ವಿಷಯಕ್ಕೆ ಹೋಗು

ಪುಟ:ಭಾರತ ದರ್ಶನ.djvu/೧೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೧೬೬
ಭಾರತ ದರ್ಶನ

ದವರು ಅಶೋಕನ ಧರ್ಮ ಪ್ರಚಾರಕರು, ಚೀನಾದೇಶದಲ್ಲಿ ಬೌದ್ಧ ಧರ್ಮ ಪ್ರಸಾರವು ಹೆಚ್ಚಿದಂತೆ ಚೀನ ಇಂಡಿಯಗಳ ಮಧ್ಯೆ ಒಂದು ಸಾವಿರ ವರ್ಷಗಳ ಕಾಲ ಯಾತ್ರಿಕರು ಮತ್ತು ವಿದ್ವಾಂಸರುಗಳು ನಿರಂತರ ಸಂಸ್ಕೃತಿ ವಾಹಿನಿಯನ್ನು ಹರಿಸಿದರು. ಗೋಬಿ ಮರುಭೂಮಿಯಲ್ಲಿ ಮಧ್ಯ ಏಷ್ಯದ ಮೈದಾನಗಳಲ್ಲಿ ಮತ್ತು ಪರ್ವತಶ್ರೇಣಿಗಳಲ್ಲಿ, ಹಿಮಾಲಯ ಪರ್ವತದ ಕಣಿವೆಗಳಲ್ಲಿ ದುರ್ಗಮ್ಯವೂ, ಕಷ್ಟತಮವೂ, ಬಹುದೀರ್ಘವೂ ಆದ ಮಹಾಯಾತ್ರೆಗಳನ್ನು ಕೈಗೊಳ್ಳುತ್ತಿದ್ದರು. ಅನೇಕ ಭಾರತೀಯರೂ, ಚೀನೀ ಯರೂ ದಾರಿಯಲ್ಲೇ ಪ್ರಾಣಬಿಡುತ್ತಿದ್ದರು. ನೂರಕ್ಕೆ ತೊಂಭತ್ತರಷ್ಟು ಜನ ಯಾತ್ರಿಕರು ಈ ರೀತಿ ಪ್ರಾಣಬಿಡುತ್ತಿದ್ದರೆಂದು ಒಂದು ವರದಿ ಇದೆ. ಅನೇಕರು ತಮ್ಮ ನಿರ್ದೇಶ ಸ್ಥಳವನ್ನು ಮುಟ್ಟಿದ ಮೇಲೆ ಹಿಂದಿರುಗಲಿಲ್ಲ ; ಅಲ್ಲಿಯೇ ಮನೆಮಾಡಿಕೊಂಡು ನೆಲಸಿದರು. ಅಷ್ಟು ಸುರಕ್ಷಿತವಲ್ಲದಿದ್ದರೂ ಪ್ರಾಯಶಃ ಸ್ವಲ್ಪ ಹತ್ತಿರವಾದ ಇನ್ನೊಂದು ಮಾರ್ಗವಿತ್ತು. ಇದು ಇಂಡೋಚೀನಾ, ಜಾವಾ, ಸುಮಾತ್ರ. ಮಲಯ ಮತ್ತು ನಿಕೋಬಾರ್ ದ್ವೀಪಗಳ ಮೂಲಕ ಹಾಯ್ದು ಹೋಗುವ ಸಮುದ್ರ ಮಾರ್ಗ, ಈ ಮಾರ್ಗವೂ ತುಂಬ ಬಳಕೆಯಲ್ಲಿತ್ತು. ಅನೇಕವೇಳೆ ಯಾತ್ರಿಕರು ಭೂಮಾರ್ಗದಿಂದ ಹೊರಟು ಸಮುದ್ರ ಮಾರ್ಗದಿಂದ ಹಿಂತಿರುಗುತ್ತಿದ್ದರು. ಬೌದ್ಧಮತ ಮತ್ತು ಭಾರತೀಯ ಸಂಸ್ಕೃತಿ ಗಳು ಮಧ್ಯ ಏಷ್ಯದಲ್ಲಿ ಪೂರ್ಣವಾಗಿಯೂ ಮತ್ತು ಇಂಡೋಚೀನಾದ ಕೆಲವು ಭಾಗಗಳಲ್ಲೂ ಹರಡಿತ್ತು. ಈ ವಿಶಾಲವಾದ ಭೂಪ್ರದೇಶದಲ್ಲಿ ಅಲ್ಲಲ್ಲಿ ಅನೇಕ ಬೌದ್ಧ ಮಠಗಳೂ, ಜ್ಞಾನಕೇಂದ್ರಗಳೂ ಹರಡಿ ದ್ದವು. ಈ ಕೇಂದ್ರಗಳಲ್ಲಿ ಇಂಡಿಯ ಮತ್ತು ಚೀಣಾದೇಶಗಳ ಯಾತ್ರಿಕರಿಗೆ ಭೂಮಾರ್ಗದಲ್ಲಿ 'ಹೋಗಲಿ, ಸಮುದ್ರ ಮಾರ್ಗದಲ್ಲಿ ಹೋಗಲಿ ಸ್ವಾಗತವೂ, ಆಶ್ರಯವೂ ದೊರೆಯುತ್ತಿದ್ದವು. ಕೆಲವು ವೇಳೆ ಚೀನಾಯಾತ್ರಿಕರು ಇಂಡಿಯಕ್ಕೆ ಬರುವ ಮೊದಲು ಸಂಸ್ಕೃತವನ್ನು ಕಲಿಯಲು ಇಂಡೊ ನೇಷ್ಯದ ಯಾವುದಾದರೂ ಭಾರತೀಯ ಪಾಳೆಯದಲ್ಲಿ ಒಂದೆರಡು ತಿಂಗಳು ನಿಂತು ಸಂಸ್ಕೃತ ಕಲಿತು ಇಂಡಿಯಕ್ಕೆ ಬರುತ್ತಿದ್ದರು.
