ಪುಟ:ಭಾರತ ದರ್ಶನ.djvu/೧೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಭಾರತ ಸಂಶೋಧನೆ

೯೫

ಬೆಲೆಯಿತ್ತು. ಬುದ್ಧನಿಗೆ ಕಾಯಿಲೆಯಾದರೆ ಯಾವಾಗಲೂ ತಕ್ಷಶಿಲೆಯಲ್ಲಿ ಶಿಕ್ಷಣ ಪಡೆದ ಪ್ರಸಿದ್ಧ ವೈದ್ಯರನ್ನು ಕರೆತರುತ್ತಿದ್ದರಂತೆ ಕ್ರಿಸ್ತ ಪೂರ್ವ ಆರು ಮತ್ತು ಏಳನೆ ಶತಮಾನಗಳಲ್ಲಿದ್ದ ಮಹಾವೈಯಾಕರಣಿ ಪಾಣಿನಿ ತಕ್ಷಶಿಲೆಯಲ್ಲಿ ಓದಿದ್ದನಂತೆ.

ತಕ್ಷಶಿಲೆ ಈ ರೀತಿ ಬುದ್ಧನ ಕಾಲದ ಪೂರ್ವದ ವಿಶ್ವವಿದ್ಯಾನಿಲಯ ಮತ್ತು ಬ್ರಾಹ್ಮಣ ಸಂಸ್ಕೃತಿಯ ಜ್ಞಾನ ಕೇಂದ್ರ, ಬುದ್ಧನ ಕಾಲದಲ್ಲಿ ಬೌದ್ಧ ವಿದ್ವಾಂಸರಿಗೂ ಅದು ಕೇಂದ್ರವಾಗಿ ಭಾರತದ ಎಲ್ಲ ಕಡೆಗಳಿಂದ ಮತ್ತು ಪರರಾಷ್ಟ್ರಗಳಿಂದ ಬೌದ್ಧ ವಿದ್ಯಾರ್ಥಿಗಳು ಬರುತ್ತಿದ್ದರು. ಅದು ಮೌರ್ಯ ಸಾಮ್ರಾಜ್ಯದ ವಾಯವ್ಯ ಪ್ರಾಂತ್ಯದ ರಾಜಧಾನಿಯಾಗಿತ್ತು.

ಶಾಸನಕಾರರಲ್ಲಿ ಮೊದಲಿಗನಾದ ಮನುವಿನಂತೆ ಮಹಿಳೆಯರ ಸ್ಥಿತಿಯು ಬಹಳ ಕೀಳಾಗಿತ್ತು. ಅವರು ಯಾರನ್ನಾದರೂ-ತಂದೆ, ಗಂಡ ಅಥವ ಮಗನನ್ನು ಅವಲಂಬಿಸಿಯೇ ಇರಬೇಕಾಗಿತ್ತು. ಧರ್ಮ ಶಾಸ್ತ್ರದ ಪ್ರಕಾರ ಅವರೂ ಇತರ ವಸ್ತುಗಳಂತೆ. ಆದರೂ ಪುರಾಣ ಮಹಾಕಾವ್ಯಗಳ ಅನೇಕ ಕತೆಗಳಲ್ಲಿ ಕಾಣುವಂತೆ ಆ ನಿಯಮವು ಅಷ್ಟು ಕಠಿಣವಾಗಿ ಆಚರಣೆಯಲ್ಲಿರಲಿಲ್ಲ; ಮನೆ ಮತ್ತು ಸಮಾಜದಲ್ಲಿ ಆಕೆಗೆ ಒಳ್ಳೆಯ ಗೌರವವಿತ್ತು. ಅದೇ ಶಾಸನಕರ್ತ ಮನುವು “ಸ್ತ್ರೀಯರಿಗೆ ಎಲ್ಲಿ ಮನ್ನಣೆ ಇದೆಯೋ ಅಲ್ಲಿ ದೈವ ಸಾನ್ನಿಧ್ಯವಿದೆ” ಎಂದಿದ್ದಾನೆ. ತಕ್ಷಶಿಲೆ ಅಥವ ಇತರ ಪುರಾತನ ವಿಶ್ವ ವಿದ್ಯಾನಿಲಯಗಳಲ್ಲಿ ಸ್ತ್ರೀ ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡುತ್ತಿದ್ದಂತೆ ಕಾಣುವುದಿಲ್ಲ. ಆದರೆ ಅವರಲ್ಲಿ ಕೆಲವರು ಎಲ್ಲಿಯೋ ವಿದ್ಯಾರ್ಜನೆ ಮಾಡಿರಬೇಕು ; ಅನೇಕ ಕಡೆ ಬಹಳ ವಿದ್ಯಾವತಿಯರೂ ಮಹಾಜ್ಞಾನಿಗಳೂ ಆದ ಸ್ತ್ರೀಯರ ಹೆಸರು ಬಂದಿದೆ. ಆ ಮೇಲೆ ಸಹ ಅನೇಕ ಘನವಿದ್ಯಾವತಿಯರಾದ ಮಹಿಳೆಯರ ಹೆಸರು ಬಂದಿದೆ. ಆ ಮೇಲೆ ಸಹ ಅನೇಕ ಘನವಿದ್ಯಾವತಿಯರಾದ ಮಹಿಳೆಯರ ಹೆಸರನ್ನು ಕಾಣುತ್ತೇವೆ. ಪ್ರಾಚೀನ ಭಾರತದಲ್ಲಿ ಮಹಿಳೆಯ ಸ್ಥಾನ ಹೀನಸ್ಥಿತಿಯಲ್ಲಿದ್ದರೂ ಇಂದಿನ ದೃಷ್ಟಿಯಿಂದ ನೋಡಿದರೆ ಪ್ರಾಚೀನ ಗ್ರೀಸ್, ರೋಮ್, ಕ್ರೈಸ್ತ ಮತ ಮಧ್ಯಯುರೋಪಿನ ಕ್ಯಾನನ್ ಶಾಸನ, ಅಷ್ಟೇ ಏಕೆ, ೧೯ ನೆಯ ಶತಮಾನದ ಆದಿ ಭಾಗದ ಆಧುನಿಕ ಕಾಲದವರೆಗಿನ ಯೂರೋಪಿನ ಮಹಿಳೆಯರ ಸ್ಥಿತಿಗಿಂತ ಉತ್ತಮವಾಗಿತ್ತು.

