ಪುಟ:ಭಾರತ ದರ್ಶನ.djvu/೧೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೩೨

ಭಾರತ ದರ್ಶನ

ಪ್ರತಿಮೆಗಳನ್ನೂ ಮಾಡಲಾಗದೆಂದು ನಿಷೇಧವೇ ಇತ್ತು. ಆದರೆ ಆಫ್ಘಾನಿಸ್ಥಾನ ಮತ್ತು ಗಡಿ ದೇಶ ಗಳಲ್ಲಿ ಗ್ರೀಕರ ಕಲೆಯ ಪ್ರಭಾವ ಹೆಚ್ಚಾಗಿತ್ತು. ಕ್ರಮೇಣ ಭಾರತಕ್ಕೂ ಹರಡಿತು. ಆದರೂ ಬುದ್ಧನ ವಿಗ್ರಹಗಳನ್ನು ಆರಂಭದಲ್ಲಿ ಮಾಡಲಿಲ್ಲ. ಬುದ್ದನ ಹಿಂದಿನ ಅವತಾರಗಳೆಂಬ ಬೋಧಿ ಸತ್ವದ “ ಆಪೋಲೊ' ಮಾದರಿಯ ವಿಗ್ರಹಗಳು ಮಾತ್ರ ಹುಟ್ಟಿದವು. ಅನಂತರ ಬುದ್ಧನ ಪ್ರತಿಮೆ ಗಳು, ವಿಗ್ರಹಗಳೇ ಬರಲಾರಂಭಿಸಿದವು. ವೇದ ಧರ್ಮದಲ್ಲಿ ವಿಗ್ರಹಾರಾಧನೆ ಬಾರದಿದ್ದರೂ ಹಿಂದೂ ಧರ್ಮದ ಕೆಲವು ರೂಪಗಳಲ್ಲಿ ವಿಗ್ರಹಾರಾಧನೆಗೆ ಪ್ರೋತ್ಸಾಹ ದೊರೆಯಿತು. ಹಿಂದೂಸ್ಥಾನಿ ಮತ್ತು ಪಾರ್ಸಿ ಭಾಷೆಯಲ್ಲಿ ಪ್ರತಿಮೆ ಅಥವ ವಿಗ್ರಹಕ್ಕೆ ಈಗಲೂ ಬುತ್ (ಪುತ್) ಎಂದು ಇದೆ. 'ಬುತ್? ಶಬ್ದ 'ಬುದ್ಧ' ಶಬ್ದದಿಂದ ಹುಟ್ಟಿದುದು.
ಮಾನವನ ಮನಸ್ಸು ಜೀವನದಲ್ಲಿ, ಪ್ರಕೃತಿಯಲ್ಲಿ, ವಿಶ್ವದಲ್ಲಿ ಒಂದು ವಿಧವಾದ ಅದ್ವಿತವನ್ನು ಕಾಣಲು ಹಾತೊರೆಯುತ್ತಿರುವಂತೆ ತೋರುತ್ತದೆ. ಆ ಆಶೆ ಸಾಧು ವಿರಲಿ, ಅಸಾಧುವಿರಲಿ ಮನಸ್ಸಿನ ಮುಖ್ಯ ಆಶೆ ಫಲಿಸಬೇಕು. ಪ್ರಾಚೀನಕಾಲದ ದಾರ್ಶನಿಕರು ಈ ಅನ್ವೇಷಣೆಯಲ್ಲಿ ನಿರತರಾಗಿ ದ್ದರು. ಇಂದಿನ ವಿಜ್ಞಾನಿಗಳೂ ಅದೇ ಆಶೆಯಿಂದ ಮುಂದುವರಿಯುತ್ತಿದಾರೆ, ನಮ್ಮ ಎಲ್ಲ ಕಾರ್ಯರಚನೆ, ಯೋಜನೆ, ಶಿಕ್ಷಣದ ಧೈಯ, ಸಾಮಾಜಿಕ, ರಾಜಕೀಯ ರಚನೆಗಳಿಗೆ ಹಿನ್ನೆಲೆ ಈ ಐಕ್ಯತೆಯ ಮತ್ತು ಸಮರಸತೆಯ ಅನ್ವೇಷಣೆ. ಈಗ ಕೆಲವು ಮಹಾ ವಿದ್ವಾಂಸರು, ಮತ್ತು ದಾರ್ಶ ನಿಕರು ಈ ಮೂಲ ಭಾವನೆ ಎಲ್ಲ ಸುಳ್ಳು. ಈ ಆಕಸ್ಮಿಕ ವಿಶ್ವದಲ್ಲಿ ಯಾವ ನಿಯಮವೂ ಇಲ್ಲ, ಯಾವ ಏಕತ್ವವೂ ಇಲ್ಲ ಎಂದು ಹೇಳುತ್ತಿದಾರೆ. ಅದರಲ್ಲಿ ಸತ್ಯಾಂಶವಿದ್ದರೂ ಇರಬಹುದು. ಆದರೂ ಈ ತಪ್ಪು ಭಾವನೆಯಿಂದ ಸಹ-ಒಂದು ವೇಳೆ ತಪ್ಪೇ ಇದ್ದರೆ- ಭಾರತ ಗ್ರೀಕ್ ಮತ್ತು ಇತರ ಕಡೆ ಗಳಲ್ಲಿ ಈ ಏಕತ್ವದ ಅನ್ವೇಷಣೆಯಿಂದ ಉತ್ತಮ ಫಲ ದೊರೆಯಿತು ಮತ್ತು ಜೀವನದಲ್ಲಿ ಒ೦ದ ಸಮರಸತೆ, ಸಮತೋಲನ ಮತ್ತು ಪರಿಪೂರ್ಣತೆ ಬಂದಿತೆಂಬುದು ನಿರ್ವಿವಾದ.

