ವಿಷಯಕ್ಕೆ ಹೋಗು

ಪುಟ:ಭಾರತ ದರ್ಶನ.djvu/೧೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೯೮
ಭಾರತ ದರ್ಶನ

ನರ ದಂಡಯಾತ್ರೆಯ ಕಾಲದಲ್ಲಿ ಆರಂಭವಾದವು. ಅಥವ ಸ್ವಲ್ಪಕಾಲದ ನಂತರ ಬಂದ ಶ್ವೇತ ಹೂಣರಿಂದ ಆರಂಭವಾದವು. ಇವರೆಲ್ಲ ಭಾರತದ ಧರ್ಮವನ್ನು ಸಂಸ್ಥೆಗಳನ್ನು ಒಪ್ಪಿದರು, ಅನಂತರ ಪುರಾಣ ಮಹಾಕಾವ್ಯಗಳ ನಾಯಕರ ಅನುವಂಶೀಯರೆಂದು ಕರೆಸಿಕೊಳ್ಳಲಾರಂಭಿಸಿದರು. ಈ ರೀತಿ ಕ್ಷತ್ರಿಯರಿಗೆ ಮುಖ್ಯವಾಗಿ ಬೇಕಾದದ್ದು ವಂಶವಲ್ಲ: ಆದರೆ ಸ್ಥಾನ ಮತ್ತು ಕೆಲಸ, ಆದ್ದರಿಂದ ವಿದೇಶೀಯರು ಆ ಗುಂಪಿನಲ್ಲಿ ಸೇರಿಕೊಳ್ಳುವುದು ಅತಿ ಸುಲಭವಾಯಿತು.

