ಪುಟ:ಭಾರತ ದರ್ಶನ.djvu/೧೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಯುಗಾಂತರಗಳು

೧೩೧

ಎರಡು ಪ್ರಾಚೀನ ನಾಗರಿಕ ಜನಾಂಗಗಳ ಮಧ್ಯೆ ಎಷ್ಟೋ ವ್ಯವಹಾರ ನಡೆದಿರಬೇಕು. ಯಾವುದೋ ಒಂದು ಗ್ರೀಕ್ ಗ್ರಂಥದಲ್ಲಿ ಕೆಲವು ಭಾರತೀಯ ವಿದ್ವಾಂಸರು ಹೋಗಿ ಸಾಕ್ರೆಟೀಸ್ ನನ್ನು ಕಂಡು ಪ್ರಶ್ನೆ ಮಾಡಿದಂತೆ ಪ್ರತೀತಿ ಇದೆ ಎಂದು ಬರೆದಿದೆಯಂತೆ. ಪೈಥಾಗೊರಾಸನ ದಾರ್ಶನಿಕ ದೃಷ್ಟಿಗೆ ಭಾರತೀಯ ದರ್ಶನವು ಬಹುಮಟ್ಟಿಗೆ ಕಾರಣ. ಪ್ರೊ|| ಹೆಚ್, ಜಿ. ರಾಬಿನ್ಸನ್ “ ಪೈಥಾಗೊರಾಸ್ ಪಂಥದವರು ಬೋಧಿಸುತ್ತಿದ್ದ ಧಾರ್ಮಿಕ, ದಾರ್ಶನಿಕ, ಗಣಿತಶಾಸ್ತ್ರದ ತತ್ವಗಳೆಲ್ಲ ಕ್ರಿಸ್ತಪೂರ್ವ ಆರನೆಯ ಶತಮಾನದಲ್ಲೇ ಭಾರತೀಯರಿಗೆ ತಿಳಿದಿತ್ತು” ಎಂದು ಹೇಳಿದ್ದಾನೆ. ಯೂರೋಪಿನ ಕಾವ್ಯ ಪಂಡಿತನಾದ ಅರೈಕ್ ನು ಪ್ಲೇಟೋನ 'ದಿ ರಿಪಬ್ಲಿಕ್ ' ಎಂಬ ಗ್ರಂಥಕ್ಕೆ ಭಾರತೀಯ ದರ್ಶನದ ಆಧಾರದ ಮೇಲೆ ಟೀಕೆ ಮಾಡಿದ್ದಾನೆ. ಗ್ರಾ ಸ್ಟಿಸಿಸಂ ಎಂಬ ಅಧ್ಯಾತ್ಮ ರಹಸ್ಯ ಜ್ಞಾನ ವಾದವು ಗ್ರೀಕರ ಪ್ಲೇಟೊದರ್ಶನವನ್ನೂ ಭಾರತೀಯದರ್ಶನವನ್ನೂ ಬೆಸೆಯಲು ಮಾಡಿದ ನಿರ್ದಿಷ್ಟ ಪ್ರಯತ್ನವಾಗಿದೆ. ಪ್ರಾಯಶಃ ಕ್ರಿಸ್ತಶಕೆಯ ಆದಿಭಾಗದಲ್ಲಿ ಟೈ ಯಾನ ನಗರದ ದಾರ್ಶನಿಕನಾದ ಅಪಲೋನಿಯಸ್ ವಾಯವ್ಯ ಭಾರತದ ತಕ್ಷಶಿಲೆ ವಿಶ್ವವಿದ್ಯಾನಿಲಯವನ್ನು ಭೇಟಿಮಾಡಿರಬೇಕು.