ಮನು ಮತ್ತು ಈಚಿನ ಶಾಸನ ಕರ್ತರೆಲ್ಲ ವ್ಯಾಪಾರದಲ್ಲಿ ವಿವಿಧ ಪಾಲುಗಾರಿಕೆ ಕ್ರಮಗಳನ್ನು ತಿಳಿಸಿದ್ದಾರೆ. ಮನು ಹೇಳುವದು ಧರ್ಮಗುರುಗಳ ವಿಷಯ ಮಾತ್ರ, ಯಾಜ್ಞವಲ್ಕನು ವ್ಯಾಪಾರ ಮತ್ತು ವ್ಯವಸಾಯ ವಿಷಯಗಳಲ್ಲೂ ಪಾಲುಗಾರಿಕೆ ಇತ್ತೆಂದು ಹೇಳುತ್ತಾನೆ. ಅದರಿಂದೀಚಿನ ನಾರದನು “ಪ್ರತಿಯೊಬ್ಬ ಪಾಲುದಾರನ ನಷ್ಟ, ವೆಚ್ಚ, ಲಾಭವು ಅವನ ಬಂಡವಾಳದ ಪ್ರಮಾಣಕ್ಕನು ಸಾರವಾಗಿ ಸವ, ಹೆಚ್ಚು ಅಥವ ಕಡಮೆ ಇರುತ್ತದೆ ಎಂದಿದ್ದಾನೆ. ಸಂಗ್ರಹ, ಆಹಾರ, ಜಕಾತಿ ನಷ್ಟ, ಬಾಡಿಗೆ, ರಕ್ಷಣೆಗಳ ವೆಚ್ಚವನ್ನು ಪ್ರತಿಯೊಬ್ಬ ಪಾಲುದಾರನೂ ತನ್ನ ಒಪ್ಪಂದದಂತೆ ಕೊಡ ಬೇಕು” ಎಂದು ಹೇಳಿದ್ದಾನೆ.

ಮನುವಿನ ಭಾವನೆಯಂತೆ ಆ ಕಾಲದ ರಾಜ್ಯವೆಂದರೆ ಒಂದು ಸಣ್ಣ ರಾಜ್ಯ, ಈ ಕಲ್ಪನೆಯು ಬೆಳೆಯುತ್ತಿತ್ತು. ಬದಲಾವಣೆಯಾಗುತ್ತಿತ್ತು. ಕೊನೆಕೊನೆಗೆ ಕ್ರಿಸ್ತಪೂರ್ವ ನಾಲ್ಕನೆಯ ಶತಮಾನದ ಮೌಲ್ಯ ಚಕ್ರಾಧಿಪತ್ಯಕ್ಕೂ, ಮತ್ತು ಗ್ರೀಕರೊಂದಿನ ಅ೦ತರರಾಷ್ಟ್ರೀಯ ಬಾಂಧವ್ಯಕ್ಕೂ ಅನ್ವಯಿಸಿತು.

ಭಾರತದಲ್ಲಿ ಕ್ರಿಸ್ತ ಪೂರ್ವ ನಾಲ್ಕನೆಯ ಶತಮಾನದಲ್ಲಿ ರಾಯಭಾರಿಯಾಗಿದ್ದ ಮೆಗಾಸ್ತನೀಸ್ ಭಾರತದಲ್ಲಿ ದಾಸ್ಯ ಪದ್ಧತಿಯೇ ಇಲ್ಲ ಎಂದು ಸ್ಪಷ್ಟ ಹೇಳಿದ್ದಾನೆ. ಆದರೆ ಇದು ತಪ್ಪು. ಮನೆ ಆಳು ತನದ ದಾಸ್ಯವಿತ್ತು ಮತ್ತು ಭಾರತೀಯ ಗ್ರಂಥಗಳಲ್ಲಿ ದಾಸ್ಯ ಜೀವನವನ್ನು ಉತ್ತಮಪಡಿಸಬೇ ಕೆಂದು ಹೇಳಿದೆ. ಈ ದಾಸ್ಯ ಪದ್ಧತಿ ವಿಶೇಷ ಪ್ರಮಾಣದಲ್ಲಿರಲಿಲ್ಲ. ಶ್ರಮ ಜೀವನಕ್ಕಾಗಿ ಆಗ ಅನೇಕ ದೇಶಗಳಲ್ಲಿದ್ದಂತೆ ಗುಲಾಮರ ಪಡೆಗಳಿರಲಿಲ್ಲ. ಪ್ರಾಯಶಃ ಈ ಕಾರಣದಿಂದ ಮೆಗಾಸ್ತನೀಸ್ ಭಾರತದಲ್ಲಿ ದಾಸ್ಯವಿರಲಿಲ್ಲ ಎಂದು ಹೇಳಿರಬಹುದು. “ಆರ್ಯನನ್ನು ದಾಸ್ಯಕ್ಕೆಂದೂ ತಳ್ಳ ಬಾರದು” ಎಂಬುದು