೮. ಪ್ರಾಚೀನ ಭಾರತದ ನಾಟಕ ಕಲೆ


ಯೂರೋಪಿಯನ್‌ರು ಪುರಾತನ ಭಾರತೀಯ ನಾಟಕಗಳನ್ನು ಕಂಡೊಡನೆ ಅವುಗಳೆಲ್ಲ ಗ್ರೀಕ್ ನಾಟಕದಿಂದ ಉಗಮವಾಗಿರಬೇಕು ಅಥವ ಗ್ರೀಕ್ ನಾಟಕದ ಪ್ರಭಾವ ಅವುಗಳ ಮೇಲೆ ಬಹು ಮಟ್ಟಿಗೆ ಬಿದ್ದಿರಬೇಕು ಎಂದು ಸಿದ್ಧಾಂತಮಾಡತೊಡಗಿದರು. ಅಲ್ಲಿನವರೆಗೆ ಪ್ರಾಚೀನ ಭಾರತೀಯ ನಾಟಕಗಳು ಯಾವುವೂ ದೊರೆತಿರಲಿಲ್ಲವಾದ್ದರಿಂದಲೂ ಮತ್ತು ಅಲೆಗ್ಲಾಂಡರನ ದಂಡಯಾತ್ರೆಯ ನಂತರ ಭಾರತದ ಗಡಿಯಲ್ಲಿ ಗ್ರೀಕ್ ರಾಜ್ಯಗಳು ಸ್ಥಾಪಿತವಾದ್ದರಿ೦ದಲೂ ಈ ವಾದಕ್ಕೆ ಸ್ವಲ್ಪ ಅವಕಾಶ ವಿತ್ತು. ಅನೇಕ ಶತಮಾನಗಳ ಕಾಲ ಈ ರಾಜ್ಯಗಳು ಬಾಳಿದವು. ಆಗ ಗ್ರೀಕ್ ನಾಟಕಗಳ ಪ್ರದರ್ಶನಗಳೂ ನಡೆದಿರಬೇಕು. ಯೂರೋಪಿಯರ್ನ ವಿದ್ವಾಂಸರು ಹತ್ತೊಂಭತ್ತನೆಯ ಶತಮಾನ ದಲ್ಲೆಲ್ಲ ಈ ಪ್ರಶ್ನೆ ಯನ್ನು ಚರ್ಚೆ ಮಾಡಿ ಸೂಕವಿಚಕ್ಷಣೆಮಾಡಿದರು. ಭಾರತೀಯ ರಂಗಮಂಟಪವು ತನ್ನ ಹುಟ್ಟಿನಲ್ಲಿ, ಆ ಹುಟ್ಟಿನ ಹಿನ್ನೆಲೆಯ ಭಾವನೆಯಲ್ಲಿ ಮತ್ತು ಬೆಳವಣಿಗೆಯಲ್ಲಿ ಪೂರ್ಣ ಸ್ವತಂತ್ರ ವಾಗಿತ್ತೆಂದು ಈಗ ಸಾಮಾನ್ಯವಾಗಿ ಎಲ್ಲರೂ ಒಪ್ಪುತ್ತಾರೆ. ಅದರ ಆದಿಯನ್ನು ಋಗೈದದ ಕೆಲವು ನಾಟಕೀಯ ಪ್ರಾರ್ಥನೆಗಳಲ್ಲಿ, ಸಂಭಾಷಣೆಗಳಲ್ಲಿ ಕಾಣಬಹುದು. ರಾಮಾಯಣ ಮತ್ತು ಮಹಾ ಭಾರತಗಳಲ್ಲಿ ನಾಟಕದ ಉಲ್ಲೇಖವಿದೆ. ಕೃಷ್ಣನ ಕಥೆಯ ಗೀತೆಗಳು, ಸಂಗೀತ ಮತ್ತು ನಾಟ್ಯ ಗಳಿಂದ ಆರಂಭವಾಯಿತು. ಕ್ರಿಸ್ತಪೂರ್ವ ಆರು ಮತ್ತು ಏಳನೆಯ ಶತಮಾನಗಳಲ್ಲಿದ್ದ ಮಹಾ ವೈಯಾಕರಿಣಿಯಾದ ಪಾಣಿನಿಯು ನಾಟಕದ ಕೆಲವು ರೂಪಭೇದಗಳನ್ನು ತಿಳಿಸುತ್ತಾನೆ.
ರಂಗಮಂಟಪದ ಕಲೆಯ ಮೇಲೆ ಬರೆದ ಒಂದು ದೊಡ್ಡ ಗ್ರಂಥವು ನಾಟ್ಯಶಾಸ್ತ್ರ-ಕ್ರಿಸ್ತಶಕ ಮೂರನೆಯ ಶತಮಾನದಲ್ಲಿ ಹುಟ್ಟಿದರೂ ಅದು ಅದೇ ವಿಷಯದ ಮೇಲೆ ಬರೆದ ಹಿಂದಿನ ಅನೇಕ ಗ್ರಂಥಗಳ ಆಧಾರದ ಮೇಲೆ ಬರೆದದ್ದು. ನಾಟ್ಯಕಲೆಯು ಪೂರ್ಣ ಪ್ರಬುದ್ಧಮಾನಕ್ಕೆ ಬಂದು, ಸಾರ್ವ