ವಿಷಯಕ್ಕೆ ಹೋಗು

ಪುಟ:ಭಾರತ ದರ್ಶನ.djvu/೧೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ
ಯುಗಾಂತರಗಳು
೧೧೯

ವಾದರು. ಅವರ ನಂತರದವರಿಗೆ ಉಳಿದ ಆಸ್ತಿ ಎಂದರೆ ಸ್ವಲ್ಪ ಹೊಸ ರಕ್ತ, ಸ್ವಲ್ಪ ಹೊಸ ಸಂಪ್ರ ದಾಯಗಳು; ಸುತ್ತಲಿನ ಸನ್ನಿವೇಶ ಅದನ್ನೇ ಅಧೀನ ಪಡಿಸಿಕೊಂಡು, ಸಜಾತೀಯವನ್ನಾಗಿ ಮಾಡಿ ಕೊಂಡಿತು-ಎಂದಿದಾನೆ.

ಈ ರೀತಿ ಅಧೀನ ಮಾಡಿಕೊಳ್ಳುವ ಶಕ್ತಿಗೆ ಕಾರಣವೇನು ? ಭೂಗೋಲ ಮತ್ತು ವಾಯು ಗುಣ ಪ್ರಭಾವದ ಒಂದು ವಿಶಿಷ್ಟ ವಾತಾವರಣ. ಆದರೆ ಎಲ್ಲಕ್ಕೂ ಮಿಗಿಲಾಗಿ ಭಾರತೀಯ ಇತಿ ಹಾಸದ ಮುಂಬೆಳಗಿನಲ್ಲಿ, ಭಾರತದ ಯೌವನದ ನವ್ಯತೆಯಲ್ಲಿ ಅದರ ಸುಷುಪ್ತ ಮನಸ್ಸಿನ ಮೇಲೆ ಮುದ್ರಿಸಿ ಯಾವುದೋ ಒಂದು ಶಕ್ತಿದಾಯಕ ಪ್ರೇರಣೆ ; ಯಾವುದೋ ಅಸಾಧಾರಣ ಪ್ರವೃತ್ತಿ ಅಥವ ಜೀವನದ ಮೌಲ್ಯದ ಭಾವನೆ ಇರಬೇಕು. ಆ ಪ್ರೇರಣೆಯು ಇನ್ನೂ ಶಕ್ತಿಯುತವಾಗಿ ಉಳಿ ದಿತ್ತು ಮತ್ತು ಎಷ್ಟೇ ಭಿನ್ನ ಸಂಸ್ಕೃತಿಯವರಿರಲಿ ಭಾರತಕ್ಕೆ ಬಂದವರನ್ನೆಲ್ಲ ತನ್ನವರನ್ನಾಗಿ ಮಾಡಿಕೊಳ್ಳುವ ಶಕ್ತಿಯು ಅದಕ್ಕೆ ಇತ್ತು. ಈ ದೇಶದಲ್ಲಿ ಹುಟ್ಟಿ ಬೆಳಗಿದ ಸಂಸ್ಕೃತಿಗೆ ಈ ಪ್ರೇರಣೆಯೇ ಜೀವಜ್ಯೋತಿಯಾಗಿ ಇರಬಹುದೆ? ಮತ್ತು ಇತಿಹಾಸ ಪರಂಪರೆಯಲ್ಲಿ ಜನತೆಯ ಮೇಲೆ ತನ್ನ ಪ್ರಭಾವ ಬೀರುತ್ತ ಬಂದಿರಬಹುದೆ ?

