ಪುಟ:ಭಾರತ ದರ್ಶನ.djvu/೧೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಯುಗಾಂತರಗಳು

೧೧೫

ಕೊನೆಗೆ ಯಶೋವರ್ಮನ ನಾಯಕತ್ವದಲ್ಲಿ ಒಂದು ಸಂಯುಕ್ತ ಬಲದಿಂದ, ಒಗ್ಗಟ್ಟಿನಿಂದ ಅವರನ್ನು ಎದುರಿಸಿದರು, ಹೂಣರ ಶಕ್ತಿ ಮುರಿಯಿತು. ಅವರ ನಾಯಕ ಮಿಹಿರಗುಳ ಸೆರೆಯಾಳಾದ, ಆದರೆ ಗುಪ್ತರ ವಂಶಿಕನಾದ ಬಾಲಾದಿತ್ಯ ದೇಶರೂಢಿಯಂತೆ ಆತನಿಗೆ ಕರುಣೆತೋರಿ ಭಾರತವನ್ನು ಬಿಟ್ಟು ಹೋಗಲು ಆಜ್ಞೆ ಮಾಡಿದ, ಮಿಹಿರಗುಳ ಸ್ವಲ್ಪ ದಿನಗಳಲ್ಲೇ ಹಿಂತಿರುಗಿ ಬಂದು ಜೀವದಾತನನ್ನು ಮೋಸದಿಂದ ಕೊಂದು ಅವನ ಔದಾರಕ್ಕೆ ಪ್ರತೀಕಾರಮಾಡಿದ.

ಆದರೆ ಹೂಣರ ರಾಜ್ಯ ಭಾರತದಲ್ಲಿ ಬಹುಕಾಲ ನಡೆಯಲಿಲ್ಲ, ಐವತ್ತು ವರ್ಷಗಳು ಮಾತ್ರ ನಡೆಯಿತು. ಅವರಲ್ಲಿ ಕೆಲವರು ಇಲ್ಲಿಯೇ ಸಣ್ಣ ಸಣ್ಣ ಪಾಳೆಯ ಪಟ್ಟು ಗಳಾಗಿ ಉಳಿದು ಆಗಾಗ್ಗೆ ತೊಂದರೆ ಕೊಡುತ್ತಿದ್ದರು; ಕ್ರಮೇಣ ಅವರು ಭಾರತ ಜನತೆಯ ಮಹಾಸಾಗರದಲ್ಲಿ ಮುಳುಗಿ ಹೋದರು. ಈ ಪಾಳೆಯಗಾರರಲ್ಲಿ ಕೆಲವರು ಕ್ರಿಸ್ತಶಕ ಏಳನೆಯ ಶತಮಾನದ ಆದಿಯಲ್ಲಿ ಪುನಃ ಕಿರುಕುಳ ಕೊಡಲಾರಂಭಿಸಿದರು, ಕನೂಜದ ರಾಜನಾದ ಹರ್ಷವರ್ಧನ ಅವರನ್ನು ಸದೆಬಡಿದು, ಉತ್ತರ ಮತ್ತು ಮಧ್ಯ ಹಿಂದೂಸ್ಥಾನದಲ್ಲಿ ಒಂದು ಪ್ರಬಲ ರಾಜ್ಯವನ್ನು ಕಟ್ಟಿದನು. ಆತನು ಬಹಳ ನಿಷ್ಠ ನಾದ ಬೌದ್ಧಧರ್ಮ ಆದರೆ ಮಹಾಯಾನ ಬೌದ್ದನಾದ್ದರಿಂದ ಆ ಧರ್ಮವು ಅನೇಕ ವಿಧದಲ್ಲಿ ಹಿಂದೂ ಧರ್ಮದಂತೆಯೇ ಇತ್ತು. ಆತನು ಹಿಂದೂ ಮತ್ತು ಬೌದ್ಧ ಧರ್ಮಗಳೆರಡನ್ನೂ ಪ್ರೋತ್ಸಾಹಿ ಸಿದ. ಪ್ರಸಿದ್ದ ಚೀನೀ ಯಾತ್ರಿಕನಾದ ಹುಯನ್ ತ್ಸಾಂಗ್ ಕ್ರಿಸ್ತ ಶಕ ೬೨೯ ರಲ್ಲಿ ಭಾರತಕ್ಕೆ ಬಂದದ್ದೂ ಈತನ ಕಾಲದಲ್ಲೇ , ಹರ್ಷವರ್ಧನನು ಕವಿ ಮತ್ತು ನಾಟಕಕರ್ತೃ, ಅವನ ಆಸ್ಥಾನದಲ್ಲಿ ಅನೇಕ ಕಲಾವಿದರೂ ಕವಿಗಳೂ ಇದ್ದರು. ಅವನ ರಾಜಧಾನಿಯಾದ ಉಜ್ಜಯಿನಿ ಸಾಂಸ್ಕೃತಿಕ ಚಟುವಟಿಕೆಗಳಿಗೆ ಒಂದು ಪ್ರಸಿದ್ದ ಕೇಂದ್ರವಾಗಿತ್ತು. ಕ್ರಿ.ಶ. ೬೪೮ ರಲ್ಲಿ ಹರ್ಷವರ್ಧನ ಕಾಲವಾದನು. ಅದೇ ಕಾಲದಲ್ಲಿ ಇಸ್ಲಾಂ ಧರ್ಮವು ಅರೇಬಿಯ ಮರುಭೂಮಿಯಿಂದ ಹೊರಟು ಆಫ್ರಿಕ ಮತ್ತು ಏಷ್ಯಾಖಂಡ ಗಳಲ್ಲಿ ಬಹುಬೇಗ ಹಬ್ಬಲು ಆರಂಭಿಸಿತ್ತು.

