ಪುಟ:ಭಾರತ ದರ್ಶನ.djvu/೧೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೬೨

ಭಾರತ ದರ್ಶನ

-"ನನ್ನ ಮಾತೃಭೂಮಿಯಲ್ಲಿ ಅಧಿಕಾರವು ತನ್ನ ಪರಮಾವಧಿಯನ್ನು ಮಾರಿದೆ” ಎಂದು ಹೇಳಿದ್ದಾರೆ. ಅದೇ ಮಾರ್ಗದಲ್ಲಿ ಅವರು ಯೋಗಶಾಸ್ತ್ರಗಳನ್ನೂ ವೇದಾಂತವನ್ನೂ ವಿವರಿಸಿದರು, ಆ ರೀತಿ ವಿವರಣೆ ಕೊಡಲು ಅವರಿಗೆ ಅಧಿಕಾರವೂ ಇತ್ತು. ಆದರೆ ಅವು ಎಷ್ಟೇ ಅನುಭವ ಮತ್ತು ವಿಚಾರಪೂರ್ಣವಿದ್ದರೂ ಸಾಮಾನ್ಯ ಮಾನವನ ತಿಳಿವಿನ ಮಟ್ಟಕ್ಕೆ ಮಾರಿದ ವಿಷಯಗಳು. ನನ್ನು ಸಾಮಾನ್ಯ ಪ್ರಪಂಚದ ನಿತ್ಯ ಅನುಭವ ಮತ್ತು ತಿಳಿವಿಗೆ ತೀರ ಭಿನ್ನವಾದ ಅಧ್ಯಾತ್ಮಿಕ ಮತ್ತು ಮಾನಸಿಕ ಅನುಭವದ ಪ್ರಪಂಚ ಅದು. ಈ ಪ್ರಯತ್ನಗಳು ಮತ್ತು ಅನುಭವಗಳು ಭಾರತದಲ್ಲಿ ಮಾತ್ರ ಇವೆಯೆಂದಲ್ಲ. ಕ್ರೈಸ್ತ ಧರ್ಮಗುರುಗಳು, ಪರ್ಷಿಯದ ಸೂಫಿಗಳು ಮತ್ತು ಇನ್ನು ಅನೇಕರಲ್ಲಿ ಸಹ ಕಂಡು ಬಂದಿದೆ. “ ಈ ಎಲ್ಲ ಅನುಭವಗಳ ಸಮಾಪ ಹೋಲಿಕೆ ನೋಡಿದರೆ ಧಾರ್ಮಿಕ ಅನು ಭವದ ಮಹದ್ವಿಷಯಗಳು ವಿಶ್ವವ್ಯಾಪಕವೂ ಅನಿರತವೂ ಇವೆ. ದೇಶ ಮತ್ತು ಕಾಲಗಳ ರೂಪ ಭೇದ ಭಿನ್ನತೆಗಳಿದ್ದರೂ ಮಾನವ ಸ್ವಭಾವದಲ್ಲಿ ಒಂದು ಚಿರಸ್ಥಾಯಿಯಾದ ಐಕ್ಯತೆ ಇದೆ, ಅಥವ ಮಾನವ ಸ್ವಭಾವಕ್ಕಿಂತ ಆಳವಾಗಿ ತಾನೇ ಸ್ವತಃ ನೋಡಿದರೆ ಮಾನವತ್ವದ ರಚನೆಗೆ ಕಾರಣಭೂತವಾದ ಎಲ್ಲ ಮೂಲ ವಸ್ತುಗಳೂ ಒಂದೇ ಎಂದು ಸ್ಪಷ್ಟವಾಗುತ್ತದೆ” ಎಂದು ರೋಮರೊಲಾ ಹೇಳುತ್ತಾರೆ.
ಆದ್ದರಿಂದ ಯೋಗವು ವ್ಯಕ್ತಿಯ ಆಧ್ಯಾತ್ಮಿಕ ಹಿನ್ನೆಲೆಯ ಒಳನೋಟದ ಪ್ರಾಯೋಗಿಕ ಪದ್ಧತಿ, ಮತ್ತು ಅದರಿಂದ ಕೆಲವು ಮಾನಸಿಕ ಅನುಭವವನ್ನೂ ಸಂಯಮವನ್ನೂ ಪಡೆಯಬಹುದು. ಆಧುನಿಕ ಮನಶ್ಯಾಸ್ತ್ರಕ್ಕೆ ಇದರಿಂದ ಎಷ್ಟು ಪ್ರಯೋಜನವೋ ನಾನು ಹೇಳಲಾರೆ. ಆದರೆ ಸ್ವಲ್ಪ ಪ್ರಯತ್ನ ಮಾಡಿದರೆ ಪ್ರಯೋಜನವಿದೆ ಎಂದು ತೋರುತ್ತದೆ. ಅರವಿಂದಘೋಷರು ಯೋಗಶಾಸ್ತ್ರವನ್ನು ವಿವರಿಸುತ್ತ “ಎಲ್ಲ ರಾಜಯೋಗವೂ ಗ್ರಹಣಶಕ್ತಿ ಮತ್ತು ಅನುಭವವನ್ನು ಅವಲಂಬಿಸಿದೆ ; ನಮ್ಮ ಅಂತರ್ಗತ ಮೂಲವಸ್ತುಗಳನ್ನು , ಸಂಕೀರ್ಣಗಳನ್ನು, ಕಾರ್ಯಗಳನ್ನು, ಶಕ್ತಿಗಳನ್ನು, ಪ್ರತ್ಯೇಕಿಸಿ, ಪೃಥಕ್ಕರಣ ಮಾಡಿ, ಪುನರ್ಯೊಜಿಸಿ, ಮೊದಲು ದುಸ್ಸಾಧ್ಯವೆಂದು ತೋರಿದ ಕಾರ್ಯ ವನ್ನು ಸುಲಭಸಾಧ್ಯವೆಂದು ತೋರಿಸುವ ಒಂದು ಹೊಸ ಅದ್ಭುತ ಶಕ್ತಿಯನ್ನಾಗಿ ಅಣಿಗೊಳಿಸಲು ಅಥವ ನಿರ್ದಿಷ್ಟ ಆ೦ತರಿಕ ಅಭಿಯೋಗಗಳಿಂದ ಒಂದು ಸಾಮಾನ್ಯ ಸಂಘಟನ ಶಕ್ತಿಯನ್ನಾಗಿ ರೂಪಿಸಲು ಸಾಧ್ಯ” ಎಂದು ಹೇಳಿದ್ದಾರೆ.
