ಪುಟ:ಭಾರತ ದರ್ಶನ.djvu/೧೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಯುಗಾಂತರಗಳು

೧೬೫

ಕರೆದೊಯ್ಯುವ ಯಾವುದೋ ಒಂದು ಸಾಮಾನ್ಯ ಮುಖಭಾವ ಮತ್ತು ಬಾಂಧವ್ಯ ಇದೆ ಎಂದು ಹನ ಗಂಡಿದ್ದರು. ಈ ಪರಸ್ಪರ ಸಮಾವೇಶನಕ್ಕೆ ಉತ್ತರ ದಕ್ಷಿಣ ದೇಶಗಳ ಭಾಷಾಭಿನ್ನತೆಯೂ ಅಡ್ಡಿ ಯಾಗಲಿಲ್ಲ. ಆಗಲೂ ಇಂದಿನ ಅನೈಕ್ಯತೆ ಇದ್ದೇ ಇತ್ತು; ಶಂಕರಾಚಾದ್ಯರಿಗೆ ಪೂರ್ಣ ತಿಳಿದೂ ಇತ್ತು. ಆ ಅನೈಕ್ಯತೆಯಲ್ಲಿ ರಾಷ್ಟ್ರೀಯ ಐಕ್ಯತೆ ಮತ್ತು ಭಾವನೆಯನ್ನು ಸಾಧಿಸಲು ಶಂಕರರು ನಿರ್ಧರಿಸಿದಂತ ತೋರುತ್ತದೆ. ಆತನ ಕಾರ್ಯವೆಲ್ಲ ಬುದ್ದಿ, ದರ್ಶನ ಮತ್ತು ಧರ್ಮ ಕ್ಷೇತ್ರಗಳಲ್ಲಿ, ದೇಶಾದ್ಯಂತವೂ ಸಾಮಾನ್ಯ ರಾಷ್ಟ್ರ ಭಾವನೆಯಲ್ಲಿ ಸಹ ಒಂದು ಐಕ್ಯತೆಯನ್ನುಂಟುಮಾಡಲು ಪ್ರಯತ್ನ ಮಾಡಿದರು. ಅನೇಕ ಸಿದ್ಧಾಂತಗಳನ್ನು ಕಿತ್ತೊಗೆದು ತಮ್ಮ ದಾರ್ಶನಿಕ ಕ್ಷೇತ್ರದಲ್ಲಿ ಪ್ರವೇಶಿಸಲು ಯಾರಿಗೆ ಯೋಗ್ಯತೆ ಇದೆಯೋ ಅವರಿಗೆಲ್ಲ ಪ್ರವೇಶವಿದೆಯೆಂದು ಬಾಗಿಲು ತೆರೆದರು. ಭಾರತದ ನಾಲ್ಕು ಮೂಲೆಗಳಲ್ಲಿ ಉತ್ತರ ದಕ್ಷಿಣ ಪೂರ್ವ ಪಶ್ಚಿಮ ದೇಶಗಳಲ್ಲಿ ಬೃಹನ್ಮಠಗಳನ್ನು ಸ್ಥಾಪಿಸಿ ಸಂಸ್ಕೃತಿಯಲ್ಲಿ ಭಾರತವು ಅಖಂಡ ವೆಂಬ ಭಾವನೆಗೆ ಬೆಂಬಲ ಕೊಡಬೇಕೆಂದಿದ್ದಂತೆ ಕಾಣುತ್ತದೆ. ಈ ನಾಲ್ಕು ಸ್ಥಳಗಳು ಅದಕ್ಕೂ ಮುಂಚೆಯೇ ಯಾತ್ರಾಸ್ಥಳಗಳಾಗಿದ್ದವು. ದೇಶಾದ್ಯಂತದಿಂದ ಯಾತ್ರಿಕರು ಬರುತ್ತಿದ್ದುದರಿಂದ ಈಗ ಅವುಗಳ ಪ್ರಾಶಸ್ತ್ರವು ಇನ್ನೂ ಹೆಚ್ಚಿತು.
ಪ್ರಾಚೀನ ಭಾರತೀಯರು ತಮ್ಮ ಯಾತ್ರಾ ಸ್ಥಳಗಳನ್ನು ಆರಿಸಿರುವುದರಲ್ಲೂ ಎಷ್ಟು ಉಚಿತ ವಿದೆ! ಪ್ರತಿಯೊಂದು ಸ್ಥಳವೂ ಮನಮೋಹಕ ಪ್ರಕೃತಿ ಸೌಂದಯ್ಯದ ನೆಲೆವೀಡು. ಕಾಶ್ಮೀರದಲ್ಲಿ ಹಿಮ ಮಂಡಿತ ಅಮರನಾಥನ ಗುಹೆ, ದಕ್ಷಿಣ ಭಾರತದ ಕೊನೆಯಂಚಿನ ರಾಮೇಶ್ವರದಲ್ಲಿ ಕನ್ಯಾಕುಮಾರಿಯ ದೇವಾಲಯ, ಹಿಮಾಲಯ ಪರ್ವತದ ತಪ್ಪಲಲ್ಲಿ ಪರ್ವತಾಗ್ರದಿಂದ ಅಗಾಧ ಗಿರಿಕಂದರಗಳಲ್ಲಿ ನುಸುಳಿ ಚಿಮ್ಮಿ ನೆಗೆದು ಸಿಟ್ಟಿಗೆದ್ದ ಸರ್ಪನಂತೆ ಹರಿದು ಭೋರಿಡುವ ಗಂಗಾತೀರದ ಕಾಶಿ ಹರಿದ್ವಾರಗಳು, ಗಂಗೆ ಯಮುನೆಯರಿಂದ ಸಂಗಮದಲ್ಲಿನ ಪ್ರಯಾಗ, ಯಮುನಾತಟದ ಕೃಷ್ಣ ಕಥೆಯ ಮಧುರೆ ಮತ್ತು ಬೃಂದಾವನಗಳು, ಗೌತಮನು ಜ್ಞಾನಜ್ಯೋತಿಯನ್ನು ಪಡೆದು ಬುದ್ದನಾದ ಬುದ್ಧಗಯೆ, ದಕ್ಷಿಣ ಭಾರತದ ಅನೇಕ ಯಾತ್ರಾ ಸ್ಥಳಗಳು, ಅನೇಕ ಪುರಾತನ ದೇವಾಲಯಗಳ ಜಗದ್ವಿಖ್ಯಾತ ಶಿಲ್ಪ ಸೌಂದಯ್ಯ ಮತ್ತು ಕಲಾಕೃತಿಗಳು. ಈ ಯಾತ್ರಾಸ್ಥಳಗಳಿಗೆ ಪ್ರವಾಸ ಹೋಗುವುದೆ ಪ್ರಾಚೀನ ಭಾರತ ಕಲೆಯ ಪರಿಚಯಕ್ಕೆ ಒಂದು ಮಹಾಯಾತ್ರೆ,
ಭಾರತದಲ್ಲಿ ಒಂದು ದೊಡ್ಡ ಮತವಾಗಿದ್ದ ಬೌದ್ಧ ಧರ್ಮದ ನಾಶಕ್ಕೆ ಶಂಕರರೇ ಮುಖ್ಯ ಕಾರಣ ರಾದರು. ಅನಂತರ ಬ್ರಾಹ್ಮಣಮತವು ಬೌದ್ಧ ಮತವನ್ನು ಪ್ರೇಮಾಲಿಂಗನದಿಂದ ತನ್ನ ಅನಂತ ಗರ್ಭದಲ್ಲಿ ಅಡಗಿಸಿಕೊಂಡಿತು. ಆದರೆ ಬೌದ್ಧ ಮತದ ಪ್ರಾಬಲ್ಯವು ಶಂಕರರ ಕಾಲದ ಹೊತ್ತಿಗೇನೆ ಕ್ಷೀಣಿಸಿತ್ತು. ಬ್ರಾಹ್ಮಣ ವಿರೋಧಿಗಳು ಕೆಲವರು ಶಂಕರರನ್ನು ಪ್ರಚ್ಛನ್ನ ಬೌದ್ದರೆಂದು ದೂಷಿಸಿ ದರು. ಆದರೆ ಶಂಕರಾಚಾರ್ಯರ ದರ್ಶನದ ಮೇಲೆ ಬೌದ್ಧ ದರ್ಶನದ ಪ್ರಭಾವ ಬಹಳಮಟ್ಟಿಗೆ ಆಗಿದೆ ಎನ್ನುವುದರಲ್ಲಿ ಅನುಮಾನವಿಲ್ಲ.

