ಪುಟ:ಭಾರತ ದರ್ಶನ.djvu/೧೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಯುಗಾಂತರಗಳು

೧೬೩

ಅದರ ಮೂಲವು ಶುದ್ಧ ಏಕತ್ವವಾದ. ತಾತ್ವಿಕ ದೃಷ್ಟಿಯಿಂದ ಅಂತ್ಯದಲ್ಲಿ ನಿತ್ಯವಸ್ತುವೆಂದರೆ ಆತ್ಮನ್ ಅಥವ ಪರಮಾತ್ಮ, ಅದೊಂದೇ ಜೀವನವಸ್ತು, ಉಳಿದುದೆಲ್ಲ ಹೇತು, ಪರಮಾತ್ಮನು ಹೇಗೆ ಸರ್ವಾಂತರ್ಯಾಮಿ, ಅದೈತ, ಅನೇಕ, ಪರಿಪೂರ್ಣ, ಅಭಿನ್ನ, ಅಬಾಧ್ಯ ಎನ್ನುವುದೆಲ್ಲವನ್ನೂ ತಾರ್ಕಿಕ ವಿಚಾರಮಾರ್ಗದಿಂದ ದೃಷ್ಟಾಂತ ಮಾಡಲು ಸಾಧ್ಯವಿಲ್ಲ. ಏಕೆಂದರೆ ನಮ್ಮ ಮನಸ್ಸಿನ ಮಿತಿ ಈ ವ್ಯಕ್ತ ಪ್ರಪಂಚಕ್ಕೆ ಮಾತ್ರ. ಉಪನಿಷತ್ತು ಆತ್ಮನನ್ನು ಪೂರ್ಣಮದಃ ಪೂರ್ಣಮಿದಂ, ಪೂರ್ಣಾತೂರ್ಣಮುದಚ್ಯುತೆ। ಪೂರ್ಣಸ್ಯ ಪೂರ್ಣಮಾದಾಯ ಪೂರ್ಣಮೇವಾವಶಿಷ್ಯತೆ!! ಎಂದು ವಿವರಣೆ ಎಂದು ಕರೆಯಬಹುದಾದರೆ, ವಿವರಿಸಿದೆ.
ಶಂಕರರು ಕೆಲವು ಪ್ರಮೇಯಗಳ ಆಧಾರದ ಮೇಲೆ ಹೆಜ್ಜೆ ಹೆಜ್ಜೆಗೂ ತರ್ಕಬದ್ಧ ವಾದವನ್ನು ಹೂಡಿ ಒಂದು ಸಂಪೂರ್ಣ ಅದೈತ ಸಿದ್ಧಾಂತವನ್ನು ಕಟ್ಟಿ ಅತಿ ಜಟಿಲವೂ ಗೂಢವೂ ಆದ ಜ್ಞಾನ ದರ್ಶನವನ್ನು ನಿರ್ಮಾಣ ಮಾಡಿದ್ದಾರೆ. ಜೀವನು ವೈಯಕ್ತಿಕ ಪ್ರತ್ಯೇಕವಸ್ತುವಲ್ಲ, ಕೆಲವು ಮಿತಿ ಗಳನ್ನುಳ್ಳ ಪರಮಾತ್ಮನ ಒಂದು ರೂಪ. ಆತ್ಮನನ್ನು ವಿಶ್ವ ವ್ಯಾಪಕವೆಂದರೆ ಜೀವ ಪಾತ್ರೆಯೊಳಗಿನ ಪ್ರಸರಣದಂತೆ, ನಮ್ಮ ದೃಷ್ಟಿಗೆ ಪ್ರತ್ಯೇಕವೆಂದು ಕಂಡರೂ ನಿಜವಾಗಿ ನೋಡಿದರೆ ಪ್ರತ್ಯೇಕವಲ್ಲ, ಎರಡೂ ಒಂದೇ, ಈ ಏಕತ್ವವನ್ನು, ಜೀವನಿಗೂ ಪರಮಾತ್ಮನಿಗೂ ಇರುವ ಅದೈತ ಭಾವನೆಯನ್ನು ಅರಿಯುವುದೇ ಸ್ವಾತಂತ್ರ'
ನಮ್ಮ ಸುತ್ತಲಿನ ವ್ಯಕ್ತ ಪ್ರಪಂಚವು ಈ ರೀತಿ ನಿತ್ಯ ವಸ್ತು ವಿನ ಒಂದು ಪ್ರತಿಬಿಂಬ ಅಥವ ಅನುಭವಾತ್ಮಕ ತೆರೆಯ ಮೇಲಿನ ನಿತ್ಯ ವಸ್ತುವಿನ ಛಾಯೆ. ಇದನ್ನು ಮಾಯೆ ಎಂದು ಕರೆದಿದ್ದಾರೆ. ಮಾಯ ಎಂದರೆ ಭ್ರಮೆ ಎಂದು ಅನುವಾದ ಮಾಡುವದು ತಪ್ಪು. ಅದು ಶೂನ್ಯತೆಯಲ್ಲ. ನಿತ್ಯತೆಗೂ ಶೂನ್ಯತೆಗೂ ಮಧ್ಯೆ ಇರುವ ಒಂದು ಅವಸ್ಥಾ ವಿಶೇಷ, ಅದೊಂದು ಸಾಪೇಕ್ಷ ಅವಸ್ಥೆ ; ಪ್ರಾಯಶಃ ಸಾಪೇಕ್ಷತೆಯ ಭಾವನೆ “ ಮಾಯ ” ದ ಅರ್ಥಕ್ಕೆ ಬಹು ಸಮಾಸವೆಂದು ತೋರುತ್ತದೆ. ಹಾಗಾದರೆ ಈ ಪ್ರಪಂಚದಲ್ಲಿ ಒಳ್ಳೆಯದು ಕೆಟ್ಟದ್ದು ಎಂದರೇನು ? ಅದೆಲ್ಲ ಅಸ್ತಿತ್ವವಿಲ್ಲದ ಬರಿ ಭ್ರಮೆಯೆ ? ಕೇವಲ ಪ್ರತಿಬಿಂಬಗಳೇ ? ಅಂತ್ಯದಲ್ಲಿ ಏನೇ ಇರಲಿ ಈ ನಮ್ಮ ಅನುಭವ ಪ್ರಪಂಚದಲ್ಲಿ ಈ ನೈತಿಕ ಭಿನ್ನತೆಗೆ ಬೆಲೆಯು ಇದೆ. ಪ್ರಾಮುಖ್ಯತೆಯೂ ಇದೆ. ಎಂದಿನವರೆಗೆ ವ್ಯಕ್ತಿಗೊಂದು ವ್ಯಕ್ತಿತ್ವ ವಿರುವುದೋ ಅಲ್ಲಿಯವರೆಗೆ ಅವುಗಳಿಗೆ ಔಚಿತ್ಯವೂ ಇದೆ, ಬೆಲೆಯೂ ಇದೆ.