ಮಧ್ಯ ಏಷ್ಯದ ಜೊರ್ಸಾಸ್‌ನಲ್ಲಿ ಹುಟ್ಟಿದ ಮಹಾಯಾತ್ರಿಕನೂ ಜ್ಞಾನಿಯೂ ಆದ ಪರ್ಷಿಯದ ಆಲ್ಬರೂನಿ ಕ್ರಿಸ್ತಶಕ ಹನ್ನೊಂದನೆಯ ಶತಮಾನದಲ್ಲಿ ಭಾರತಕ್ಕೆ ಬಂದನು. ಇಸ್ಲಾಂ ಧರ್ಮದ ಆರಂಭದೆಸೆಯಲ್ಲಿ ಬಾಗದಾದಿನಲ್ಲಿ ಆಗಲೇ ಜನಮನ್ನಣೆ ಪಡೆದಿದ್ದ ಗ್ರೀಕ್ ತತ್ವಶಾಸ್ತ್ರವನ್ನು ಅಭ್ಯಾಸಮಾಡಿದ್ದನು. ಭಾರತಕ್ಕೆ ಬಂದೊಡನೆ ಭಾರತೀಯ ದರ್ಶನವನ್ನು ಅಭ್ಯಾಸಮಾಡಲು ಸಂಸ್ಕೃತವನ್ನು ಕಲಿತುಕೊಂಡನು. ಎರಡು ದರ್ಶನಗಳಿಗೂ ಇರುವ ಸಾಮ್ಯವನ್ನು ಕಂಡು ವಿಸ್ಮಯ ಗೊಂಡನು. ಭಾರತದ ಮೇಲೆ ಅವನು ಬರೆದ ಗ್ರಂಥದಲ್ಲಿ ಎರಡನ್ನೂ ಹೋಲಿಸಿ ಬರೆದಿದ್ದಾನೆ. ಗ್ರೀಕರ ಭೂಗೋಳಶಾಸ್ತ್ರ ರೋಮನರ ಖಗೋಳಶಾಸ್ತ್ರಗಳ ಮೇಲೆ ಇದ್ದ ಸಂಸ್ಕೃತ ಗ್ರಂಥಗಳನ್ನೂ ಉಲ್ಲೇಖಿಸಿದ್ದಾನೆ.
ಒಂದರಮೇಲೊಂದು ಪ್ರಭಾವ ಬೀರಿದರೂ ತಮ್ಮ ಅಸ್ತಿತ್ವವನ್ನು ಳಿಸಿಕೊಂಡು ತಮ್ಮ ತಮ್ಮ ವೈಶಿಷ್ಟ ಮಾರ್ಗದಲ್ಲಿ ಮುಂದುವರಿಯಲು ಗ್ರೀಕ್ ಮತ್ತು ಭಾರತೀಯ ನಾಗರಿಕತೆಗಳೆರಡಕ್ಕೂ ಅಪಾರಶಕ್ತಿಯಿತ್ತು. ಇತ್ತೀಚೆಗೆ ಒಳ್ಳೆಯದೆಲ್ಲಕ್ಕೂ ಗ್ರೀಸ್ ಅಥವ ರೋಮ್ ಮೂಲ ಎಂದು ಹೇಳುವ ಸ್ವಭಾವ ಕಡಿಮೆಯಾಗುತ್ತಿದೆ. ಏಷ್ಯದ ಅದರಲ್ಲೂ ಮುಖ್ಯವಾಗಿ ಇಂಡಿಯದ ಪಾತ್ರಕ್ಕೆ ಪ್ರಾಶಸ್ತ್ರ ದೊರೆಯುತ್ತಿದೆ. ಪ್ರೊಫೆಸರ್ ಟಾರ್ “ವಿಶಾಲ ದೃಷ್ಟಿಯಿಂದ ನೋಡಿದರೆ ಗ್ರೀಸಿನಿಂದ ಏಷ್ಯ ತೆಗೆದುಕೊಂಡದ್ದು ಬಾಹ್ಯ ವಿಷಯಗಳನ್ನು ಮಾತ್ರ ; ತಿರುಳು ಅದಕ್ಕೆ ಬೇಕಿರಲಿಲ್ಲ- ನಾಗರಿಕ ಸಂಸ್ಥೆಗಳನ್ನು ಮಾತ್ರ ತೆಗೆದುಕೊಂಡಿತು-ಅಂತಃಶಕ್ತಿಯನ್ನೆಂದೂ ತೆಗೆದುಕೊಳ್ಳಲಿಲ್ಲ. ಏಕೆಂದರೆ ಅಂತಃ ಶಕ್ತಿಯಲ್ಲಿ ಗ್ರೀಕರಿಗಿಂತ ತಾನು ಮುಂದು ಎಂಬ ಭಾವನೆ ಏಷ್ಯಕ್ಕಿತ್ತು. ಆ ರೀತಿ ಏಷ್ಯ ಮುಂದೆ ಇದ್ದುದೂ ನಿಜ” ಎಂದಿದ್ದಾನೆ. ಪುನಃ “ಭಾರತೀಯ ನಾಗರಿಕತೆಯು ಗ್ರೀಕ್ ನಾಗರಿಕತೆ ಯೊಂದಿಗೆ ಸರಿಸಮಾನತೆಯಿಂದ ಪೈಪೋಟಿ ನಡೆಸುವಷ್ಟು ಶಕ್ತಿಯುತವಿತ್ತು. ಆದರೆ ಧಾರ್ಮಿಕ ವಿಷಯ ಒಂದು ಬಿಟ್ಟರೆ ಇತರ ವಿಷಯಗಳಲ್ಲಿ ಬ್ಯಾಬಿಲಾನಿರ್ಯದಂತೆ ಪ್ರಭಾವ ಬೀರಲು ಶಕ್ತವಾಗ ಲಿಲ್ಲ. ಆದರೂ ಕೆಲವು ವಿಷಯಗಳಲ್ಲಿ ಭಾರತೀಯ ಪ್ರಭಾವವೇ ಹೆಚ್ಚು ಇತ್ತು ಎಂದು ಊಹಿಸಲು ತಕ್ಕಷ್ಟು ಕಾರಣಗಳಿವೆ.” ಬುದ್ಧನ ವಿಗ್ರಹ ಒಂದನ್ನು ಬಿಟ್ಟರೆ ಗ್ರೀಕರೂ ಭಾರತೀಯ ಇತಿಹಾಸವೂ ಈಗ ಹೇಗೆ ಇದೆಯೋ ಹಾಗೇ ಇರುತ್ತಿತ್ತು” ಎಂದಿದ್ದಾನೆ.
ಭಾರತಕ್ಕೆ ವಿಗ್ರಹಾರಾಧನೆ ಗ್ರೀಸ್ ದೇಶದಿಂದ ಬಂದಿರುವುದು ಒಂದು ಕೌತುಕದ ವಿಷಯ. ವೇದ ಧರ್ಮದಲ್ಲಿ ಯಾವ ಬಗೆಯ ವಿಗ್ರಹಗಳಿಗೂ, ಪ್ರತಿಮಾ ಪೂಜೆಗೂ ಅವಕಾಶವಿಲ್ಲ. ದೇವರುಗಳಿಗೆ ಯಾವ ದೇವಸ್ಥಾನಗಳೂ ಇರಲಿಲ್ಲ. ಪ್ರಾಯಶಃ ಭಾರತದ ಪ್ರಾಚೀನ ಧರ್ಮಗಳಲ್ಲಿ ವಿಗ್ರಹಾರಾಧ ನೆಯ ಗುರುತು ಅಲ್ಲಲ್ಲಿ ಕಾಣಬಹುದು. ಆದರೂ ಅದು ಹೆಚ್ಚು ಬಳಕೆಯಲ್ಲಿರಲಿಲ್ಲ. ಬೌದ್ಧ ಧರ್ಮದ ಆರಂಭದಲ್ಲಿ ವಿಗ್ರಹಾರಾಧನೆಗೆ ಬಹಳ ವಿರೋಧವಿತ್ತು. ಬುದ್ಧನ ವಿಗ್ರಹಗಳನ್ನೂ