ಪುಟ:ಭಾರತ ದರ್ಶನ.djvu/೧೦೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೯೦

ಭಾರತ ದರ್ಶನ

ಬೆಲೆ ಇತ್ತು. ಮಾದಕ ಪದಾರ್ಥಗಳ ಸೇವನೆ ಇತ್ತು. ಅಕ್ಕಿ, ಹಣ್ಣು, ಮತ್ತು ಕಬ್ಬಿನಿಂದ ಮದ್ಯ ವನ್ನು ಮಾಡುತ್ತಿದ್ದರು.

ಲೋಹಗಳು ಮತ್ತು ರತ್ನಗಳಿಗಾಗಿ ಗಣಿಗಳ ಕೆಲಸ ನಡೆಯುತ್ತಿತ್ತು. ಚಿನ್ನ, ಬೆಳ್ಳಿ, ತಾಮ್ರ, ಕಬ್ಬಿಣ, ಸೀಸ, ತವರ, ಹಿತ್ತಾಳೆ ಲೋಹಗಳ ಹೆಸರು ಅವುಗಳಲ್ಲಿ ಉಲ್ಲೇಖವಾಗಿವೆ, `ರತ್ನಗಳಲ್ಲಿ ವಜ್ರ ಕೆಂಪು ಮುತ್ತು ಮತ್ತು ಪ್ರವಾಳಗಳ ಉಲ್ಲೇಖವಿದೆ. ಚಿನ್ನ, ಬೆಳ್ಳಿ, ತಾಮ್ರದ ನಾಣ್ಯಗಳ ಹೆಸರಿವೆ. ವ್ಯಾಪಾರದಲ್ಲಿ ಪಾಲುದಾರಿಕೆ ಇತ್ತು. ಬಡ್ಡಿಯಮೇಲೆ ಸಾಲ ದೊರೆಯುತ್ತಿತ್ತು,

ರೇಷ್ಮೆ, ಉಣ್ಣೆ ಮತ್ತು ಹತ್ತಿಯ ಬಟ್ಟೆ ಗಳು ತಯಾರಾಗುತ್ತಿದ್ದವು. ನೂಲುವುದು, ನೇಯು ವುದು, ಬಣ್ಣ ಹಾಕುವುದು ತುಂಬ ಅಭಿವೃದ್ಧಿಗೊಂಡಿದ್ದ ಮತ್ತು ವ್ಯಾಪಕವಾದ ಉದ್ಯಮಗಳಾಗಿದ್ದವು. ಲೋಹದ ಉದ್ಯಮಗಳು, ಯುದ್ದಕ್ಕೆ ಬೇಕಾದ ಶಸ್ತ್ರಾಸ್ತ್ರಗಳನ್ನೊದಗಿಸುತ್ತಿದ್ದವು. ಮನೆ ಕಟ್ಟಲು ಕಲ್ಲು, ಮರ, ಇಟ್ಟಿಗೆಗಳನ್ನು ಉಪಯೋಗಿಸುತ್ತಿದ್ದರು. ಬಡಗಿಯರು ಗಾಡಿಗಳು, ರಥಗಳು, ಹಡಗುಗಳು, ಮಂಚಗಳು, ಕುರ್ಚಿಗಳು, ಬೆಂಚುಗಳು, ಕಪಾಟುಗಳು, ಆಟಿಕೆಗಳು ಮುಂತಾದ ಅನೇಕ ಸಾಮಾನು ಗಳನ್ನು ಮಾಡುತ್ತಿದ್ದರು, ಬೆತ್ತದ ಕೆಲಸಗಾರರು ಚಾಪೆಗಳು, ಬುಟ್ಟಿಗಳು, ಬೀಸಣಿಗೆಗಳು, ಕೊಡೆ ಗಳನ್ನು ಮಾಡುತ್ತಿದ್ದರು. ಎಲ್ಲ ಹಳ್ಳಿಗಳಲ್ಲೂ ಕುಂಬಾರರು ಇದ್ದರು. ಹೂಗಳಿಂದಲೂ ಶ್ರೀಗಂಧ ದಿಂದಲೂ ಅನೇಕ ಗಂಧಗಳನ್ನು , ತೈಲಗಳನ್ನು, ಸುಗಂಧದ್ರವ್ಯಗಳನ್ನು, ಗಂಧದ ಹುಡಿಯನ್ನು ಸಹ ಮಾಡುತ್ತಿದ್ದರು. ಅನೇಕ ಔಷಧಗಳನ್ನು ಭೇಷಜಗಳನ್ನು ತಯಾರಿಸುತ್ತಿದ್ದರು. ಮೃತಶರೀರಗಳನ್ನು ಸಹ ನಶಿಸದಂತೆ ಕಾಪಾಡಿಡುತ್ತಿದ್ದರು.'

ಕುಶಲಕರ್ಮಿಗಳು ಮತ್ತು ಕೆಲಸಗಾರರಲ್ಲದೆ ಜಾತಕಗಳಲ್ಲಿ ಇತರ ವೃತ್ತಿಗಳ ಹೆಸರೂ ಇವೆ. ಶಿಕ್ಷಣವೃತ್ತಿಯವರು, ವೈದ್ಯರು, ಶಸ್ತ್ರವೈದ್ಯರು, ದಳ್ಳಾಳಿಗಳು, ವ್ಯಾಪಾರಗಾರರು, ಸಂಗೀತಗಾರರು, ಜ್ಯೋತಿಷ್ಯರು, ಕಾಯಿ ಪಲ್ಯಗಳ ವ್ಯಾಪಾರಿಗಳು, ಕಲಾವಿದರು, ನಾಟ್ಯಶಾಸ್ತ್ರ ಪ್ರವೀಣರು, ಹಾವಾಡಿ ಗರು, ಡೊಂಬರು, ಗೊಂಬೆಯಾಟದವರು, ಕೇಣಿ ವ್ಯಾಪಾರಿಗಳು ಇವರೆಲ್ಲರ ಹೆಸರುಗಳೂ ಇವೆ.