ಚೀನ ದೇಶಕ್ಕೆ ಮೊದಲು ಯಾತ್ರೆ ಹೋದ ಭಾರತೀಯ ವಿದ್ವಾಂಸನೆಂದರೆ ಕ್ರಿಸ್ತಶಕ ೬೭ ರಲ್ಲಿ ಮಿಂಗ್ತಿ ಚಕ್ರವರ್ತಿಯ ಕಾಲದಲ್ಲಿ ಪ್ರಾಯಶಃ ಆತನ ಆಹ್ವಾನದ ಮೇಲೆ ಹೋದ ಕಶ್ಯಪ ಮಾತಂಗ ನೆಂದು ಗೊತ್ತಾಗಿದೆ. ಲೋ ನದಿಯ ತೀರದಲ್ಲಿ ಲೋಯಾಂಗ್ ಊರಿನಲ್ಲಿ ಆತನು ಬಿಡಾರ ಮೂಡಿ ದನು. ಧರ್ಮರಕ್ಷನು ಆತನ ಜೊತೆಯಲ್ಲಿ ಹೋಗಿದ್ದನು. ಆಮೇಲೆ ಹೋದವರಲ್ಲಿ ಮುಖ್ಯ ವಿದ್ವಾಂಸರೆಂದರೆ ಬುದ್ದ ಭದ್ರ, ಜಿನಭದ್ರ, ಕುಮಾರಜೀವ, ಪರಮಾರ್ಥ, ಜಿನಗುಪ್ತ ಮತ್ತು ಬೋಧಿ ಧರ್ಮ, ಇವರಲ್ಲಿ ಪ್ರತಿಯೊಬ್ಬರ ಜೊತೆಗೂ ಸಂನ್ಯಾಸಿಗಳೂ ಶಿಷ್ಯವರ್ಗದವರೂ ಹೋಗುತ್ತಿದ್ದರು. ಸುಮಾರು ಕ್ರಿಸ್ತಶಕ ಆರನೆಯ ಶತಮಾನದಲ್ಲಿ ಲೋಯಾಂಗ್ ಪ್ರಾಂತ್ಯ ಒಂದರಲ್ಲಿ ೩೦೦೦ ಬೌದ್ಧ ಸಂನ್ಯಾಸಿಗಳೂ, ೧೦0೦0' ಭಾರತೀಯ ಸಂಸಾರಗಳೂ ಚೀನದಲ್ಲಿದ್ದರೆಂದು ತಿಳಿದು ಬಂದಿದೆ.
ಚೀನ ದೇಶಕ್ಕೆ ಹೋದ ಈ ಭಾರತೀಯ ವಿದ್ವಾಂಸರು ತಮ್ಮೊಂದಿಗೆ ಅನೇಕ ಸಂಸ್ಕೃತ ಗ್ರಂಥ ಗಳ ಹಸ್ತಪ್ರತಿಗಳನ್ನು ತಗೆದುಕೊಂಡು ಹೋದರು. ಅವುಗಳನ್ನು ಚೀನೀಭಾಷೆಗೆ ಅನುವಾದ ಮಾಡಿದರು, ಇನ್ನು ಕೆಲವರು ಚೀನೀಭಾಷೆಯಲ್ಲಿ ಸ್ವತಂತ್ರ ಗ್ರಂಥಗಳನ್ನು ಬರೆದರು. ಚೀನೀ ಭಾಷೆಗಳಲ್ಲಿ ಕಾವ್ಯಗಳನ್ನು ಸಹ ಬರೆದು ಚೀನೀಸಾಹಿತ್ಯವನ್ನು ಬೆಳೆಸಿದರು. ಕ್ರಿಸ್ತಶಕ ೪೦೧ ರಲ್ಲಿ ಚೀನಾ ದೇಶಕ್ಕೆ ಹೋದ ಕುಮಾರಜೀವನು ವಿಪುಲ ಗ್ರಂಥ ರಾಶಿಯನ್ನು ಬರೆದನು. ಈಗಲೂ ಸುಮಾರು ೪ ಗ್ರಂಥಗಳು ದೊರೆಯುತ್ತವೆ. ಆತನ ಭಾಷಾಶೈಲಿಯು ಬಹಳ ಉತ್ತಮವಿದೆಯೆಂದು ಹೇಳಲಾಗಿದೆ. ಭಾರತೀಯ ಮಹಾವಿದ್ವಾಂಸನಾದ ನಾಗಾರ್ಜುನನ ಜೀವನ ಚರಿತ್ರೆಯನ್ನು ಚೀನೀ ಭಾಷೆಗೆ ಈತನೇ ಅನುವಾದ ಮಾಡಿದನು. ಜಿನಗುಪ್ತನು ಕ್ರಿಸ್ತಶಕ ಆರನೇ ಶತಮಾನದ ಕೊನೆಯ ಭಾಗದಲ್ಲಿ ಚೀನ ದೇಶಕ್ಕೆ ಹೋದನು. ಆತನು ೩೭ ಸಂಸ್ಕೃತ ಗ್ರಂಥಗಳನ್ನು ಚೀನೀಭಾಷೆಗೆ ಅನು ವಾದ ಮಾಡಿರುತ್ತಾನೆ, ಆತನ ಮಹಾ ವಿದ್ವತ್ಪತಿಭೆಗೆ ಮುಗ್ಧನಾಗಿ ತಾಂಗ್ ವಂಶದ ಚಕ್ರವರ್ತಿಯು ಆತನ ಶಿಷ್ಯನಾದನು,