ್ಶಕನೆಂದೂ ರಾಜಾಸ್ಥಾನದಲ್ಲಿ ಬಹಳ ಗೌರವ. ನ್ಯಾಯಬಾಹಿರರೂ, ಕ್ರೂರಕರ್ಮಿಗಳೂ ಆದ ರಾಜರ ಮೇಲೆ ಜನರು ದಂಗೆ ಎದ್ದ ಪ್ರಸಂಗಗಳೂ, ರಾಜರಿಗೆ ಅವರ ತಪ್ಪಿಗಾಗಿ ಮರಣ ದಂಡನೆ ಗುರಿ ಪಡಿಸಿದ ದೃಷ್ಟಾಂತಗಳೂ ಇವೆ.

ಗ್ರಾಮ ಸಭೆಗಳಿಗೆ ತುಂಬ ಸ್ವಾತಂತ್ರವಿತ್ತು. ಮುಖ್ಯ ಉತ್ಪತ್ತಿ ಎಂದರೆ ಭೂಕಂದಾಯ. ಬೆಳೆದ ಬೆಳೆಯಲ್ಲಿ ರಾಜಪಾಲೇ ಭೂಕಂದಾಯ. ಅದನ್ನು ಯಾವಾಗಲೂ ಧಾನ್ಯ ರೂಪದಲ್ಲಿಯೇ ಕೊಡಬಹುದಾಗಿತ್ತು ; ಒಂದೊಂದು ವೇಳೆ ಧನರೂಪದಲ್ಲಿಯೂ ಕೊಡಬಹುದಾಗಿತ್ತು. ಪ್ರಾಯಶಃ ಇದು ಉತ್ಪತ್ತಿಯ ಆರರಲ್ಲಿ ಒಂದು ಅಂಶವಾಗಿತ್ತು. ಮುಖ್ಯವಾಗಿ ಅದು ಕೃಷಿಕ ಸಂಸ್ಕೃತಿ, ಸ್ವತಂತ್ರ ಗ್ರಾಮಜೀವನವೇ ಅದಕ್ಕೆ ಮೂಲಾಧಾರ. ದೇಶದ ರಾಜಕೀಯ ಆರ್ಥಿಕ ರಚನೆ ಈ ಗ್ರಾಮ ಪಂಚಾಯಿತಿಗಳಿ೦ದ, ಅವುಗಳನ್ನು ದಶಕಗಳಾಗಿ, ಶತಕಗಳಾಗಿ ವಿಂಗಡಿಸಿದ್ದರು, ಹಣಿ ನ ವ್ಯವಸಾಯ, ಪಶುಪಾಲನೆ, ಗೋವಳ ವೃತ್ತಿ ಬಹು ಜನರ ಅವಲಂಬನೆಯಾಗಿತ್ತು. ಎಲ್ಲಿ ನೋಡಿ ದರೂ ತೋಟಗಳು, ಉದ್ಯಾನಗಳು, ಮತ್ತು ಹಣ್ಣು ಹೂಗಳಿಗೆ ವಿಶೇಷ ಬೆಲೆ. ಅಲ್ಲಿ ವಿವರಿಸಿರುವ ಹೂಗಳ ಪಟ್ಟಿಯೇ ಅಸಾಧ್ಯವಿದೆ; ಮಾವು, ದ್ರಾಕ್ಷಿ, ಬಾಳೆ ಹಣ್ಣು, ಖರ್ಜೂರ ಈ ಹಣ್ಣುಗಳೆಂದರೆ ಪ್ರಾಣ, ನಗರಗಳಲ್ಲಿ ವ್ಯಂಜನಗಳ ಹಣ್ಣು ಹೂವಾಡಿಗರ ಅಂಗಡಿಗಳು ವಿಶೇಷವಾಗಿರುತ್ತಿದ್ದಂತೆ ಕಾಣುತ್ತದೆ. ಈಗಿನಂತೆ ಆಗಲೂ ಸಹ ಹೂಮಾಲೆ ಭಾರತೀಯರ ಪ್ರಿಯವಸ್ತುವಾಗಿತ್ತು.

ಮುಖ್ಯವಾಗಿ ಆಹಾರಕ್ಕಾಗಿ ಬೇಟೆಯಾಡುವುದು ಒಂದು ನಿಯಮಿತ ಕೆಲಸವಾಗಿತ್ತು. ಕೋಳಿ, ಮೀನು ಮುಂತಾಗಿ ಮಾಂಸಾಹಾರ ಸಾಮಾನ್ಯವಾಗಿತ್ತು. ಜಿಂಕೆಯ ಮಾಂಸಕ್ಕೆ ತುಂಬ ಬೆಲೆ ಯಿತ್ತು. ಮತ್ಸಗೃಹಗಳೂ, ವಧಾಸ್ಥಾನಗಳೂ ಇದ್ದವು. ಅಕ್ಕಿ, ಗೋಧಿ, ರಾಗಿ, ಜೋಳ ಮುಖ್ಯ ಆಹಾರವಸ್ತುಗಳು, ಕಬ್ಬಿನಿಂದ ಸಕ್ಕರೆ ಮಾಡುತ್ತಿದ್ದರು. ಹಾಲು, ಮೊಸರು, ಬೆಣ್ಣೆ, ತುಪ್ಪಕ್ಕೆ ಹೆಚ್ಚು

——————

• Richard Fick, The Social Organisation in North-East India in Buddha's time, Ratilal Mehta : Pre Buddhist India' (1939).