ಪುಟ:ಭಾರತ ದರ್ಶನ.djvu/೧೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಯುಗಾಂತರಗಳು

೧೬೧

ಇವೆಲ್ಲದರ ಫಲ ಇಂದ್ರಿಯ ನಿಗ್ರಹ; ಅನಂತರ ಧ್ಯಾನ ಮತ್ತು ಚಿಂತನ; ಅಂತ್ಯದಲ್ಲಿ ದೀರ್ಘ ಸಮಾಧಿ, ಸಮಾಧಿಯಿಂದ ವಿವಿಧ ಬಗೆಯ ಆತ್ಮಜ್ಞಾನವು ಲಭಿಸುತ್ತದೆ. ಯೋಗ ಮತ್ತು ವೇದಾಂತ ದರ್ಶನಗಳ ಆಧುನಿಕ ಆಚಾರ್ಯಪುರುಷನಾದ ಸ್ವಾಮಿ ವಿವೇಕಾನಂದರು ಯೋಗಶಾಸ್ತ್ರವು ಪ್ರಾಯೋಗಿಕವಿರಬೇಕೆಂದೂ, ಕಾರಣಬದ್ದವಿರಬೇಕೆಂದೂ ದೃಢಮಾಡಿಕೊಟ್ಟಿದ್ದಾರೆ. “ಈ ಯೋಗಗಳಲ್ಲಿ ಯಾವುದೂ ಕಾರಣರಹಿತವಿಲ್ಲ. ಪುರೋಹಿತನು ಯಾರೇ ಇರಲಿ ವಿಚಾರಶೂನ್ಯನಾಗಿ ಆತನಿಂದ ಮೋಸಹೋಗು” ಎಂದು ಯಾವ ಯೋಗವೂ ಹೇಳುವುದಿಲ್ಲ. ವಿಚಾರಶಕ್ತಿಯನ್ನು ಎಂದೂ ಬಿಡಬೇಡ, ಅದನ್ನೇ ಗಟ್ಟಿಯಾಗಿ ಹಿಡಿದುಕೊ” ಎಂದು ಪ್ರತಿಯೊಂದು ಯೋಗವೂ ಹೇಳುತ್ತದೆ. ಯೋಗ ಮತ್ತು ವೇದಾಂತದ ದೃಷ್ಟಿಗಳು ವೈಜ್ಞಾನಿಕ ದೃಷ್ಟಿಯನ್ನು ಬಹುಮಟ್ಟಿಗೆ ಹೋಲುತ್ತವೆಯಾದರೂ ಅವುಗಳ ಉಪಕರಣಗಳು ಬೇರೆ, ಆದ್ದರಿಂದ ಮೂಲವ್ಯತ್ಯಾಸಗಳು ಉದ್ಭವಿಸುತ್ತವೆ. ಯೋಗಶಾಸ್ತ್ರದ ಪ್ರಕಾರ “ಆತ್ಮವು ಬುದ್ಧಿಗೆ ಮಾತ್ರ ಪರಿಮಿತವಲ್ಲ. ಮತ್ತು ಭಾವನೆ ಎಂದರೆ ಕ್ರಿಯೆ ; ಕ್ರಿಯೆಯಿಂದಲೇ ಭಾವನೆಗೆ ಒಂದು ಮೌಲ್ಯ ಬರುವುದು” ಆತ್ಮ ಸ್ಫೂರ್ತಿ ಮತ್ತು ಆತ್ಮ ಜ್ಞಾನಕ್ಕೆ ಮಾನ್ಯತೆ ಇದೆ. ಆದರೆ ಅವುಗಳಿಂದ ಮೋಸ ಹೋಗಲು ಸಾಧ್ಯವಿಲ್ಲವೆ ? ವಿವೇಕಾನಂದರು ಆತ್ಮ ಸ್ಫೂರ್ತಿಯ ವಿಚಾರ ಬುದ್ದಿಗೆ ವಿರೋಧವಿರಬಾರದೆಂದು ಉತ್ತರ ಕೊಟ್ಟಿದಾರೆ. ವಿಚಾರ ಶಕ್ತಿಯ ವಿಕಸನವೇ ಆತ್ಮಸ್ಫೂರ್ತಿ. ಆತ್ಮಜ್ಞಾನದ ಮಾರ್ಗವೂ ವಿಚಾರಶಕ್ತಿಯ ಮೂಲಕ , ... ನಿಜವಾದ ಯಾವ ಸ್ಫೂರ್ತಿಯ ವಿಚಾರಶಕ್ತಿಗೆ ವಿರುದ್ಧ ವಿರಲಾರದು; ವಿರುದ್ಧವಾದರೆ ಅದು ಸ್ಫೂರ್ತಿಯೇ ಅಲ್ಲ.” ಮತ್ತು “ಆತ್ಮಸ್ಫೂರ್ತಿಯು ಆತ್ಮಕಲ್ಯಾಣಕ್ಕೆ ಮತ್ತು ವಿಶ್ವ ಕಲ್ಯಾಣಕ್ಕೆ ಸಹಾಯಕ ವಿರಬೇಕು, ಸ್ವಪ್ರತಿಷ್ಠೆಗೆ ಮತ್ತು ಸ್ವಾರ್ಥಸಾಧನೆಗೆ ಅಲ್ಲ; ಪೂರ್ಣ ನಿಸ್ವಾರ್ಥ ಲೋಕ ಕಲ್ಯಾಣವೇ ಸದಾ ಅದರ ಗುರಿ. ”