ಭಾರತೀಯ ಸಂಸ್ಕೃತಿಯ ಬೆಳವಣಿಗೆಯ ತಳಹದಿಯಾಗಿ ಒಂದು ಪ್ರೇರಣ ಶಕ್ತಿ ಅಥವ ಜೀವನಾದರ್ಶದ ವಿಷಯ ಪ್ರಸ್ತಾಪಿಸುವುದು ಅವಿವೇಕವಾಗಿ ಮತ್ತು ಧೋರಣೆಯಾಗಿ ತೋರ ಬಹುದು. ಒಬ್ಬ ವ್ಯಕ್ತಿಯೇ ತನ್ನ ಜೀವನದಲ್ಲಿ ನೂರಾರು ಕಡೆಗಳಿಂದ ಪೋಷಣೆಯನ್ನು ಪಡೆ ಯುತ್ತಾನೆಂದಮೇಲೆ ಒಂದು ಜನಾಂಗ ಅಥವಾ ಸಂಸ್ಕೃತಿಯ ಜೀವನ ಇನ್ನೂ ಹೆಚ್ಚು ಜಟಿಲ ವಾಗಿರಬೇಕು. ಭಾರತದ ಮೇಲ್ಪದರದಲ್ಲಿ ಸಹಸ್ರಾರು ಭಾವನೆಗಳು ಬಿರುಗಾಳಿಯ ಹೊಡೆತಕ್ಕೆ ಸಿಕ್ಕಿದ ಹಡಗಿನಿಂದ ತೇಲಿಬರುವ ವಸ್ತುಗಳಂತೆ ತೆರೆ ತೆರೆಯಾಗಿ ತೇಲಿ ಬರುತ್ತವೆ; ಒಂದಕ್ಕೆ ಒಂದು ವಿರೋಧ, ಯಾವುದಾದರೂ ಒಂದನ್ನು ಭದ್ರವಾಗಿ ಹಿಡಿದುಕೊಂಡು ಅದೇ ಸರಿಯೆಂದು ವಾದಿಸು ವುದೂ ಸುಲಭ ; ಇನೊ೦ದರ ಆಧಾರದ ಮೇಲೆ ಅದನ್ನು ಉರುಳಿಸುವುದೂ ಅಷ್ಟೇ ಸುಲಭ, ಎಲೆ ಗೆ ಯಲ್ಲೂ ಹೀಗೆಯೇ ; ಅದರಲ್ಲೂ ಸಜೀವ ವಸ್ತುಗಳಿಗೆ ನಿರ್ಜೀವ ವಸ್ತುಗಳೆಷ್ಟೊ ಅಂಟಿಕೊಂಡಿರುವ ಪುರಾತನವೂ ವಿಶಾಲವೂ ಆದ ಈ ನಮ್ಮ ದೇಶದಲ್ಲಂತೂ ಅತಿ ಸುಲಭ, ಅತಿ ಕಷ್ಟತಮವಾದ ಘಟನೆ ಗಳನ್ನು ಸುಲಭವಾಗಿ ವಿಂಗಡಮಾಡುವುದರಲ್ಲಿ ಒಂದು ಕೆಡುಕು ಇದೆ. ಭಾವನೆ ಮತ್ತು ಕ್ರಿಯಾ ಶಕ್ತಿಗಳ ಬೆಳವಣಿಗೆಯಲ್ಲಿ ವಿಶೇಷ ವ್ಯತ್ಯಾಸ ಕಾಣುವುದು ಬಹಳ ಅಪರೂಪ. ಭಾವನೆಗಳು ಒಂದರ ಹಿಂದೆ ಒಂದು ಓಡುತ್ತಿರುತ್ತವೆ, ಭಾವನೆಗಳಲ್ಲಿ ಸಹ ಬಾಹ್ಯ ಸ್ವರೂಪ ಇದ್ದಂತೆಯೇ ಉಳಿದರೂ ಒಳಗಿನ ತಿರುಳು ಪೂರ್ಣ ವ್ಯತ್ಯಾಸ ಹೊಂದಿರುತ್ತದೆ. ಅಥವ ಅನೇಕವೇಳೆ ಪ್ರಪಂಚದ ಪರಿಸ್ಥಿತಿ ವ್ಯತ್ಯಾಸದ ವೇಗದೊಡನೆ ಓಡಲಾರದೆ ಹಿಂದುಳಿದು ಪ್ರಪಂಚಕ್ಕೆ ಹೊರೆಯಾಗುತ್ತವೆ.

ಯುಗ ಯುಗಾಂತರಗಳಿಂದ ನಾವು ವ್ಯತ್ಯಾಸ ಹೊಂದುತ್ತಲೇ ಬಂದಿದ್ದೇವೆ. ಯಾವ ಕಾಲದಲ್ಲು ನಾವು ಹಿಂದೆ ಇದ್ದಂತೆಯೇ ಇರಲಿಲ್ಲ. ಇಂದಿಗು ಸಹ ಜನಾಂಗ ದೃಷ್ಟಿಯಿಂದ ಮೊದಲಿಗಿಂತ ಬಹಳ ವ್ಯತ್ಯಾಸ ಹೊಂದಿದ್ದೇವೆ, ನನ್ನ ಸುತ್ತ ಮುತ್ತಲೂ ಇತರ ಕಡೆಗಳಂತೆ ಇಂಡಿಯದಲ್ಲಿ ಸಹ ಈ ವ್ಯತ್ಯಸ್ತ ಜೀವನ ನಾಮನ ಪಾದಗಳಿಂದ ಮುಂದೋಡುತ್ತಿದೆ. ಆದರೂ ಚೀನ ಮತ್ತು ಭಾರತದ ಸಂಸ್ಕೃತಿಗಳಲ್ಲಿ ಯಾವುದೋ ಒಂದು ವಿಶಿಷ್ಟ ಶಾಶ್ವತಶಕ್ತಿ, ಒಂದು ಹೊಂದಾಣಿಕೆಯ ಶಕ್ತಿ ಇದೆ ಎಂಬುದನ್ನೂ ಮತ್ತು ಆ ಶಕ್ತಿಯು ಏನೇ ವ್ಯತ್ಯಾಸ, ವಿಪ್ಲವಗಳು ಬರಲಿ ಅನೇಕ ವರ್ಷಗಳ ಕಾಲ ಆ ಮೂಲ ವ್ಯಕ್ತಿತ್ವವನ್ನು ಕಾಪಾಡಲು ಸಮರ್ಥವಾಗಿದೆ ಎಂಬ ಭಾವನೆಯನ್ನು ನನ್ನ ಮನಸ್ಸಿನಿಂದ ಅಳಿಸಲು ಸಾಧ್ಯವಾಗಿಲ್ಲ, ಜೀವನಕ್ಕೂ ಪ್ರಕೃತಿಗೂ ಹೊಂದಿಕೊಂಡು ಸಮರಸತೆಯಿಂದ ಕೆಲಸ ಮಾಡಿರದೆ ಆ ರೀತಿ ಪರಿಣಾಮ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಒಳ್ಳೆಯದಕ್ಕೋ, ಕೆಟ್ಟು ದಕ್ಕೋ, ಅಥವ ಎರಡಕ್ಕೂ ಬಹುಮಟ್ಟಿಗೆ ತಮ್ಮ ಪ್ರಾಚೀನ ಸಂಪ್ರದಾಯಗಳಿಗೆ ಕಟ್ಟು ಹಾಕಿದ ಈ ಶಕ್ತಿ ಬಹು ಬಲಯುತವಾದದ್ದಿರಬೇಕು ; ಇಲ್ಲವಾದರೆ ಅಷ್ಟು ಕಾಲ ಬದುಕಿರಲು ಸಾಧ್ಯವಾಗುತ್ತಿರಲಿಲ್ಲ.