ಒಂದು ನಿಯಮವಾಗಿತ್ತು. ಆರ್ಯನಾರು, ಅನಾರ್ಯನಾರು ಎಂದು ಹೇಳುವುದು ಕಷ್ಟ. ಆದರೆ ಆಗಿನ ಕಾಲದಲ್ಲಿ ಆರ್ಯರೆಂದರೆ ಮೂಲ ಚಾತುರ್ವರ್ಣಗಳು ಎಂದು ಹೇಳಬಹುದು. ಅದರಲ್ಲಿ ಶೂದ್ರರೂ ಸೇರಿದ್ದರು, ಆದರೆ ಅಸ್ಪೃಶ್ಯರು ಸೇರಿರಲಿಲ್ಲ.
ಚೀನದಲ್ಲಿ ಸಹ ಪ್ರಾಚೀನ ಹಾಸ್ವ೦ಶದ ಕಾಲದ ಆರಂಭದಿನಗಳಲ್ಲಿ ಮುಖ್ಯವಾಗಿ ಮನೆಕೆಲ ಸಕ್ಕೆ ಗುಲಾಮರಿದ್ದರು. ವ್ಯವಸಾಯ ಮತ್ತು ದೊಡ್ಡ ಕಾಮಗಾರಿಗಳಲ್ಲಿ ಅವರನ್ನು ಉಪಯೋಗಿಸುತ್ತಿರಲಿಲ್ಲ. ಭಾರತ ಮತ್ತು ಚೀನ ಎರಡು ದೇಶಗಳಲ್ಲೂ ಈ ಮನೆಯ ಜೀತದಾಳುಗಳು ಒಟ್ಟು ಜನ ಸಂಖ್ಯೆಯ ಪ್ರಮಾಣದಲ್ಲಿ ಅತ್ಯಲ್ಪ. ಈ ಮುಖ್ಯ ದೃಷ್ಟಿಯಿಂದ ಭಾರತೀಯ ಮತ್ತು ಚೀನೀ ಸಮಾಜಕ್ಕೂ ಪ್ರಾಚೀನ ಗ್ರೀಕ್ ಮತ್ತು ರೋಮನ್ ಸಮಾಜಕ್ಕೂ ಬಹಳ ಅಂತರವಿತ್ತು,
ಆ ಪುರಾತನ ಕಾಲದಲ್ಲಿ ಭಾರತೀಯರು ಹೇಗೆ ಇದ್ದರು ? ಅಷ್ಟು ದೂರದ ಮತ್ತು ಅನೇಕ ವಿಧದಲ್ಲಿ ಇಂದಿಗಿಂತ ಭಿನ್ನವಿರುವ ಕಾಲದ ಚಿತ್ರವು ಕಲ್ಪನೆಗೆ ಸಹ ಕಷ್ಟ. ಆದರೂ ನಮಗೆ ದೊರೆತಿರುವ ನಾನಾವಿಧ ಅಂಶಗಳಿಂದ ಒಂದು ಮಸಕು ಚಿತ್ರವನ್ನು ಊಹಿಸಬಹುದು. ಅವರು ಹಗುರ ಮನಸ್ಸಿನವರೂ ಆತ್ಮನಂಬಿಕೆಯುಳ್ಳವರೂ ತಮ್ಮ ಶಿಷ್ಟಾಚಾರಗಳಲ್ಲಿ ಗೌರವವಿಟ್ಟವರೂ, ಅವ್ಯಕದ ಸಂಶೋಧನೆಯಲ್ಲಿ ಆಸಕ್ತರೂ ಪ್ರಕೃತಿ ಮತ್ತು ಮಾನವ ಜೀವನದ ಸಮಸ್ಯೆಗಳನ್ನು ಪ್ರಶ್ನಿಸಿ ವಿಚಾರ ಮಾಡುವವರೂ, ತಾವು ಸೃಜಿಸಿದ ಪರಿಮಿತಿ ಮತ್ತು ಮೌಲ್ಯಕ್ಕೆ ಬಹು ಬೆಲೆ ಕೊಡು ವವರೂ, ಆದರೂ ಸುಖಜೀವಿಗಳೂ, ಸಂತೋಷಪುರುಷರೂ, ಮರಣಕ್ಕೆ ಅಂಜದವರೂ ಆಗಿದ್ದರು ಎಂದು ಹೇಳಬಹುದು. ಉತ್ತರ ಹಿಂದೂಸ್ಥಾನದಲ್ಲಿ ಅಲೆಕ್ಸಾಂಡರನ ದಂಡಯಾತ್ರೆಯ ಚರಿತ್ರಕಾರ ನಾದ ಆರ್ರಿಯನ್ ಭಾರತೀಯರ ಹಗುರ ಜೀವನವನ್ನು ಕಂಡು ತು೦ಬ ಆಶ್ಚರ್ಯಪಟ್ಟು “ ಭಾರತೀ ಯರಷ್ಟು ಸಂಗೀತಪ್ರಿಯ, ನಾಟ್ಯ ಪ್ರಿಯ ಜನಾಂಗ ಬೇರೊಂದಿಲ್ಲ” ಎಂದಿದ್ದಾನೆ.