ಇನ್ನೊಂದು ದರ್ಶನಮಾರ್ಗವೆಂದರೆ ಮಾಮಾಂಸ, ಇದು ವಿಧಿನಿರ್ಬಂಧವನ್ನು ಅವಲಂಬಿಸಿದೆ ಮತ್ತು ಬಹುದೈವತಾವಾದವನ್ನು ಪ್ರೋತ್ಸಾಹಿಸುತ್ತದೆ. ಲೋಕರೂಢಿಯಲ್ಲಿರುವ ಹಿಂದೂ ಧರ್ಮ ಮತ್ತು ಹಿಂದೂ ಧರ್ಮಶಾಸ್ತ್ರಗಳ ಮೇಲೆ, ಸದಾಚಾರ ಪದ್ಧತಿ ಅಥವ ಧರ್ಮಸೂತ್ರಗಳೆಂಬ ನಿಯಮಗಳ ಮೇಲೆ ಬಹಳ ಪರಿಣಾಮ ಮಾಡಿದೆ. ಹಿಂದೂಗಳ ಬಹುದೇವತಾವಾದವು ವಿಚಿತ್ರ ರೀತಿಯದು. ಏಕೆಂದರೆ, ದೇವರುಗಳು ಎಷ್ಟೇ ಶಕ್ತರಾದರೂ ಸೃಷ್ಟಿನಿಯಮದಲ್ಲಿ ಮನುಷ್ಯನಿಗಿಂತ ಕೆಳಮಟ್ಟದವರು. ಹಿಂದೂಗಳೂ ಬೌದ್ದರೂ ಇಬ್ಬರೂ ಮಾನವಜನ್ಮ ದೊಡ್ಡದು, ಆ ಜೀವವು ಆತ್ಮಸಾಕ್ಷಾತ್ಕಾರದ ಮಾರ್ಗವನ್ನು ಹಿಡಿದಿದೆ ಎಂದು ಭಾವಿಸುತ್ತಾರೆ. ಈ ಸ್ವಾತಂತ್ರವನ್ನು ಮತ್ತು ಆತ್ಮಸಾಕ್ಷಾತ್ಕಾರವನ್ನು ಪಡೆಯಬೇಕಾದರೆ ದೇವರುಗಳು ಸಹ ಮಾನವರಾಗಿ ಜನ್ಮತಾಳಲೇಬೇಕು. ಸಾಮಾನ್ಯವಾಗಿ ಆಚರಣೆಯಲ್ಲಿರುವ ಬಹುದೇವತಾವಾದಕ್ಕೆ ಈ ಭಾವನೆಯು ಬಹುದೂರ, ಶ್ರೇಷ್ಠ ಬುದ್ಧನಾಗಲು ಮಾನವನಿಗೆ ಮಾತ್ರ ಸಾಧ್ಯ ಎಂದು ಬೌದ್ಧರು ಹೇಳುತ್ತಾರೆ.
ಈ ದರ್ಶನಗಳಲ್ಲಿ ಕೊನೆಯದೇ ವೇದಾಂತದರ್ಶನ. ಇದು ಉಪನಿಷತ್ತುಗಳಿಂದ ಉಗಮವಾಗಿ ಅನೇಕ ರೂಪಗಳಲ್ಲಿ, ವಿವಿಧವಾಗಿ ಮುಂದುವರಿದರೂ ವಿಶ್ವದ ಏಕತ್ವವಾದದ ದರ್ಶನದ ತಳ ಹದಿಯ ಮೇಲೆಯೇ ನಿಂತು ನಡೆದಿದೆ. ಸಾಂಖ್ಯದರ್ಶನದ ಪುರುಷ ಮತ್ತು ಪ್ರಕೃತಿಗಳು ಸ್ವತಂತ್ರ ಭಿನ್ನ ವಸ್ತುಗಳಲ್ಲ ; ಒಂದೇ ವಸ್ತುವಿನ- ಪರಮಾತ್ಮನ ರೂಪಭೇದಗಳು. ಪೂರ್ವದ ವೇದಾಂತದ ತಳಹದಿಯಮೇಲೆಯೇ ಶಂಕರಾಚಾರ್ಯರು ತಮ್ಮ ಅದೈತ ವೇದಾಂತ ದರ್ಶನ ಪಂಥವನ್ನು ಕಟ್ಟಿದರು. ಇಂದಿನ ಹಿಂದೂ ಧರ್ಮದಲ್ಲಿ ಪ್ರಧಾನ ದಾರ್ಶನಿಕ ಪಂಥವೆಂದರೆ ಈ ಅದ್ವೈತ.