ಭಾರತೀಯ ಇತಿಹಾಸದ ಮಹಾ ಕಾಲಮಾನದಲ್ಲಿ ಅನೇಕ ಮಹಾಪುರುಷರು ಮತ ಧರ್ಮದ ಕಟ್ಟುಗಳಿಗೆ ಮತ್ತು ಪೌರೋಹಿತ್ಯಕ್ಕೆ ವಿರುದ್ಧವಾಗಿ ಪದೇ ಪದೇ ಜನರನ್ನು ಎಚ್ಚರಿಸಿದ್ದಾರೆ ; ಮತ್ತು ಅನೇಕ ವಿಪ್ಲವಗಳೂ ನಡೆದಿವೆ. ಆದರೂ ಕ್ರಮೇಣ, ನಿದಾನವಾಗಿ, ಕಂಡೂ ಕಾಣದಂತೆ ದೈವ ನಿಯಾಮಕವೋ ಎಂಬಂತೆ ಜಾತಿಪದ್ಧತಿ ಹೆಮ್ಮರವಾಗಿ ಬೆಳೆದು, ಹಬ್ಬಿ, ತನ್ನ ಸಹಸ್ರ ಬಾಹುಗಳ ಜಟಿಲ ಮುಷ್ಟಿಯಲ್ಲಿ ಭಾರತೀಯ ಜೀವನದ ಸಾರಸತ್ವಸ್ವವನ್ನೂ ಹಿಂಡಿ ಹಿಸುಕುತ್ತಿದೆ. ಜಾತಿ ಪದ್ಧತಿಯಮೇಲೆ ಬಂಡಾಯ ಹೂಡಿದವರನ್ನು ಅನೇಕರು ಹಿಂಬಾಲಿಸಿದ್ದಾರೆ. ಆದರೆ ಕಾಲಕ್ರಮೇಣ ಅವರೇ ಒಂದು ಜಾತಿಯಾಗಿದ್ದಾರೆ. ಮೂಲ ಧರ್ಮದಮೇಲೆ ದಂಗೆ ಎದ್ದ ಮತ್ತು ಅದಕ್ಕೆ ಅನೇಕ ದೃಷ್ಟಿಯಿಂದ ಭಿನ್ನವಾದ ಜೈನಧರ್ಮ ಜಾತಿ ಪದ್ದತಿಯನ್ನು ಸಹನೆಯಿಂದ ನೋಡಿತು ಮತ್ತು ತನ್ನೊಳಗೇ ಜಾತಿಯನ್ನು ಕಲ್ಪಿಸಿಕೊಂಡಿತು. ಈಗಲೂ ಅದೇ ರೀತಿಯಲ್ಲಿ ಉಳಿದು ಹಿಂದೂ ಧರ್ಮದ ಒಂದು ಶಾಖೆಯಾಗಿ ಮುಂದುವರಿಯುತ್ತಿದೆ. ಜಾತಿ ಪದ್ಧತಿಗೆ ಎಡೆಗೊಡದ ಮತ್ತು ತನ್ನ ಭಾವನೆ ಮತ್ತು ದೃಷ್ಟಿ ಕೋಣದಲ್ಲಿ ಪೂರ್ಣ ಸ್ವತಂತ್ರವಾದ ಬೌದ್ಧ ಮತಕ್ಕೆ ಕಟ್ಟ ಕಡೆಗೆ ಭಾರತದಲ್ಲಿ ಸ್ಥಾನವೇ ಇಲ್ಲವಾಯಿತು. ಆದರೆ ಅದು ಭಾರತದ ಮೇಲೆ ಹಿಂದೂಧರ್ಮದಮೇಲೆ ಮಹತ್ಪರಿಣಾಮವನ್ನುಂಟುಮಾಡಿದೆ. ಕ್ರೈಸ್ತಧರ್ಮ ಹದಿನೆಂಟುನೂರು ವರ್ಷಗಳ ಹಿಂದೆ ಇಲ್ಲಿಗೆ ಬಂದು ನೆಲಸಿತ್ತು; ಕ್ರಮೇಣ ಅದರಲ್ಲೂ ಅವರದೇ ಜಾತಿಗಳಾದವು. ತನ್ನ ಧರ್ಮದಲ್ಲಿ ಯಾವ ಭಿನ್ನ ಭಾವನೆಯೂ ಇರಕೂಡದೆಂದು ಘಂಟಾಘೋಷವಾಗಿ ಖಂಡಿಸಿದ ಮುಸ್ಲಿಂ ಸಮಾಜ ರಚನೆಯಲ್ಲಿ ಸಹ ಈ ಜಾತಿಯ ಪ್ರಭಾವ ಸ್ವಲ್ಪ ಮಟ್ಟಿಗೆ ಇದೆ.