ಮನೆಗಳಲ್ಲಿ ದಾಸ್ಯಜೀವನ ಸಾಮಾನ್ಯವಾಗಿದ್ದಂತೆ ತೋರುತ್ತದೆ. ಮತ್ತು ಇತರ ಕೆಲಸಗಳಿಗೆ ವೇತನ ಕೊಡುತ್ತಿದ್ದರು, ಆಗಲೂ ಕೆಲವು ಅಸ್ಪೃಶ್ಯರಿದ್ದರು. ಅವರನ್ನು ಚಂಡಾಲರೆಂದು ಕರೆಯುತ್ತಿ ದ್ದರು. ಅವರ ಮುಖ್ಯ ಕೆಲಸ ಪ್ರೇತಸಂಸ್ಕಾರ,

ವರ್ತಕ ಸಂಘಗಳು, ಕಸಬುದಾರ ಸಂಘಗಳು ತು೦ಬ ಪ್ರಾಮುಖ್ಯತೆ ಪಡೆದಿದ್ದವು: “ ಆರ್ಥಿಕ ಕಾರಣಗಳಿಂದ, ಬಂಡವಾಳ ಸರಿಯಾಗಿ ವಿನಿಯೋಗವಾಗಲಿ ಎಂಬ ದೃಷ್ಟಿಯಿಂದ, ಪರಸ್ಪರ ಪರಿಚಯ ಸಂಪರ್ಕ ಉತ್ತಮವಾಗಲಿ ಎಂಬ ದೃಷ್ಟಿಯಿಂದ ಮತ್ತು ತಮ್ಮ ಸಮಾಜದ ನ್ಯಾಯವಾದ ಹಕ್ಕು ಬಾಧ್ಯತೆಗಳ ರಕ್ಷಣೆಗಾಗಿ ಈ ಸಂಘಗಳು ಹುಟ್ಟಿರುವುದನ್ನು ಭಾರತೀಯ ಸಂಸ್ಕೃತಿಯ ಮೊಟ್ಟ ಮೊದ ಲಿನ ಹಂತದಲ್ಲಿಯೇ ನೋಡಬಹುದು” ಎಂದು ಫಿಕ್ ಹೇಳಿದ್ದಾನೆ. ಹದಿನೆಂಟು ಕಸಬುದಾರ ಸಂಘಗಳಿದ್ದವು ಎಂದು ಜಾತಕಗಳು ಹೇಳುತ್ತವೆ. ಅದರಲ್ಲಿ ಉಲ್ಲೇಖಿತವಿರುವುದು ನಾಲ್ಕು ಮಾತ್ರ ಮರಗೆಲಸದವರು, ಗಾರೆ ಕೆಲಸದವರು, ಕಮ್ಮಾರರು, ಚರ್ಮದ ಕೆಲಸದವರು ಮತ್ತು ಬಣ್ಣಗಾರರು.

ಮಹಾಕಾವ್ಯಗಳಲ್ಲಿ ಸಹ ವರ್ತಕರ ಮತ್ತು ಉದ್ಯೋಗಿಗಳ ಸಂಘಗಳ ಉಲ್ಲೇಖವಿದೆ. ಮಹಾ ಭಾರತದಲ್ಲಿ “ ವರ್ತಕ ಸಂಘಗಳ ಸಂಘಟನೆಯೇ ಅವುಗಳ ಲಕ್ಷಣೋಪಾಯ ” ಎಂದಿದೆ. ವರ್ತಕ ಸಂಘಗಳ ವಿರೋಧವನ್ನು ಅಲಕ್ಷಿಸಿ ಯಾವ ಶಾಸನವನ್ನೂ ಮಾಡುವುದಕ್ಕೂ ದೊರೆಗೆ ಅವಕಾಶ ಕೊಡುತ್ತಿರಲಿಲ್ಲ. ವರ್ತಕ ಸಂಘಗಳ ಪ್ರಾಬಲ್ಯ ಅಷ್ಟು ಬಲವಾಗಿತ್ತು. ರಾಜದೃಷ್ಟಿಯಲ್ಲಿ ಗೌರವ ಸಲ್ಲ ಬೇಕಾದವರಲ್ಲಿ ಗುರುಗಳ ನಂತರ ಈ ವರ್ತಸಂಘಗಳ ನಾಯಕರು ಬರುತ್ತಿದ್ದರು. * ವರ್ತಕರ ಮುಖ್ಯಸ್ಥನಾದ ಶ್ರೇಷ್ಠಿ ಯು ಈಗಿನ ಸೇಠ್ ಅಥವ ಸೆಟ್ಟ ಬಹಳ ಪ್ರಮುಖ ವ್ಯಕ್ತಿಯಾಗಿದ್ದ.

——————

* ಪ್ರೊ, ಇ, ನಾಸ್‌ಬರ್ ಹಾಪ್ಕಿನ್ಸ್- ಕೇಂಬ್ರಿಜ್ ಇಂಡಿಯಾ ಚರಿತ್ರೆ'ಯಲ್ಲಿ, ಸ೦, ೧, ಪು. ೨೬೯,