೧೬ ಮಹಾವೀರ ಮತ್ತು ಬುದ್ಧ: ಜಾತಿ
ಪುರಾಣ ಮಹಾಕಾವ್ಯಗಳ ಕಾಲದಿಂದ ಬುದ್ಧನ ಕಾಲದವರೆಗೆ ಉತ್ತರ ಹಿಂದೂ ಸ್ಥಾನದಲ್ಲಿ ಈ ಬಗೆಯ ಒಂದು ಹಿನ್ನೆಲೆ ಇತ್ತು. ರಾಜಕೀಯದಲ್ಲಿ ಆರ್ಥಿಕ ದೃಷ್ಟಿಯಲ್ಲಿ ಅದು ಸದಾ ವ್ಯತ್ಯಾಸಗೊಳ್ಳು ತಾಯಿತ್ತು, ಮತ್ತು ಸಂಘಟನೆ ಮತ್ತು ಸಂಸೃಷ್ಟಿ ಜೀವನ ಮತ್ತು ಔದ್ಯೋಗಿಕ ಪ್ರಾವೀಣ್ಯತೆಯೂ ಮುಂದುವರಿಯುತ್ತಲೇ ಇದ್ದವು. ಭಾವನಾ ಪ್ರಪಂಚದಲ್ಲಿ ವಿಕಾಸವೂ ಇನ್ನು ಕೆಲವು ವೇಳೆ ಘರ್ಷಣೆಗಳೂ ಆಗುತ್ತಲೇ ಇದ್ದವು. ಉಪನಿಷತ್ತುಗಳ ತರುವಾಯ ಅನೇಕ ಮಾರ್ಗಗಳಲ್ಲಿ ಜ್ಞಾನ ಮತ್ತು ಕ್ರಿಯಾ ಸಕ್ತಿಯ ಅಭಿವೃದ್ಧಿ ಯು ನಡೆಯುತ್ತಲೇ ಇತ್ತು. ಪೌರೋಹಿತ್ಯ ಮತ್ತು ಕರ್ಮ ಕಾಂಡಗಳಿಗೆ ಈ ಆಸಕ್ತಿಗಳೇ ಪ್ರತಿಕ್ರಿಯೆಗಳಾದವು. ತಮ್ಮ ಕಣ್ಣೆದುರಿನ ಅನೇಕ ವಿಷಯಗಳನ್ನು ಕಂಡು ಅಸಹ್ಯ ಪಟ್ಟು ಕೊಂಡ ಮಾನವ ಮನಸ್ಸಿನಲ್ಲುಂಟಾದ ಕ್ರಾಂತಿಯ ಫಲವಾಗಿ ಉಪನಿಷತ್ತುಗಳು ಉದ್ಭವಿಸಿದವು. ಸ್ವಲ್ಪ ದಿನಗಳ ನಂತರ ಅದೇ ಕಾರಣದಿಂದ ಚಾರ್ವಾಕಮತ, ಜೈನಮತ, ಬೌದ್ಧ ಮತಗಳ ಉದ್ಧ ನವೂ ಮತ್ತು ಭಗವದ್ಗೀತೆಯಲ್ಲಿ ಆಗ ಬಳಕೆಯಲ್ಲಿದ್ದ ಎಲ್ಲ ವಿವಿಧ ಧರ್ಮಾಚರಣೆಗಳ ಸಂಘಟನ ಸಮನ್ವಯ ಪ್ರಯತ್ನವೂ ನಡೆಯಿತು. ಈ ಎಲ್ಲ ಪ್ರಯತ್ನಗಳ ಫಲವಾಗಿ ಭಾರತೀಯ ಷಡ್ಡರ್ಶನಗಳು ಹುಟ್ಟಿದವು. ಆದರೆ, ಈ ಎಲ್ಲ ಮಾನಸಿಕ ಹೋರಾಟ ಮತ್ತು ಕ್ರಾಂತಿಯ ಹಿಂದೆ ಒಂದು ಸ್ಪಷ್ಟ ವಾದ ಪ್ರಗತಿಪರ ರಾಜಕೀಯ ಜೀವನವು ನಡೆದುಬಂದಿತ್ತು.
ಜೈನ ಮತ್ತು ಬೌದ್ಧ ಮತಗಳೆರಡೂ ಒಂದು ದೃಷ್ಟಿಯಿಂದ ವೈದಿಕ ಧರ್ಮದಿಂದಲೇ ಹುಟ್ಟಿ ದ್ದರೂ, ಅದಕ್ಕಿಂತ ಭಿನ್ನವಾದ ಧರ್ಮಗಳು ಮತ್ತು ಅದರ ಕವಲುಗಳು, ವೇದ ಪ್ರಾಮಾಣ್ಯವನ್ನು ಅವು ಒಪ್ಪುವುದಿಲ್ಲ. ಎಲ್ಲಕ್ಕೂ ಮುಖ್ಯವಾಗಿ ಕಾರಣ, ಮೂಲ ಒಂದು ಇದೆ ಎನ್ನುವುದನ್ನೇ ಅವರು ಒಪ್ಪುವುದಿಲ್ಲ. ಅಥವ ಆ ವಿಷಯವಾಗಿ ಏನನ್ನೂ ಹೇಳುವುದಿಲ್ಲ. ಎರಡರಲ್ಲೂ ಅಹಿಂಸೆಗೆ ಮತ್ತು ಬ್ರಹ್ಮಚಾರಿಗಳಾದ ಸನ್ಯಾಸಿಗಳಿಗೆ ಮತ್ತು ಭಿಕ್ಷುಗಳಿಗೆ ಪ್ರಾಧಾನ್ಯ, ಎರಡು ಧರ್ಮಗಳ ಪ್ರವೇಶದಲ್ಲೂ