ಅಲ್ಲದೆ ಜ್ಞಾನದ ಮೂಲವು ಅನುಭವದಲ್ಲಿ ವಿಜ್ಞಾನಗಳಿಗೆ ಮತ್ತು ಬಾಹ್ಯ ಜ್ಞಾನಕ್ಕೆ ಅನ್ವಯಿಸುವ ಅನ್ವೇಷಣ ಮಾರ್ಗಗಳನ್ನೆ ಧರ್ಮಕ್ಕೂ ಉಪಯೋಗಿಸಬೇಕು. ಅಂತಹ ವಿಚಾರ ವಿಮರ್ಶೆಯಿಂದ ಒಂದು ಧರ್ಮವು ನಾಶವಾಗುವುದಾದರೆ ಆ ಧರ್ಮವು ಅಪ್ರಯೋಜಕ ಮತ್ತು ಒಂದು ಮೂಢ ನಂಬಿಕೆ, ಎಷ್ಟು ಬೇಗ ನಾಶವಾದರೆ ಅಷ್ಟು ಕ್ಷೇಮ.” “ವಿಚಾರ ಶಕ್ತಿಯ ದೃಷ್ಟಿಗೆ ಧರ್ಮಗಳು ಬದ್ಧವಲ್ಲ ಎಂದು ಹೇಳುವುದು ಅರ್ಥಶೂನ್ಯ . . . . . . ಯಾರೋ ಹೇಳಿದ್ದಾರೆಂಬ ಆಧಾರದ ಮೇಲೆ ಇಪ್ಪತ್ತು ಕೋಟಿ ದೇವರುಗಳಲ್ಲಿ ಕುರುಡು ನಂಬಿಕೆಯನ್ನು ತೋರಿಸುವ ಬದಲು ಮಾನವಕುಲವು ವಿಚಾರಪೂರ್ಣವಾಗಿ ನಿರೀಶ್ವರವಾದಿಯಾದರೂ ಒಳ್ಳೆಯದು. ಪ್ರಾಯಶಃ ಇಂದ್ರಿಯಾತೀತರಾಗಿ ಪರಲೋಕದ ಕಿರುನೋಟವನ್ನು ಅನುಭವಿಸಿದ ಧರ್ಮಸಂಸ್ಥಾಪಕರು ಕೆಲವರು ಇರಬಹುದು. ಆ ನೋಟ ನನಗೂ ಗೋಚರವಾದಾಗ ನಾವೂ ಅದನ್ನು ನಂಬೋಣ ; ಅಲ್ಲಿಯವರೆಗೆ ಸಾಧ್ಯವಿಲ್ಲ.” ವಿಚಾರಶಕ್ತಿ ಇದ್ದರೆ ಮಾತ್ರ ಸಾಲದು. ಅನೇಕ ವೇಳೆ ತಪ್ಪು ದಾರಿ ಹಿಡಿಯುತ್ತದೆ ಎಂದು ಹೇಳುತ್ತಾರೆ. ವಿಚಾರ ಶಕ್ತಿಯು ಅಷ್ಟು ದುರ್ಬಲವಾದರೆ ಪುರೋಹಿತವರ್ಗವು ಒಂದು ಉತ್ತಮ ಮಾರ್ಗ ದರ್ಶಕರ ಪಂಥವ೦ದು ಹೇಗೆ ಭಾವಿಸಬೇಕು ? * ವಿಚಾರವೇ ನನಗೆ ದಿಕ್ಕೂಚಿ ; ಏಕೆಂದರೆ ಎಷ್ಟ ದುರ್ಬಲವಿದ್ದರೂ ಸತ್ಯದ ಅರಿವು ದೊರೆಯಬೇಕಾದರೆ ವಿಚಾರಶಕ್ತಿಯಿಂದ ಮಾತ್ರ ನನಗೆ ಸಾಧ್ಯ . . . ಆದ್ದರಿಂದ ನಾವು ವಿಚಾರಮಾರ್ಗವನ್ನೇ ಅನುಸರಿಸಬೇಕು. ಮತ್ತು ವಿಚಾರ ಮಾರ್ಗದಲ್ಲಿ ನಡೆದು ಯಾವ ನಂಬಿಕೆಯೂ ಇಲ್ಲದ ಜನರನ್ನು ಕಂಡು ಸಹಾನುಭೂತಿ ತೋರಿಸಬೇಕು. ” ಎಂದು ವಿವೇಕಾನಂದರು ಹೇಳಿದ್ದಾರೆ. “ಈ ರಾಜಯೋಗದ ಅಭ್ಯಾಸದಲ್ಲಿ ಯಾವ ಶ್ರದ್ದೆ ಯೂ, ನಂಬಿಕೆಯೂ ಬೇಕಿಲ್ಲ. ಆತ್ಮಾನುಭವವಿಲ್ಲದೆ ಯಾವುದನ್ನೂ ನಂಬಬೇಡ.” ಎಂದಿದಾರೆ.

ವಿವೇಕಾನಂದರು ವಿಚಾರಶಕ್ತಿಗೆ ಮೇಲಿಂದ ಮೇಲೆ ಪ್ರಾಧಾನ್ಯ ಕೊಟ್ಟಿರುವುದಕ್ಕೆ ಮತ್ತು ಮೂಢ ನಂಬಿಕೆ ಯಾವುದನ್ನೂ ಒಪ್ಪದೆ ಇರುವುದಕ್ಕೆ ಮನಸಿನಸ್ವಾತಂತ್ರದಲ್ಲಿ ಅವರಿಗಿದ್ದ ದೃಢವಾದ ಅಪಾರ ವಿಶ್ವಾಸವೂ ಮತ್ತು ತಮ್ಮ ದೇಶದಲ್ಲಿ ಸ್ವತಃ ಕಂಡ ಅಧಿಕಾರದ ದುಷ್ಪರಿಣಾಮಗಳೂ ಕಾರಣ

11