ವಿಷಯಕ್ಕೆ ಹೋಗು

ಪುಟ:ಭಾರತ ದರ್ಶನ.djvu/೧೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಭಾರತ ಸಂಶೋಧನೆ
೯೭

ಒಂದು ವಿಧವಾದ ವಾಸ್ತವಿಕತೆ ಮತ್ತು ವಿಚಾರ ದೃಷ್ಟಿ ಇದೆ, ಅದೃಷ್ಟ ಪ್ರಪಂಚದ ವಿಷಯ ನಾವು ಚರ್ಚಿಸುವಾಗ ಇಷ್ಟೇ ಸಾಲದು ನಿಜ. ಸತ್ಯ ನಮ್ಮ ನಿಲುವಿಗೆ ಸಾಪೇಕ್ಷ ಎನ್ನುವುದು ಜೈನಧರ್ಮದ ಮೂಲ ತತ್ವಗಳಲ್ಲಿ ಒಂದು. ಜೀವನ ಮತ್ತು ಭಾವನೆಗಳಲ್ಲಿ ಸಂನ್ಯಾಸ ಮಾರ್ಗಕ್ಕೆ ಅತಿ ಪ್ರಾಮುಖ್ಯತೆ ಕೊಟ್ಟ ಅತೀಂದ್ರವಲ್ಲದ ಮತ್ತು ಅತಿ ಕಠಿಣವಾದ ನೈತಿಕ ಧರ್ಮ ಅದು.

ಜೈನ ಧರ್ಮ ಸಂಸ್ಥಾಪಕನಾದ ಮಹಾವೀರ ಮತ್ತು ಬೌದ್ಧ ಧರ್ಮ ಸಂಸ್ಥಾಪಕನಾದ ಬುದ್ಧ ಇಬ್ಬರೂ ಸಮಕಾಲೀನರು ಮತ್ತು ಕ್ಷತ್ರಿಯವಂಶದವರು. ಬುದ್ದ ಕ್ರಿಸ್ತ ಪೂರ್ವ ೫೪೪ ರಲ್ಲಿ ತನ್ನ ಎಂಭತ್ತನೆಯ ವಯಸ್ಸಿನಲ್ಲಿ ಕಾಲವಾದನು. ಬೌದ್ಧ ಯುಗದ ಆರಂಭವೂ ಅಂದಿನಿಂದ. ಇದು ಸಾಂಪ್ರ ದಾಯಿಕ ಕಾಲ (ಐತಿಹಾಸಿಕರು ಇನ್ನೂ ಸ್ವಲ್ಪ ಈಚೆಗೆ, ಕ್ರಿಸ್ತಪೂರ್ವ ೪೮೭ರಲ್ಲಿ ಎಂದು ಹೇಳು ತ್ತಾರೆ. ಆದರೆ ಈಗ ಅವರೂ ಸಹ ಸಾಂಪ್ರದಾಯಿಕ ಕಾಲನಿರ್ಣಯವೇ ಸರಿ ಎಂದು ಒಪ್ಪಿದ್ದಾರೆ.) ಬೌದ್ದ ಯುಗದ ೨೪೮೮ ನೆಯ ವರ್ಷದ ಯುಗಾದಿ ಹಬ್ಬದ ದಿನ 'ವೈಶಾಖ ಪೌರ್ಣಿಮೆ' ಎಂದು ಪ್ರಸಿದ್ದ ವಾದ ವೈಶಾಖ ಶುದ್ಧ ಹುಣ್ಣಿಮೆಯ ದಿನ ಇದನ್ನು ಬರೆಯುತ್ತಿರುವುದು ಒಂದು ವಿಶೇಷ. ಬುದ್ದನು ಹುಟ್ಟಿದ್ದೂ, ಆತನಿಗೆ ಜ್ಞಾನದರ್ಶನವಾದದ್ದೂ ಮತ್ತು ಕೊನೆಯಲ್ಲಿ ಕಾಲವಾದದ್ದೂ ವೈಶಾಖ ಶುಕ್ಲ ಪೌರ್ಣಮಿಯ ದಿನವೇ ಅಂತೆ.

ಬುದ್ಧನು ರೂಢಮೂಲವಾದ ಮತಾಚಾರ, ಮೂಢನಂಬಿಕೆ, ಕರ್ಮಕಾಂಡ ಮತ್ತು ಪೌರೋಹಿತ್ಯ ಮತ್ತು ಅದರ ಪರಿವಾರಕ್ಕೆ ಅಂಟಿಕೊಂಡಿದ್ದ ಎಲ್ಲ ಹಕ್ಕು ದಾರಿಗಳನ್ನೂ ಧೈರ್ಯದಿಂದ ವಿರೋಧಿಸಿದ. ತತ್ವಶಾಸ್ತ್ರದ ಮತ್ತು ಮತೀಯ ದೃಷ್ಟಿಯನ್ನೂ ಪವಾಡಗಳನ್ನೂ, ಅಪೌರುಷೇಯ ವೇದಗಳನ್ನೂ, ಅಲೌಕಿಕ ವ್ಯಾಪಾರಗಳನ್ನೂ ಖಂಡಿಸಿದ. ತರ್ಕ, ವಿಚಾರ ಮತ್ತು ಅನುಭವದ ಅಡಿಗಲ್ಲಿನ ಮೇಲೆ ತನ್ನ ಸಂದೇಶವನ್ನು ನಿರ್ಮಿಸಿದ. ನೀತಿಧರ್ಮಕ್ಕೆ ಪ್ರಾಮುಖ್ಯತೆ ಕೊಟ್ಟ. ಮನಶ್ಯಾಸ್ತ್ರದ ವಿಶ್ಲೇಷಣ ಪದ್ಧತಿಯ ರೀತ್ಯ, ಆತ್ಮಕ್ಕೆ ಎಡೆಗೊಡದ ಮನಶ್ಯಾಸ್ತ್ರದ ರೀತ್ಯ ತನ್ನ ಧರ್ಮವನ್ನು ರಚಿಸಿದ. ತತ್ವ ಶಾಸ್ತ್ರದ ಜಟಿಲತೆಯ ದುರ್ಗಂಧದ ನಂತರ ಪರ್ವತಾಗ್ರದಿಂದ ಬೀಸುವ ಶುಭ್ರ ತಂಗಾಳಿಯಂತೆ ಆತನ ಸಮಸ್ಯಾ ಪ್ರವೇಶವೇ ಹಿತಕರವಾಗಿದೆ.