ನಮ್ಮ ಕಾಲದಲ್ಲೇ ಜಾತಿ ಪದ್ಧತಿಯ ಕ್ರೌರ್ಯವನ್ನು ಭೇದಿಸಲು ಮಧ್ಯಮವರ್ಗದಲ್ಲಿ ಅನೇಕ ಚಳವಳಿಗಳು ಹುಟ್ಟಿದೆ. ಸಾಮಾನ್ಯ ಜನಕೋಟಿಯ ದೃಷ್ಟಿಯಿಂದ ಸ್ವಲ್ಪ ಪರಿಣಾಮಮಾಡಿದೆ, ಆದರೆ ಕ್ರಾಂತಿಕಾರಕ ಪರಿಣಾಮವಾಗಿಲ್ಲ. ಅದಕ್ಕೆ ಕಾರಣ ಈ ಸುಧಾರಣಾ ಚಳವಳಿಗಳೆಲ್ಲ ಮೂಲ ಮತವನ್ನು ಪ್ರತ್ಯಕ್ಷ ವಿರೋಧಿಸಿದ್ದರಿಂದ, ಅನಂತರ ಗಾಂಧೀಜಿ ಬಂದು ಈ ಸಮಸ್ಯೆಗೆ ಕೈ ಹಾಕಿದರು. ಅದು ಸನಾತನ ಭಾರತೀಯ ಸಂಪ್ರದಾಯ ರೀತಿಯಲ್ಲಿ, ಪರೋಕ್ಷಮಾರ್ಗದಿಂದ ; ಮತ್ತು ಅವರ ಕಣ್ಣು ಜನಸಾಮಾನ್ಯದ ಮೇಲೆ. ಖಂಡತುಂಡ ವಾದ ಮಾಡಿದ್ದಾರೆ, ಮೇಲೆ ಬಿದು ಕೆಣಕಿದ್ದಾರೆ, ಹಟ ತೊಟ್ಟಿದ್ದಾರೆ, ಆದರೆ ಚಾತುರ್ವಣ್ಯ್ರದ ಮೂಲ ಆಧಾರ ಭೂತ ಗುಣಧರ್ಮದ ತತ್ವವನ್ನು ಮಾತ್ರ ವಿರೋಧಿಸಿಲ್ಲ. ಇಡೀ ಜಾತಿ ಪದ್ದತಿಯ ಬುಡಕ್ಕೇನೆ ಪೆಟ್ಟು ಬೀಳುವುದೆಂದು ತಿಳಿದ್ದೂ ಅಸಂಖ್ಯಾತ ಬೆಳೆದು ಹಬ್ಬಿರುವ ಜಾತಿ ಭೇದಗಳನ್ನು ಒಳ ಪಂಗಡಗಳನ್ನು ಉಗ್ರವಾಗಿ ಖಂಡಿಸಿದ್ದಾರೆ. ಅಸ್ತಿಭಾರವೇ ಕಳಚಿ ಬೀಳುತ್ತಿದೆ. ಜನಸಾಮಾನ್ಯದ ಮೇಲೆ ಅಸಾಧ್ಯ ಪರಿಣಾಮ ನಾಗಿದೆ. ಅವರಿಗೆ ಇಡೀ ಸಮಾಜ ಒ೦ದಾಗಿ ಇರಬೇಕು ಇಲ್ಲವೇ ಒಡೆದು ಚೂರಾಗಬೇಕು. ಆದರೆ ಗಾಂಧಿಗಿ೦ತ ಇನ್ನೂ ದೊಡ್ಡ ಶಕ್ತಿಯೊಂದು ಕೆಲಸಮಾಡುತ್ತಿದೆ: ಆಧುನಿಕ ಜೀವನ ಪರಿಸ್ಥಿತಿ, ಅಂತೂ ಕೊನೆಗೆ ಈ ಬಹು ಪ್ರಾಚೀನವಾದ ಜಗ್ಗದ ಈ ಜೀರ್ಣವಾದ ಸನಾತನ ಅವಶೇಷ ಮರಣೋನ್ಮುಖ ವಾದಂತಿದೆ.

ಮೂಲದಲ್ಲಿ ವರ್ಣಭೇದದಿಂದಲೇ ಹುಟ್ಟಿದ ಜಾತಿಪದ್ದತಿಯೊಂದಿಗೆ ನಾವು ಇಲ್ಲಿ ಭಾರತದಲ್ಲಿ ಹೋರಾಡುತ್ತಿರುವಾಗ, ಪಾಶ್ಚಾತ್ಯರಲ್ಲಿ ಹೊಸಹೊಸ, ಪ್ರತ್ಯೇಕ, ದುರಹಂಕಾರದ ಜಾತಿಗಳು, ಕೆಲವು ಜನಾಂಗ ವೈಶಿಷ್ಟ್ಯ ಭಾವನೆಯಿಂದ, ಇನ್ನು ಕೆಲವು ರಾಜಕೀಯ ಮತ್ತು ಆರ್ಥಿಕ ಸ್ವಾರ್ಥತೆಯಿಂದ, ಪ್ರಜಾಪ್ರಭುತ್ವದ ಸೋಗಿನಲ್ಲಿಯೇ ಹುಟ್ಟಿಕೊಂಡಿವೆ.