ಪುಟ:ಭಾರತ ದರ್ಶನ.djvu/೧೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಯುಗಾಂತರಗಳು

೧೪೧

ನಡೆದಿದ್ದರೂ ಕಾವ್ಯ ಮತ್ತು ಭಾವನಾದೃಷ್ಟಿಯಿಂದ ನಡೆದಿರುವ ಸಂಸ್ಕೃತ ಭಾಷಾ ಪ್ರವೇಶವನ್ನು ನೋಡಿದರೆ ಏನೂ ಸಾಲದು. ಇಂಗ್ಲಿಷ್ ಅಥವ ಬೇರೆ ಯಾವ ಅನುವಾದವನ್ನು ತೆಗೆದುಕೊಂಡರೂ ಮೂಲಗ್ರಂಥಕ್ಕೆ ಅನ್ಯಾಯ ಮಾಡದ ಅಥವಾ ಯೋಗ್ಯ ಎನ್ನುವ ಯಾವ ಅನುವಾದವೂ ಇನ್ನು ಆಗಿಲ್ಲ. ಅನೇಕ ಕಾರಣಗಳಿಂದ ಭಾರತೀಯರು, ವಿದೇಶೀಯರು ಇಬ್ಬರೂ ಈ ಕಾವ್ಯದಲ್ಲಿ ಜಯಶಾಲಿಗಳಾಗಿಲ್ಲ. ಅಪಾರ ಸೌಂದಯ್ಯ, ಮಹದ್ಭಾವನೆ, ಆಳವಾದ ಜ್ಞಾನ ಮತ್ತು ಕೇವಲ ಭಾರತದ ಹಿರಿಮೆ ಮಾತ್ರವಲ್ಲದೆ ಮಾನವ ಕುಲದ ಹಿರಿಮೆಯನ್ನೇ ಪ್ರಪಂಚವು ಅರಿಯದಂತಾಗಿದೆ. ನಿಜವಾಗಿ ಇದೊಂದು ಮಹಾ ದುರದೃಷ್ಟ, ಕಠಿಣವಾದ ಅನುಶಾಸನ, ಪವಿತ್ರ ಭಾವನೆ ಮತ್ತು ಅಂತಃ ಶಕ್ತಿಯಿಂದ ಇಂಗ್ಲಿಷ್ ಅನುವಾದಕರು ಬೈಬಲನ್ನು ಅನುವಾದಮಾಡಿ ಒಂದು ಮಹಾಗ್ರಂಥವನ್ನು ಇಂಗ್ಲಿಷ್ ಜನರಿಗೆ ಒದಗಿಸಿ ಇಂಗ್ಲಿಷ್ ಭಾಷೆಗೆ ಒಂದು ಶಕ್ತಿಯನ್ನೂ, ಗೌರವವನ್ನೂ ಸಂಪಾದಿಸಿಕೊಟ್ಟರು. ಯೂರೋಪಿನ ವಿದ್ವಾಂಸರು ಮತ್ತು ಕವಿಗಳು ಅನೇಕ ತಲೆಮಾರುಗಳಿಂದ ಅತಿ ಪ್ರೇಮದಿಂದ ಗ್ರೀಕ್ ಮತ್ತು ಲ್ಯಾಟಿನ್ ಮಹಾ ಕಾವ್ಯಗಳನ್ನು ಅಭ್ಯಾಸಮಾಡಿ ಅನೇಕ ಯೂರೋಪಿಯನ್ ಭಾಷೆಗಳಲ್ಲಿ ಸುಂದರ ಅನುವಾದಗಳನ್ನು ಒದಗಿಸಿದ್ದಾರೆ. ಸಂಸ್ಕೃತ ಮಹಾ ಕಾವ್ಯಗಳ ಸಂಬಂಧದಲ್ಲಿ ಇನ್ನೂ ಈ ಕೆಲಸ ನಡೆಯದಿರುವುದು ದುರದೃಷ್ಟ; ಯಾವಾಗ ನಡೆಯುತ್ತದೆ ಅಥವ ನಡೆಯುವ ಸಂಭವವಿದೆಯೆ ಎಂದು ನಾನು ಹೇಳಲಾರೆ. ನಮ್ಮ ವಿದ್ವಾಂಸರುಗಳ ಸಂಖ್ಯೆ ಹೆಚ್ಚುತ್ತಿದೆ ; ವಿದ್ವತ್ತು ಬೆಳೆಯುತ್ತಿದೆ ; ಕವಿಗಳೂ ನಮ್ಮಲ್ಲಿ ದ್ದಾರೆ, ಆದರೆ ಇಬ್ಬರ ಮಧ್ಯೆ ಇರುವ ಅಂತರವು ಅಪಾರವಿದೆ ಮತ್ತು ದಿನೇ ದಿನೇ ಹೆಚ್ಚುತ್ತಿದೆ. ನಮ್ಮ ದೃಷ್ಟಿ ಶಕ್ತಿಯು ಬೇರೆ ಯಾವ ಕಡೆಗೋ ಹರಿಯುತ್ತಿದೆ ; ಇಂದಿನ ಜೀವನದ ಜಟಿಲಸಮಸ್ಯೆಗಳು ಮಹಾಕಾವ್ಯಗಳ ಅಭ್ಯಾಸಕ್ಕೆ ಅವಕಾಶವನ್ನು ಕೊಡುವುದಿಲ್ಲ. ಭಾರತದಲ್ಲಂತೂ ನಾವು ಬೇರೆ ದಾರಿಯನ್ನೇ ಹಿಡಿದು ಗುರಿಯನ್ನು ಸಾಧಿಸಬೇಕಾಗಿದೆ. ಪುರಾತನ ಕಾಲದಲ್ಲಿ ಮಹಾ ಕಾವ್ಯಗಳ ಅಭ್ಯಾಸಕ್ಕೆ ನಾವು ಬಹಳ ಪ್ರಾಶಸ್ಯ ಕೊಟ್ಟೆವು. ನಮ್ಮ ಕಾವ್ಯಸೃಷ್ಟಿಯ ಅಂತಶಕ್ತಿಯನ್ನು ಕಳೆದುಕೊಂಡದ್ದರಿಂದ ಅಷ್ಟು ವಿಶ್ವಾಸದಿಂದ ಹೆಮ್ಮೆ ಪಡುತ್ತಿದ್ದ ಮಹಾ ಕಾವ್ಯ ಗಳಿಂದಲೂ ನಾವು ಸ್ಫೂರ್ತಿ ಪಡೆಯದಾದೆವು. ಭಾರತೀಯ ಮಹಾ ಕಾವ್ಯಗಳ ಅನುವಾದಗಳು ಬರುತ್ತವೆಯೆಂದೂ, ವಿದ್ವಾಂಸರು ಸಂಸ್ಕೃತ ಶಬ್ದಗಳ ಮತ್ತು ಹೆಸರುಗಳ ಶುದ್ದ ಉಚ್ಚಾರಣೆಗೆ ದಾರಿ ತೋರುವರೆಂದೂ ಸ್ವರಭೇದಗಳ ಪರಿಚಯ ಮಾಡಿ ಕೊಡುವರೆಂದೂ, ವಿವರವಾದ ಅರ್ಥಕೋಶ, ವಿವರಣೆ ಮತ್ತು ಉಪಮಾನಗಳನ್ನು ಕೊಡುವರೆಂದೂ, ನಂಬಿದ್ದೇನೆ. ಸಾಹಿತ್ಯ ದೃಷ್ಟಿಯಿಂದ ಎಲ್ಲ ಆಡಂಬರವೂ ಇರುತ್ತದೆ ; ಆದರೆ ಜೀವಾಳ ಮಾತ್ರ ಇರುವುದಿಲ್ಲ. ಸೌಂದರ್ಯ, ಗಾನ ಮಾಧುರ್ಯ ಕಲ್ಪನಾ ಸಾಹಸಗಳಿಂದ ತುಂಬಿ ತುಳುಕುತ್ತ ಸುಂದರ ಸಜೀವವಸ್ತುವಾದ ಯೌವನ ಸೌಂದರ್ಯ ಯಾವುದೂ ಇರುವುದಿಲ್ಲ. ನಿರ್ಜಿವ, ನಿಸ್ಸತ್ವ, ಜೀರ್ಣವನ್ನು ಮಾತ್ರ ಕಾಣುತ್ತದೆ. ಅದರಲ್ಲಿ ದೊರೆಯು ವುದು ಪಾಂಡಿತ್ಯದ ಕೊಳಕುವಾಸನೆ ಮತ್ತು ಶ್ರಮದ ಜಿಗುಟು,
ಜನಸಾಮಾನ್ಯದ ಬಳಕೆಯ ಭಾಷೆಯಾಗಿ ನಿಂತೊಡನೆ ಸಂಸ್ಕೃತವು ಮೃತಭಾಷೆಯಾಯಿ ತೆಂದು ಹೇಳಲು ಸಾಧ್ಯವಿಲ್ಲ. ಕಾಳಿದಾಸನ ಕಾಲದಲ್ಲಿ ಸಹ ಭಾರತಾದ್ಯಂತ ವಿದ್ವಜ್ಜನರ ಭಾಷೆ ಯಾಗಿದ್ದರೂ ಅದು ಜನಸಾಮಾನ್ಯದ ಬಳಕೆಯ ಭಾಷೆಯಾಗಿರಲಿಲ್ಲ. ಈ ರೀತಿ ಅನೇಕ ಶತ ಮಾನಗಳ ಕಾಲ ಆಗ್ನೆಯ ಮತ್ತು ಮಧ್ಯ ಏಷ್ಯದ ಭಾರತದ ವಲಸೆ ರಾಜ್ಯಗಳಿಗೂ ಹಬ್ಬಿತ್ತು. ಕ್ರಿಸ್ತಶಕ ಏಳನೆಯ ಶತಮಾನದಲ್ಲಿ ಕಾಂಬೋಡಿಯದಲ್ಲಿ ಸಂಸ್ಕೃತ ಕಾವ್ಯವಾಚನ ಮತ್ತು ನಾಟಕಗಳ ನಡೆದುದಕ್ಕೆ ಸಾಕ್ಷ ದೊರೆತಿದೆ. ತಾಯತ್ ಲ್ಯಾಂಡ್ (ಸೈಯಾಮ್) ನಲ್ಲಿ ಈಗಲೂ ಕೆಲವು ಸಮಾ ರಂಭಗಳನ್ನು ಸಂಸ್ಕೃತ ಪ್ರಾರ್ಥನೆಯಿಂದ ಆರಂಭಿಸುತ್ತಾರೆ. ಭಾರತದಲ್ಲಿ ಸಂಸ್ಕೃತದ ಅಂತಃಶಕ್ತಿಯು ಅದ್ಭುತವಾಗಿದೆ. ಹದಿಮೂರನೆಯ ಶತಮಾನದ ಆರಂಭದಲ್ಲಿ ಆರ್ಷ್ಟ ರಾಜರುಗಳು ದೆಹಲಿಯ ಸಿಂಹಾಸನವನ್ನು ಏರಿದಾಗ ಭಾರತದ ಬಹು ಭಾಗಕ್ಕೆ ಪಾರತಿ ಭಾಷೆಯು ರಾಜಭಾಷೆಯಾಯಿತು. ಕ್ರಮೇಣ ಅನೇಕ ವಿದ್ಯಾವಂತರು ಸಂಸ್ಕೃತ ಬಿಟ್ಟು ಪಾರ್ಸಿ ಕಲಿಯಲಾರಂಭಿಸಿದರು. ಜನರ ಬಳಕೆಯ