೨. ದಕ್ಷಿಣ ಭಾರತ

ದಕ್ಷಿಣ ಭಾರತದಲ್ಲಿ, ಮೌರ್ಯ ಚಕ್ರಾಧಿಪತ್ಯವು ಕುಸಿದು ಬಿದ್ದ ಮೇಲೆ ಸುಮಾರು ಒಂದು ಸಾವಿರ ವರ್ಷಗಳಿಗೂ ಹೆಚ್ಚು ಕಾಲ ದೊಡ್ಡ ದೊಡ್ಡ ರಾಜ್ಯಗಳು ಪ್ರಾಬಲ್ಯಕ್ಕೆ ಬಂದವು. ಆಂಧ್ರರು ಶಕರನ್ನು ಸೋಲಿಸಿದ್ದರು ಮತ್ತು ಕುಶಾನರ ಸಮಕಾಲೀನರಾಗಿದ್ದರು. ಅನಂತರ ಪಶ್ಚಿಮದಲ್ಲಿ ಚಾಲುಕ್ಯರ ಚಕ್ರಾಧಿಪತ್ಯ, ಆ ಮೇಲೆ ರಾಷ್ಟ್ರ ಕೂಟರು, ಇನ್ನೂ ದಕ್ಷಿಣದಲ್ಲಿ ಭಾರತದಿಂದ ಅನೇಕ ಬಾರಿ ದಂಡಯಾತ್ರೆ ಮಾಡಿ ವಸಾಹತುಗಳನ್ನು ಸ್ಥಾಪಿಸಿದ ಪಲ್ಲವರು ಇದ್ದರು. ಆ ಮೇಲೆ ಚೋಳರ ಚಕ್ರಾಧಿ ಪತ್ಯವು ಇಡೀ ಪಠ್ಯಾಯದೀಪವನ್ನೇ ಆಕ್ರಮಿಸಿ ಸಿಂಹಳ ಮತ್ತು ದಕ್ಷಿಣ ಬ್ರಹ್ಮದೇಶವನ್ನು ಸಹ ಅಧೀನಪಡಿಸಿಕೊಂಡಿತ್ತು. ಚೋಳರಾಜರುಗಳಲ್ಲಿ ಪ್ರಖ್ಯಾತರಾದವರಲ್ಲಿ ಕೊನೆಯವನಾದ ರಾಜೇಂದ್ರ ಕ್ರಿ.ಶ. ೧೦೪೪ ರಲ್ಲಿತೀರಿಕೊಂಡ.

ದಕ್ಷಿಣ ಭಾರತವು ಮುಖ್ಯವಾಗಿ ಅದರ ನಯವಸ್ತುಗಳ ಸಮುದ್ರ ವ್ಯಾಪಾರಕ್ಕೆ ಪ್ರಸಿದ್ದಿ ಪಡೆದಿತ್ತು. ದಕ್ಷಿಣ ರಾಷ್ಟ್ರಗಳು ನೌಕಾಬಲವುಳ್ಳ ರಾಷ್ಟ್ರಗಳು. ಅವರ ಹಡಗುಗಳು ದೂರ ದೇಶಗಳಿಗೆ ವ್ಯಾಪಾರಸರಕನ್ನೊ ಯ್ಯುತ್ತಿದ್ದವು. ಗ್ರೀಕರು, ಅಲ್ಲಿ ವಲಸೆ ಬಂದು ನೆಲಸಿದ್ದರು ಮತ್ತು ರೋಮನ್ ನಾಣ್ಯಗಳು ಅಲ್ಲಿ ದೊರೆತಿವೆ. ಚಾಲುಕ್ಯ ರಾಜನೂ ಪರ್ಷಿಯದ ಸಸ್ಸನಿದ್ ರಾಜನೂ ಪರಸ್ಪರ ರಾಯಭಾರಿಗಳನ್ನು ವಿನಿಮಯಿಸಿದ್ದರು.

ಉತ್ತರ ಹಿಂದೂಸ್ಥಾನದಲ್ಲಿ ಪದೇ ಪದೇ ದಂಡಯಾತ್ರೆಗಳಾಗುತ್ತಿದ್ದರೂ ದಕ್ಷಿಣ ಭಾರತದ ಮೇಲೆ ಯಾವ ಪರಿಣಾಮವೂ ಆಗಲಿಲ್ಲ. ಪರೋಕ್ಷಪರಿಣಾಮವೆಂದರೆ ಅನೇಕರು ಉತ್ತರ ಭಾರತ ದಿಂದ ದಕ್ಷಿಣಕ್ಕೆ ಬಂದು ನೆಲಸಿದರು. ಅನೇಕ ಶಿಲ್ಪಿಗಳು, ಕುಶಲಕರ್ಮಿಗಳು, ಉದ್ಯೋಗಿಗಳು ಬಂದರು. ಈ ರೀತಿ ದಕ್ಷಿಣ ಭಾರತವು ಪ್ರಾಚೀನ ಕಲಾಸಂಪ್ರದಾಯಕ್ಕೆ, ಸಂಪತ್ತಿಗೆ ನೆಲೆವನೆ