ಪುಟ:ಭಾರತ ದರ್ಶನ.djvu/೧೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೬೮

ಭಾರತ ದರ್ಶನ

ದ್ರೋಹವಿಲ್ಲ; ಅಪ್ರಮಾಣಿಕರಲ್ಲ ವಚನಭ್ರಷ್ಣರಲ್ಲ. ರಾಜ್ಯಾಡಳಿತ ವಿಧಿಯಲ್ಲಿ ಅದ್ಭುತ ನಿಷ್ಠ ಯಿದೆ, ಅವರ ನಡತೆಯು ಸದಾ ಸುಖಪ್ರದ-ಆಹ್ಲಾದಕರ ” ಎಂದಿದ್ದಾರೆ. ತುಂಟರು ದಂಗೆ ಕೋರರು ಬಹು ವಿರಳ ; ಒಂದೊಂದು ವೇಳೆ ಸ್ವಲ್ಪ ತ೦ಟಿಕೊಡುತ್ತಾರೆ. ರಾಜ್ಯಾಡಳಿತದಲ್ಲಿ ಉದಾರ ನೀತಿ ಇರುವುದರಿಂದ ಅಧಿಕಾರವರ್ಗವು ಸುಲಭವೂ ಸರಳವೂ ಇದೆ. ಜನರಿಗೆ ಒತ್ತಾಯದ ದುಡಿಮ ಇಲ್ಲ....... ಜನರ ಮೇಲೆ ತೆರಿಗೆಯ ಹೊರೆ ಹೆಚ್ಚು ಇಲ್ಲ, ವ್ಯಾಪಾರದಲ್ಲಿ ನಿರತರಾದ ವರ್ತಕರು ಸುಲಭವಾಗಿ ತಮ್ಮ ವ್ಯಾಪಾರ ಮುಗಿಸಿ ಹೋಗುತ್ತಾರೆ.” ಎಂದು ಮುಂತಾಗಿ ಹೇಳಿದ್ದಾನೆ.
ಹುಯನ್ ತ್ಸಾಂಗ್ ಬಂದ ಮಾರ್ಗದಲ್ಲಿಯೇ ಮಧ್ಯ ಏಷ್ಯದ ಮಾರ್ಗವಾಗಿ ಸ್ವದೇಶಕ್ಕೆ ಹಿಂದಿರು ಗಿದ. ಜೊತೆಯಲ್ಲಿ ಅನೇಕ ಗ್ರಂಥಗಳ ಹಸ್ತ ಪ್ರತಿಗಳನ್ನು ತಗೆದುಕೊಂಡು ಹೋದ. ಆತನ ಗ್ರಂಥ ಗಳಿಂದ ಬೌದ್ಧ ಧರ್ಮವು ಬೊರಸಾನ್ ಇರಾಕ್, ಮಾಸೂಲ್, ಮತ್ತು ಸಿರಿಯ ಗಡಿಯವರೆಗೆ ಬಹು ವಿಶಾಲವಾದ ಪ್ರದೇಶದಲ್ಲಿ ಹಬ್ಬಿ ಜನತೆಯ ಹೃದಯವನ್ನು ಸೂರೆಗೊಂಡಿತ್ತು ಎನ್ನುವ ಉಜ್ವಲ ಚಿತ್ರವು ಎದ್ದು ಕಾಣುತ್ತದೆ. ಆ ಕಾಲವು ಬೌದ್ಧ ಧರ್ಮವು ಅವನತಿಗಿಳಿಯುವ ಕಾಲ ಮತ್ತು ಇಸ್ಲಾಂ ಧರ್ಮವು ಅರೇಬಿಯದಲ್ಲಿ ಹುಟ್ಟಿ ಅನತಿ ಕಾಲದಲ್ಲಿ ಹಬ್ಬಿ ಹರಡುವ ಕಾಲ. ಇರಾಣಿ ಜನರ ವಿಷಯ ದಲ್ಲಿ ಆತನು ಹೇಳಿರುವ ಮಾತುಗಳು ವಿಸ್ಮಯವನ್ನುಂಟುಮಾಡುತ್ತವೆ ವಿದ್ವತ್ತಿಗೆ ಹೆಚ್ಚು ಬೆಲೆ ಕೊಡುವುದಿಲ್ಲ, ಆದರೆ ಕಲಾಕೃತಿನಿರ್ಮಾಣದಲ್ಲಿ ನಿರತರಾಗಿದ್ದಾರೆ. ಅವರು ನಿರ್ಮಾಣಮಾಡುವ ವಸ್ತುಗಳಿಗೆ ಸುತ್ತ ಮುತ್ತಲಿನ ದೇಶಗಳಲ್ಲಿ ತುಂಬ ಬೆಲೆ ಇದೆ.” ಎಂದು ಹೇಳುತ್ತಾನೆ.