೧೫ ಭಾರತ ಮತ್ತು ಚೀನಾ


ಚೀನ ಮತ್ತು ಭಾರತ ದೇಶಗಳು ಹತ್ತಿರ ಬಂದು ಪರಸ್ಪರ ಬಾಂಧವ್ಯ ಬೆಳೆಸಿದ್ದು ಬೌದ್ದ ಮತ ದಿಂದ, ಅಶೋಕನ ಕಾಲಕ್ಕಿಂತ ಮುಂಚೆ ಅ೦ತಹ ಸಂಪರ್ಕ ಇತ್ತೊ ಇಲ್ಲವೊ ನಾನು ಹೇಳಲಾರೆ. ಚೀನಾ ರೇಷ್ಮೆ ಇಂಡಿಯಕ್ಕೆ ಬರುತ್ತಿತ್ತು. ಆದ್ದರಿಂದ ಪ್ರಾಯಶಃ ಸಮುದ್ರದ ಮೇಲೆ ಸ್ವಲ್ಪ ವ್ಯಾಪಾ ರವು ನಡೆಯುತ್ತ ಇದ್ದಿರಬಹುದು. ಅಲ್ಲದೆ ಕೆಲವು ಭೂಮಾರ್ಗಗಳೂ ಇದ್ದಿರಬಹುದು. ಇಂಡಿಯದ ಪೂರ್ವದ ಗಡಿನಾಡಿನ ಜನರಲ್ಲಿ ಮಂಗೋಲಿರ್ಯ ವರ್ಚಸ್ಸು ಕಾಣುತ್ತಿದೆ. ಆದ್ದರಿಂದ ಕೆಲವು ಜನರು ವಲಸೆ ಬಂದಿರಬಹುದು, ನೇಪಾಳದಲ್ಲಿಯೂ ಸ್ಪಷ್ಟವಾಗಿ ಎದ್ದು ತೋರುತ್ತದೆ. ಪ್ರಾಚೀನಕಾಲದ 'ಕಾಮರೂಪ' ಎಂದು ಪ್ರಖ್ಯಾತವಾದ ಅಸ್ಸಾಮ್ ಮತ್ತು ಬಂಗಾಳದಲ್ಲಿ ಅಲ್ಲಲ್ಲಿ ಕಾಣುತ್ತದೆ. ಐತಿಹಾಸಿಕ ದೃಷ್ಟಿಯಲ್ಲಿ ಜ್ಞಾನಪ್ರಸಾರದಿಂದ ಈ ಜ್ಯೋತಿರ್ಲತೆಯನ್ನು ಹಬ್ಬಿಸಿ