ಅನಂತ ವಸ್ತುವಿಗೊಂದು ಮಿತಿಯನ್ನು ಕಲ್ಪಿಸದೆ ಈ ಜೀವಕೋಟಿಗಳಿಗೆ ಅದರ ಕಲ್ಪನೆ ಯನ್ನು ಸಹ ಮಾಡಲು ಸಾಧ್ಯವಿಲ್ಲ. ಅದಕ್ಕೊಂದು ಪರಿಮಿತ, ವಾಸ್ತವಿಕ ರೂಪವನ್ನು ಮಾತ್ರ ಊಹಿಸಬಲ್ಲರು. ಆದರೆ ಈ ಪರಿಮಿತ ಕಲ್ಪನೆ ಅಥವ ರೂಪಗಳ ಅಂತ್ಯ ನಿಲುವು ಸಹ ಅನಂತದಲ್ಲಿ ಪರಮಾತ್ಮನಲ್ಲ, ಆದ್ದರಿಂದ ಧರ್ಮಭೇದ ಕೇವಲ ಸಾಪೇಕ್ಷ ವಿಷಯ ; ಪ್ರತಿಯೊಬ್ಬ ವ್ಯಕ್ತಿಗೂ ತನ್ನ ಮನೋಭಾವನೆಗನುಗುಣವಾದ ಧರ್ಮವನ್ನು ಕಲ್ಪನೆ ಮಾಡಿಕೊಳ್ಳಲು ಸ್ವಾತಂತ್ರವಿದೆ. * ವರ್ಣಾಶ್ರಮ ಧರ್ಮವು ಜನಾಂಗದ ಸಮಗ್ರ ಅನುಭವ ಪರಂಪರೆಯ ಮತ್ತು ವಿವೇಕದ ಕುರುಹು ಎಂದು ಮನಗಂಡು ಶಂಕರಾಚಾರ್ಯರು ಸಮಾಜ ವ್ಯವಸ್ಥೆಗೆ ವರ್ಣಾಶ್ರಮ ಧರ್ಮವನ್ನೇ ಒಪ್ಪಿದರು. ಆದರೆ ಯಾವ ಜಾತಿಯವನಾಗಲಿ ಎಲ್ಲರಿಗೂ ಉನ್ನತ ಜ್ಞಾನಸಾಧನೆಗೆ ಅಧಿಕಾರವಿದೆ ಎಂದು ಸಾಧಿಸಿದರು.
ಶಂಕರರ ದರ್ಶನ ಮತ್ತು ಮನೋಭಾವನೆಯಲ್ಲಿ ಪ್ರತಿಯೊಬ್ಬ ಮಾನವನ ಅಂತ್ಯ ಗುರಿಯ ಆತ್ಮಸ್ವಾತಂತ್ರಆದ್ದರಿಂದ ಆ ಸ್ವಾತಂತ್ರಸಾಧನೆಯಲ್ಲಿ ಪ್ರಪಂಚ ವ್ಯವಹಾರದಿಂದ ದೂರವಿರ ಬೇಕು. ಆದ್ದರಿಂದ ಪ್ರಪಂಚವೆಲ್ಲ ಮಿಥ್ಯ ಎಂಬ ನಿರಸನ ಮನೋಭಾವಕ್ಕೆ ಅವಕಾಶವಿದೆ; ಆತ್ಮ ತ್ಯಾಗ ಮತ್ತು ಅನಾಸಕ್ತಿಗೆ ಸತತವಾದ ಪ್ರಾಮುಖ್ಯತೆ ಕೊಡಲಾಗಿದೆ.
ಆದರೂ ಅದ್ಭುತ ಕಾರ್ಯಶಕ್ತಿಯಲ್ಲಿ ಮತ್ತು ಕಾರ್ಯವೈಶಾಲ್ಯದಲ್ಲಿ ಶಂಕರಾಚಾರ್ಯರು ಅಸಾಧಾರಣ ವ್ಯಕ್ತಿ. ಅಂಗಾಂಗಗಳನ್ನು ತನ್ನೊಳಗೆ ಮುದುರಿಕೊಳ್ಳುವ ಆಮೆಯಂತೆ ಹೆದರಿ