ಬುದ್ದನು ಪ್ರತ್ಯಕ್ಷ ಮತಖಂಡನೆಯನ್ನು ಮಾಡಲಿಲ್ಲ. ಆದರೂ ಅವನ ಧರ್ಮದಲ್ಲಿ ಮತ ಪದ್ದತಿಗೆ ಸ್ಥಾನವಿಲ್ಲ. ಮತ್ತು ಆತನ ರೀತಿನೀತಿ ಮತ್ತು ಕಾರ್ಯಾಚರಣೆಯಿಂದ ಮತ ಪದ್ದತಿ ಸಡಿಲವಾಯಿತು. ಪ್ರಾಯಶಃ ಆತನ ಕಾಲದಲ್ಲಿ ಮತ್ತು ಅನಂತರ ಅನೇಕ ದಿನಗಳವರೆಗೆ ಮತ ಪದ್ಧತಿ ಬಹಳ ಸಡಿಲವಾಗಿತ್ತು. ಮತದ ಕಟ್ಟಿಗೆ ಸಿಕ್ಕಿ ಬಿದ್ದ ಯಾವ ಜನಾಂಗವೂ ಪರದೇಶ ವ್ಯಾಪಾರ ದಲ್ಲಿ ಮತ್ತು ಇತರ ಯಾವ ವಿದೇಶಿ ಸಾಹಸೋದ್ಯಮಗಳಲ್ಲಿ ಭಾಗವಹಿಸಲು ಸಾಧ್ಯವಿಲ್ಲ; ಆದರೂ ಬುದ್ಧನ ಕಾಲದ ನಂತರವೂ ಒಂದು ಸಾವಿರದ ಐದುನೂರು ವರ್ಷಗಳು ಅಥವ ಇನ್ನೂ ಹೆಚ್ಚು ಕಾಲ ಭಾರತಕ್ಕೂ ಸುತ್ತ ಮುತ್ತಲ ಇತರ ದೇಶಗಳಿಗೂ ಸಮುದ್ರ ವ್ಯಾಪಾರ ಅಭಿವೃದ್ಧಿ ಹೊಂದುತ್ತಿತ್ತು. ಮತ್ತು ಭಾರತೀಯ ವಲಸೆ ಪಡೆಗಳು ಉಚ್ಛಾಯ ಸ್ಥಿತಿಯಲ್ಲಿದ್ದವು. ವಾಯವ್ಯ ಪ್ರಾಂತ್ಯದ ಮೂಲಕ ವಿದೇಶೀಯರ ತಂಡಗಳು ನಿರಂತರ ಪ್ರವಹಿಸುತ್ತಿದ್ದವು. ಭಾರತವು ಅವುಗಳನ್ನೆಲ್ಲ ಜೀರ್ಣ ಮಾಡಿಕೊಳ್ಳುತ್ತ ಇತ್ತು.

ಈ ಜೀರ್ಣಶಕ್ತಿ ಇಕ್ಕೆಲದಿಂದಲೂ ನಡೆಯುತ್ತಿದ್ದುದು ಒಂದು ಅತ್ಯಾಶ್ಚರ್ಯದ ಸಂಗತಿ. ಕೆಳ ಗಡೆಯಿಂದ ಹೊಸ ಜಾತಿಗಳು ಉದ್ಭವಿಸುತ್ತಿದ್ದವು. ದಂಡೆತ್ತಿ ಬಂದು ಜಯಶೀಲರಾದವರೆಲ್ಲ ಕ್ಷತ್ರಿಯರೋ ಅರಸು ಮನೆತನದವರೋ ಆಗಿ ಬಿಡುತ್ತಿದ್ದರು. ಕ್ರಿಸ್ತಾ ಬಿ ಯ ಆರಂಭದ ಮೊದಲು ಮತ್ತು ಅನಂತರ ಎರಡು ಮೂರು ಶತಮಾನಗಳ ನಾಣ್ಯಗಳಲ್ಲಿ ಈ ತೀವ್ರ ವ್ಯತ್ಯಾಸವನ್ನು ಕಾಣಬಹುದು : ರಾಜನ ಹೆಸರು ವಿದೇಶೀಯವಾದರೂ ಅವನ ಮಗ ಮತ್ತು ಮೊಮ್ಮಗನ ಹೆಸರು ಸಂಸ್ಕೃತದಲ್ಲಿ ಮತ್ತು ರಾಜ್ಯಾಭಿಷೇಕವು ಕ್ಷತ್ರಿಯರಿಗೆ ವಿಧಾಯಕವಾದ ಶಾಸ್ರೋಕ್ತವಾದ ರೀತಿಯಲ್ಲಿ,

ಅನೇಕ ಕತ್ರಿಯ ರಜಪೂತ ವಂಶಗಳು ಕ್ರಿಸ್ತಪೂರ್ವ ೨ನೆಯ ಶತಮಾನದ ಶಕ ಅಥವ ಸಿಥಿಯ

7