ನಿದ್ದಿರಬೇಕು. ಅಂತಹ ಮಹಾನುಭಾವನಿಗೆ ಜನ್ಮ ಕೊಡಬಲ್ಲ ರಾಷ್ಟ್ರದಲ್ಲಿ ಜನಾಂಗದ ವಿವೇಕದ ಅಂತಃಶಕ್ತಿಯ ನಿಧಿಯೂ ಇರಬೇಕು.
೨೧. ಅಶೋಕ
ಚಂದ್ರಗುಪ್ತ ಮೌರ್ಯನು ಭಾರತ ಮತ್ತು ಪಾಶ್ಚಾತ್ಯ ಪ್ರಪಂಚದ ಮಧ್ಯೆ ನಡೆಸಿದ ವ್ಯವಹಾರ ಸಂಬಂಧವು ಅವನ ಮಗ ಬಿಂದುಸಾರನ ಕಾಲದಲ್ಲೂ ಮುಂದುವರಿಯಿತು. ಈಜಿಪ್ಟ್ ದೇಶದ ಟಾಲೆಮಿ ಕಡೆಯಿಂದಲೂ, ಪಶ್ಚಿಮ ಏಷ್ಯದ ಸೆಲ್ಯೂಕಸ್ ನಿಕಟಾರ್‌ನ ಮಗ ಮತ್ತು ಉತ್ತರಾಧಿಕಾರಿ ಯಾದ ಆಂಟಿಯೋಕಸ್ ನಿಂದಲೂ ಪಾಟಲಿಪುತ್ರದ ರಾಜಸಭೆಗೆ ರಾಯಭಾರಿಗಳು ಬರುತ್ತಿದ್ದರು. ಚಂದ್ರಗುಪ್ತನ ಮೊಮ್ಮಗನಾಗ ಅಶೋಕನು ಈ ಸಂಬಂಧವನ್ನು ಇನ್ನೂ ವೃದ್ಧಿಗೊಳಿಸಿದನು. ಮುಖ್ಯವಾಗಿ ಬೌದ್ದ ಮತ ಪ್ರಸಾರದಿಂದ ಆತನ ಕಾಲದಲ್ಲಿ ಭಾರತವು ಬಹು ಮುಖ್ಯವಾದ ಅಂತರ ರಾಷ್ಟ್ರೀಯ ಕೇಂದ್ರವಾಯಿತು.
ಅಶೋಕನು ಕ್ರಿಸ್ತಪೂರ್ವ ೨೭೩ರಲ್ಲಿ ಈ ಮಹಾ ಸಾಮ್ರಾಜ್ಯಕ್ಕೆ ಅಧಿಪತಿಯಾದನು. ವಿಶ್ವವಿದ್ಯಾ ನಿಲಯದ ಕೇಂದ್ರವಾದ ತಕ್ಷಶಿಲೆಯೇ ರಾಜಧಾನಿಯಾಗಿದ್ದ ವಾಯವ್ಯ ಪ್ರಾಂತ್ಯಕ್ಕೆ ಮೊದಲು ಆತನು ಅಧಿಕಾರಿಯಾಗಿದ್ದನು. ಇಷ್ಟು ಹೊತ್ತಿಗೆ ಭಾರತದ ಬಹುಭಾಗವು ಸಾಮ್ರಾಜ್ಯದಲ್ಲಿ ಸೇರಿ ಏಷ್ಯದವರೆಗೆ ಹರಡಿತ್ತು. ನೈರುತ್ಯ ಮೂಲೆಯೂ ಮತ್ತು ದಕ್ಷಿಣದ ಸ್ವಲ್ಪ ಭಾಗ ಮಾತ್ರ ಅದರ ಆಧಿಪತ್ಯಕ್ಕೆ ಸೇರಿರಲಿಲ್ಲ. ಇಡೀ ಭಾರತವನ್ನು ಒಂದು ಕೇಂದ್ರ ರಾಜ್ಯಾಡಳಿತದೊಳಗೆ ತಂದು ಒಟ್ಟು ಗೂಡಿಸಬೇಕೆಂಬ ಹಿಂದಿನ ಹಿರಿಯಾಸೆಯು ಅಶೋಕನನ್ನೂ ಹಿಡಿಯಿತು. ಒಡನೆ ಪೂರ್ವ ತೀರದ ಕಳಿಂಗ ರಾಜ್ಯವನ್ನು ಗೆಲ್ಲಲು ದಂಡೆತ್ತಿ ಹೋದ. ಕಳಿಂಗ ಈಗಿನ ಒರಿಸ್ಸ ಮತ್ತು ಆಂಧ್ರದೇಶದ ಕೆಲವು ಭಾಗವಾಗಿತ್ತು. ಈ ಯುದ್ಧದಲ್ಲಿ ಅನೇಕ ಜನರು ಕೊಲೆಯಾದರು. ಈ ಸುದ್ದಿಯು ಅಶೋಕನ ಕಿವಿ ಮುಟ್ಟಿದೊಡನೆ ಶೋಕದಲ್ಲಿ ಮುಳುಗಿದ ಮತ್ತು ಯುದ್ಧವೆಂದರೆ ಅವನಿಗೆ ಅಸಹ್ಯ ಹುಟ್ಟಿತು. ಪ್ರಪಂಚದ ಇತಿಹಾಸದಲ್ಲಿ ವಿಜಯಶಾಲಿಗಳಾದ ರಾಜರ ಮತ್ತು ಸೇನಾನಾಯಕರ ಪರಂಪರೆಯಲ್ಲಿ ವಿಜಯೋನ್ಮತ್ತನಾಗಿರಬೇಕಾದಾಗ ಯುದ್ಧವನ್ನೇ ತ್ಯಜಿಸಲು ನಿರ್ಧರಮಾಡಿದ ಮಹಾಪುರುಷನೆಂದರೆ ಅಶೋಕ ಒಬ್ಬನೆ. ದಕ್ಷಿಣ ಭಾರತದ ತುದಿಯೊಂದನ್ನು ಬಿಟ್ಟು-ಮನಸ್ಸು ಮಾಡಿದ್ದರೆ ಅದೂ ಅವನ ದಾಗುತ್ತಿತ್ತು-ಇಡೀ ಭಾರತವೇ ಅವನ ಅಧೀನವಾಗಿತ್ತು. ಆದರೆ ತಿರುಗಿ ಆಕ್ರಮಣಮಾಡಲು ನಿರಾಕರಿಸಿದ. ಅವನಲ್ಲಿ ಅಸಾಧ್ಯ ಮಾನಸಿಕ ಪರಿವರ್ತನೆಯಾಯಿತು. ಬುದ್ಧನ ಉಪದೇಶದ ಪ್ರಭಾವದಿಂದ ಬೇರೆ ಕ್ಷೇತ್ರದಲ್ಲಿ ಸಾಹಸಮಾಡಿ ಜಯಶೀಲನಾದ.
ಅಶೋಕನ ಮನಸ್ಸಿನಮೇಲೆ ಯಾವ ಪರಿಣಾಮವಾಯಿತು, ಮುಂದೆ ಅವನು ಏನುಮಾಡಿದ ಎಂಬುದು ಅವನೇ ಕೆತ್ತಿಸಿದ ಶಿಲಾಲೇಖನಗಳಲ್ಲಿ, ಲೋಹ ಪಟಗಳಲ್ಲಿ ಬರೆದಿಟ್ಟ ಶಾಸನಗಳಲ್ಲಿ ಅವನ ಮಾತುಗಳಿಂದಲೇ ತಿಳಿಯುತ್ತದೆ. ಈ ಶಾಸನಗಳು ಭಾರತದ ನಾನಾಕಡೆಗಳಲ್ಲಿ ಈಗಲೂ ನಮಗೆ ದೊರೆಯುತ್ತವೆ. ಅವುಗಳಿಂದ ಅವನ ಸಂದೇಶ ಅವನ ಪ್ರಜೆಗಳಿಗೆ ಮಾತ್ರವಲ್ಲ, ಮುಂದಿನ ಪೀಳಿಗೆ ಗಳಿಗೂ ದೊರೆಯಿತು, ಒಂದು ಶಾಸನದಲ್ಲಿ ಈ ರೀತಿ ಹೇಳಿದೆ :
“ಚಕ್ರವರ್ತಿ ಸಾರ್ವಭೌಮನು ರಾಜ್ಯಾಭಿಷಿಕ್ತನಾದ ಎಂಟು ವರ್ಷಕ್ಕೆ ಕಳಿ೦ಗ ರಾಜ್ಯವನ್ನು ಜಯಿಸಿದನು. ೧೫೦ ಸಾವಿರ ಜನರು ಸೆರೆಸಿಕ್ಕರು; ಒಂದು ನೂರು ಸಾವಿರ ಜನರ ವಧೆಯಾಯಿತು. ಅದಕ್ಕೂ ಎಷ್ಟೊಪಾಲು ಜನರು ಸತ್ತರು.
“ಕಳಿಂಗರಾಜ್ಯ ಅಧೀನವಾದೊಡನೆ ಸಾಮ್ರಾಟ್ ಅಶೋಕನು ಭಕ್ತಿಧರ್ಮದ ರಕ್ಷಣೆಗಾಗಿ ಪ್ರತಿಜ್ಞೆ ಮಾಡಿದನು. ಆ ಧರ್ಮದ ಮೇಲೆ ವಿಶ್ವಾಸವೂ ನಿಷ್ಠೆ ಯೂ ಅಪಾರವಾಗಿ ಬೆಳೆಯಿತು. ಹಿಂದೆಂದೂ ದಾಸ್ಯಕ್ಕೀಡಾಗದ ಒಂದು ರಾಜ್ಯವನ್ನು ಗೆಲ್ಲಬೇಕಾದರೆ ಕೊಲೆ ಸಾವು ಮತ್ತು ಅನೇಕರ ಬಂಧನ ಅನಿವಾದ್ಯ. ಆದ್ದರಿಂದ ಕಳಿಂಗರಾಜ್ಯವನ್ನು ಅಧೀನಮಾಡಿಕೊಳ್ಳಲು ಆದ ಕೊಲೆಯಿಂದ ಚಕ್ರ