ಇರಾನವು ಆಗಲೂ, ಮೊದಲೂ ಮತ್ತು ಈಚೆಗೆ ಸಹ ಜೀವನದ ಸೌಂದಯ್ಯ ಮತ್ತು ಗಾಂಭೀರ ವನ್ನು ಹೆಚ್ಚಿಸುವುದರಲ್ಲಿ ತನ್ನ ಸರ್ವಶಕ್ತಿಯನ್ನು ವಿನಿಯೋಗಿಸಿತು ; ಅದರ ಪ್ರಭಾವವು ಏಷ್ಯದ ಇತರ ರಾಷ್ಟ್ರಗಳಿಗೂ ಹರಡಿತು. ಗೋಬಿ ಮರುಭೂಮಿಯ ಅಂಚಿನಲ್ಲಿರುವ ತುರ್ಫಾನ್ ಎಂಬ ಸಣ್ಣ ರಾಜ್ಯದ ವಿಷಯವನ್ನು ಸ್ವಲ್ಪ ಹುಯೆನ್ ತ್ಸಾಂಗ್ ತಿಳಿಸುತ್ತಾನೆ. ಈಚೆಗೆ 'ಭೂಗರ್ಭ ಸಂಶೋಧಕರ ಪ್ರಯತ್ನದಿಂದ ಈ ದೇಶದ ವಿಷಯವಾಗಿ ಇನ್ನೂ ಕೆಲವು ವಿಷಯಗಳು ಬೆಳಕಿಗೆ ಬಂದಿವೆ. ಎಷ್ಟು ಸಂಸ್ಕೃತಿಗಳು ಅಲ್ಲಿಗೆ ಬಂದು, ಸಂಗಮವಾಗಿ, ಸಮರಸಗೊಂಡು, ಚೀನ, ಇಂಡಿಯ, ಪರ್ಶಿಯ ಮತ್ತು ಗ್ರೀಕ್ ಮೂಲಗಳಿಂದ ಸ್ಫೂರ್ತಿವೆತ್ತ ಒಂದು ಸರ್ವಾಂಗ ಸುಂದರ ಸಂಸ್ಕೃತಿಯನ್ನು ಸೃಷ್ಟಿ ಮಾಡಿತು. ಭಾಷೆ ಇಂಡಿಯ ಮತ್ತು ಇರಾನಿನಿಂದ ತೆಗೆದುಕೊಂಡ ಇಂಡೊ ಯುರೊಪಿರ್ಯ ಭಾಷೆಯಾಗಿತ್ತು. ಕೆಲವು ಸಂದರ್ಭಗಳಲ್ಲಿ ಯೂರೋಪ್ ಖಂಡದ ಕೆಲ್ವಿಕ್ ಭಾಷೆಯನ್ನು ಸಹ ಹೋಲುತ್ತಿತ್ತು, ಧರ್ಮ ಭಾರತೀಯ ಧರ್ಮವಾಗಿತ್ತು. ಜೀವನವಿಧಾನ ಚೀನೀಯರದಿತ್ತು. ಅವರ ಕಲಾಕೃತಿಗಳು ಇರಾಣ ದಿಂದ ಬಂದಿದ ವು. ಬುಧ ನ ವಿಗ್ರಹಗಳು, ಚಿತ್ರಗಳು, ದೇವರ ಮತ್ತು ದೇವತೆಗಳ ವಿಗ್ರಹಗಳು ಅತಿ ಸುಂದರವಿದ್ದವು, ಇ೦ಡಿಯ ದೇಶದ ಬಟ್ಟೆಗಳಿಂದ ಗ್ರೀಕರ ಕಿರೀಟಗಳಿಂದ ಅವುಗಳನ್ನು ಅಲಂಕಾರ ಮಾಡುತ್ತಿದ್ದರು. ಗೋಸೆ ಹೇಳುವಂತೆ ಈ ದೇವತೆಗಳ ವಿಗ್ರಹಗಳಲ್ಲಿ “ ಹಿಂದೂಗಳ ಕೋಮಲತೆ, ಗ್ರೀಕರ ವೈಭವ, ಚೀನೀಯರ ಮನಮೋಹಕತೆ ಸಮರಸವಾಗಿ ಸುಂದರವಾಗಿ ಮಿಳಿತವಾಗಿವೆ.”
ಹುಯನ್ ತ್ಸಾಂಗ್ ಸ್ವದೇಶಕ್ಕೆ ಮರಳಿದೊಡನೆ ಅವನ ಚಕ್ರವರ್ತಿಯೂ ಜನರೂ ಆದರದಿಂದ ಬರಮಾಡಿಕೊಂಡರು ಅದ್ಭುತ ಸ್ವಾಗತಕೊಟ್ಟರು. ತಾನು ತೆಗೆದುಕೊಂಡು ಹೋದ ಹಸ್ತ ಪ್ರತಿಗಳನ್ನು ಅನುವಾದ ಮಾಡುವುದಕ್ಕೂ, ತನ್ನ ಗ್ರಂಥವನ್ನು ಬರೆಯುವದಕ್ಕೂ ಆರಂಭಿಸಿದನು. ಅನೇಕ ವರ್ಷ ಗಳ ಮುಂಚೆ ಅವನು ತನ್ನ ಯಾತ್ರೆ ಹೊರಡುವ ಕಾಲದಲ್ಲಿ ಚಕ್ರವರ್ತಿ ತಾಂಗ್ ಒಂದು ಪಾನೀಯ ದಲ್ಲಿ ಹಿಡಿ ಮಣ್ಣನ್ನು ಹಾಕಿ - ಮಾತೃಭೂಮಿಯ ಹಿಡಿಮಣ್ಣು ಪರದೇಶದ ಹೊನ್ನಿನ ರಾಶಿಗಿಂತಲೂ ಶ್ರೇಷ್ಠ, ಆದ್ದರಿಂದ ಕುಡಿ' ಎಂದು ಹುಯನ್ ತ್ಸಾಂಗನಿಗೆ ಕೊಟ್ಟ ನೆಂದು ಒಂದು ಕತೆ ಇದೆ.
ಇಂಡಿಯಕ್ಕೆ ಹುಯನ್ ತ್ಸಾಂಗನ ಭೇಟಿ, ಚೀನ ಮತ್ತು ಇಂಡಿಯದಲ್ಲಿ ಆತನಿಗೆ ಇದ್ದ ಗೌರವಗಳ ಪರಿಣಾಮವಾಗಿ ಈ ಎರಡು ದೇಶಗಳ ರಾಜರುಗಳಿಗೆ ರಾಜಕೀಯ ಸಂಪರ್ಕ ಉಂಟಾಯಿತು. ಕನೂ ಜದ ಹರ್ಷವರ್ಧನನೂ, ಟಾಂಗ್ ಚಕ್ರವರ್ತಿಯೂ ಪರಸ್ಪರ ರಾಯಭಾರಿಗಳನ್ನು ಕಳುಹಿಸಿದರು,